Home ಕ್ಲಾಸಿಪೈಡ್ ಫೇಸ್ ಬುಕ್ ಬಳಸುತ್ತಿದ್ದೀರಲ್ಲ? ಸುರಕ್ಷತೆಯ ಬಗ್ಗೆ ಸ್ವಲ್ಪ ಗಮನ ಹರಿಸಿರಿ ನೀವು..

ಫೇಸ್ ಬುಕ್ ಬಳಸುತ್ತಿದ್ದೀರಲ್ಲ? ಸುರಕ್ಷತೆಯ ಬಗ್ಗೆ ಸ್ವಲ್ಪ ಗಮನ ಹರಿಸಿರಿ ನೀವು..

84
0
SHARE

ಬ್ಯಾಟರಿಯಿಂದ ವಿಷಾನಿಲ
ಇತ್ತೀಚೆಗೆ ಸ್ಮಾರ್ಟ್ ಫೋನ್ಗಳ ಬ್ಯಾಟರಿ ಸ್ಫೋಟಗೊಳ್ಳುವುದು, ಅದರಿಂದ ಹೊಗೆ ಹೊರಬರುವುದನ್ನು ಕೇಳಿದ್ದೇವೆ. ಇವು ಮಾತ್ರವೇ ಅಲ್ಲ. ಬ್ಯಾಟರಿಯಿಂದ ಹೊರಹೊಮ್ಮುವ ವಿಭಿನ್ನ ಅನಿಲಗಳು ಕೂಡ ಆರೋಗ್ಯಕ್ಕೆ ಹಾನಿಕಾರವಾಗಬಲ್ಲವು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಸ್ಮಾರ್ಟ್ ಸಾಧನಗಳಲ್ಲಿ ಬಳಸುವ ಲೀಥಿಯಂ ಅಯಾನ್ ಬ್ಯಾಟರಿಯಿಂದ ಕಾರ್ಬನ್ ಮೋನಾಕ್ಸೈಡ್ ಸೇರಿದಂತೆ 100ಕ್ಕೂ ಹೆಚ್ಚು ವಿಷಾಂಶವುಳ್ಳ ಅನಿಲ ಬಿಡುಗಡೆಯಾಗುತ್ತದೆಯೆಂದು ಅವರು ಗುರುತಿಸಿದ್ದಾರೆ. ಚೀನಾದ ಎನ್ಬಿಸಿ ಡಿಫೆನ್ಸ್ ಸಂಸ್ಥೆ ಮತ್ತು ತ್ಸಿಂಘುವಾ ಯುನಿವರ್ಸಿಟಿಯ ಸಂಶೋಧಕರ ಪ್ರಕಾರ, ಸಾಧನದ ಅತಿಯಾದ ಬಿಸಿಯಾಗುವಿಕೆ ಹಾಗೂ ಕೆಟ್ಟುಹೋಗಿರುವ ಚಾರ್ಜರ್ ಬಳಕೆಯ ಅಪಾಯದ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ.

ಫೇಸ್ ಬುಕ್ ಬಳಸುತ್ತಿದ್ದೀರಲ್ಲ? ಸುರಕ್ಷತೆಯ ಬಗ್ಗೆ ಸ್ವಲ್ಪ ಗಮನ ಹರಿಸಿರಿ ನೀವು..

ಈಗಿನ ದಿನಗಳಲ್ಲಿ ಮೊಬೈಲ್ ಫೋನ್ ಎಷ್ಟು ಅನಿವಾರ್ಯವಾಗಿ ಬಿಟ್ಟಿದೆಯೋ ಫೇಸ್ ಬುಕ್ ಎಂಬ ಸಾಮಾಜಿಕ ಜಾಲತಾಣವು ನಮ್ಮವರೊಂದಿಗೆ ಸದಾ ಸಂಪರ್ಕದಲ್ಲಿರುವ ಅನಿವಾರ್ಯ ಪರಿಕರವಾಗಿ ಬಿಟ್ಟಿದೆ. ಸ್ಮಾರ್ಟ್ ಫೋನ್ ಇರುವುದೇ ಫೇಸ್ ಬುಕ್ ಅಥವಾ ವಾಟ್ಸಪ್ಗಾಗಿ ಎಂಬ ಮಾತು ಕೂಡ ಚಾಲ್ತಿಯಲ್ಲಿದೆ. ಇವೆರಡು ಬೇಡವೆಂದಾದರೆ ಉತ್ತಮ ಬ್ಯಾಟರಿ ಲೈಫ್ ಇರುವ ಬೇಸಿಕ್ ಫೋನ್ ಸಾಕಾಗುತ್ತಿತ್ತಲ್ಲವೇ? ಫೇಸ್ ಬುಕ್ ಲಾಗಿನ್ ಆಗಿ ಬಳಸುತ್ತಿರುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಅದಲ್ಲಿ ಸೆಟ್ಟಿಂಗ್ಗಳಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡರೆ ನಿಮ್ಮ ಎಫ್ಬಿ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು ಎಂಬುದು ಹೆಚ್ಚಿನವರಿಗೆ ಗೊತ್ತಿರೋದಿಲ್ಲ.

ಅಂಥ ಕೆಲವು ಉಪಯುಕ್ತ ಟ್ರಿಕ್ಸ್ ಈ ಬಾರಿ ನಿಮಗಾಗಿ. ಫೇಸು ಬುಕ್ ಲಾಗಿನ್ ಆದ ಬಳಿಕ ಬಲ-ಮೇಲ್ಭಾಗದಲ್ಲಿ ತಲೆಕೆಳಗಾಗಿರುವ ತ್ರಿಕೋನಾಕಾರದ ಪುಟ್ಟ ಐಕಾನ್ ಕ್ಲಿಕ್ ಮಾಡಿದರೆ ಕಾಣಿಸಿಕೊಳ್ಳುವ ಡ್ರಾಪ್ ಡೌನ್ ಮೆನುವಿನಲ್ಲಿ ಸೆಟ್ಟಿಂಗ್ಸ್ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ, ಬಳಿಕ ಸೆಕ್ಯುರಿಟಿ ಎಂಬ ಉಪ-ಮೆನು ಕ್ಲಿಕ್ ಮಾಡಿ.

ಲಾಗಿನ್ ಆದ ಬಗ್ಗೆ ಎಚ್ಚರಿಕೆಗಳು

ಮೊದಲನೆಯದು ಲಾಗಿನ್ ಅಲಟ್ರ್ಸ್. ಎಡಿಟ್ ಬಟನ್ ಒತ್ತಿದ ಬಳಿಕ, ಇದನ್ನು ಸಕ್ರಿಯಗೊಳಿಸಿದರೆ, ನಿಮ್ಮ ಖಾತೆಯನ್ನು ಬೇರೆ ಯಾವುದೇ ಸ್ಥಳದಲ್ಲಿ ಯಾರಾದರೂ ಲಾಗಿನ್ ಆದರೆ ನಿಮಗೆ ತಕ್ಷಣ ಇಮೇಲ್ ಅಥವಾ ಫೋನ್ ನಂಬರ್ (ನೀಡಿದ್ದರೆ) ಅದರ ಮೂಲಕ ನೋಟಿಫಿಕೇಶನ್ ಬರುತ್ತದೆ. ಅಂದರೆ ಫೇಸ್ ಬುಕ್ಗೆ ಗುರುತಿಸಲು ಅಸಾಧ್ಯವಾದ ಬ್ರೌಸರಿನಲ್ಲಿ (ಉದಾಹರಣೆಗೆ ಬ್ರೌಸರಿನ ಇನ್ಕಾಗ್ನಿಟೋ/ ಸೀಕೇಟ್ ವಿಂಡೋ) ಲಾಗಿನ್ ಆದರೂ ಈ ಬಗ್ಗೆ ನಿಮಗೆ ಸೂಚನೆ ದೊರೆಯುತ್ತದೆ. ಇದು ನಿಮ್ಮ ಖಾತೆಗೆ ಯಾರಾದರೂ ಕನ್ನ ಹಾಕಿದರೇ ಎಂದು ತಿಳಿದುಕೊಳ್ಳಲು, ಆ ಮೂಲಕ ತಕ್ಷಣ ಎಚ್ಚೆತ್ತುಕೊಳ್ಳಲು ಅನುಕೂಲ ಮಾಡಿಕೊಡುತ್ತದೆ.

ಲಿಂಕ್ ಆದ ಆ್ಯಪ್ಗಳ ಪಾಸ್ವರ್ಡ್

ಬಳಿಕ ಅದರೆ ಕೆಳಗೆ ಆ್ಯಪ್ ಪಾಸ್ವರ್ಡ್ ಅಂತ ಮತ್ತೊಂದು ಆಯ್ಕೆ ಇದೆ. ಕೆಲವು ವೆಬ್ ತಾಣಗಳಿಗೆ ನೀವು ಫೇಸ್ ಬುಕ್ ಮೂಲಕ ನೋಂದಾಯಿಸಿಕೊಂಡು ಲಾಗಿನ್ ಆಗಿರುತ್ತೀರಿ. ಉದಾ: ಫ್ಲಿಪ್ಕಾರ್ಟ್, ಸ್ನ್ಯಾಪ್ ಡೀಲ್, ಅಮೆಜಾನ್ನಂಥ ಯಾವುದಾದರೂ ವಾಣಿಜ್ಯ ತಾಣಗಳಿಗೆ ಲಾಗಿನ್ ಆಗಲು ಫೇಸ್ ಬುಕ್ ಕ್ರೆಡೆನ್ಷಿಯಲ್ (ಯೂಸರ್ ನೇಮ್, ಪಾಸ್ವರ್ಡ್) ಸಂಯೋಜಿಸಿರುತ್ತೀರಿ. ನಿಮ್ಮ ಫೇಸ್ ಬುಕ್ ಪಾಸ್ ವಡ್ನ್ರ್ನೇ ಅದಕ್ಕೂ ಬಳಸಬೇಕಾಗುತ್ತದೆ. ಇದನ್ನು ತಡೆಯಲು, ಯಾವುದಾದರೂ ಆ್ಯಪ್ ಅಥವಾ ವೆಬ್ ತಾಣಕ್ಕೆ ಪ್ರತ್ಯೇಕವಾದ ಪಾಸ್ವರ್ಡ್ ಅಥವಾ ಅಪ್ರೂವಲ್ ಕೋಡ್ರ್ಗಳನ್ನು ಹೊಂದಿಸುವಂತಾಗಲು ನೀವು ಈ ಆಯ್ಕೆಯನ್ನು ಎನೇಬಲ್ ಮಾಡಿಕೊಳ್ಳಬಹುದು.

ನಂಬಿಕಸ್ಥ ಸ್ನೇಹಿತರು

ಯುವರ್ ಟ್ರಸ್ಟ್ಡ್ ಕಾನ್ಟ್ಯಾಕ್ಸ್ ಎಂಬ ವಿಭಾಗವೊಂದಿದೆ. ಆಕಸ್ಮಿಕವಾಗಿ ನಿಮ್ಮ ಖಾತೆ ಲಾಕ್ ಆದರೆ, ಲಾಗೌಟ್ ಆದರೆ, ಪಾಸ್ವರ್ಡ್ ಮರೆತರೆ, ನಿಮ್ಮ ಫೇಸ್ ಬುಕ್ ಖಾತೆಯನ್ನು ಮರಳಿ ಪಡೆಯಲು ಈ ವ್ಯಕ್ತಿಗಳನ್ನು ನೀವು ಸಂಪರ್ಕಿಸಬಹುದು. ಮೂರರಿಂದ 5 ಮಂದಿಯನ್ನು ನಿಮ್ಮ ನಂಬಿಕಸ್ಥರ ಪಟ್ಟಿಗೆ ಸೇರಿಸಿಕೊಂಡರೆ, ಪಾಸ್ವರ್ಡ್ ರೀಸೆಟ್ ಮಾಡುವ ಸಮಯದಲ್ಲಿ ಅವರೆಲ್ಲರಿಗೆ ಫೇಸ್ ಬುಕ್ನಿಂದ ಕೋಡ್ ಹೋಗಿರುತ್ತದೆ. ನಂತರ ಅವರಿಗೆ ನೀವು ಕರೆ ಮಾಡಿ, ಅವರಿಂದ ಆ ಕೋಡ್ ಪಡೆದುಕೊಂಡು ನಿಮ್ಮ ಖಾತೆಗೆ ಮರಳಿ ಪ್ರವೇಶಿಸಬಹುದು. ಇದಕ್ಕಾಗಿ ಫೋನ್ ನಂಬರ್ ಇರುವ ಸ್ನೇಹಿತರನ್ನೇ ನೀವು ಆಯ್ಕೆ ಮಾಡಿಕೊಳ್ಳಬಹುದು ಒಳಿತು. ಲಾಗಿನ್ ಆಗಲು ವಿಫಲವಾದಾಗ, ಫಾರ್ಗಾಟ್ ಯುವರ್ ಪಾಸ್ವರ್ಡ ಕ್ಲಿಕ್ ಮಾಡಿ. ನೀವು ಯಾವ ಇಮೇಲ್ ವಿಳಾಸ, ಫೋನ್ ನಂಬರ್ ಕೊಟ್ಟಿದ್ದೀರೆಂಬುದು ನೆನಪಿಲ್ಲದಿದ್ದರೆ,? ಎಂದಿರುವಲ್ಲಿ ಕ್ಲಿಕ್ ಮಾಡಿದಾಗ, ಕಾಣಿಸಿಕೊಳ್ಳುತ್ತದೆ. ಕ್ಲಿಕ್ ಮಾಡಿ.ಅವರ ಪೂರ್ಣ ಹೆಸರನ್ನು ಟೈಪ್ ಮಾಡಿ. ಅಲ್ಲೇ ಕೆಲವೊಂದು ಸೂಚನೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಹೊಸದೊಂದು ಯುಆರ್ಎಲ್ ಕಾಣಿಸುತ್ತದೆ. ನಿಮ್ಮ ನಂಬಿಗಸ್ಥ ಸ್ನೇಹಿತರಿಗೆ ಮಾತ್ರ ಈ ಯುಆರ್ಎಲ್ ನಲ್ಲಿ ಕೋಡ್ ಗೋಚರಿಸುತ್ತದೆ. ಸ್ನೇಹಿತರಿಗೆ ಕರೆ ಮಾಡಿ, ಕೋಡ್ ತಿಳಿದುಕೊಳ್ಳಿ.

ವಿಶ್ವಸನೀಯ ಸಾಧನ/ಬ್ರೌಸರ್ಗಳು

ಸೆಕ್ಯುರಿಟಿ ಸೆಟ್ಟಿಂಗ್ಸ್ನಲ್ಲಿ ಕೆಳಗಡೆ ಅಂತ ಬರೆದಿರುತ್ತದೆ. ಈ ಸಾಧನಗಳ ಮೂಲಕ ಫೇಸ್ ಬುಕ್ಗೆ ಲಾಗಿನ್ ಆಗಬೇಕಿದ್ದರೆ ನೀವದನ್ನು ಮತ್ತೊಮ್ಮೆ ದೃಢೀಕರಿಸಬೇಕಾಗಿರುವುದಿಲ್ಲ. ತೀರಾ ಇತ್ತೀಚೆಗೆ ಲಾಗಿನ್ ಆದವುಗಳನ್ನು (ಬ್ರೌಸರ ಅಥವಾ ಆ್ಯಪ್) ಹೊರತುಪಡಿಸಿ, ನೀವು ಮರೆತಿರುವ ಇತರ ಸಾಧನಗಳನ್ನು ನೀವು ಬಟನ್ ಒತ್ತುವ ಮೂಲಕ ತೆಗೆದುಬಿಡಬಹುದು.

ಎಲ್ಲೆಲ್ಲಾ ಲಾಗಿನ್ ಆಗಿದ್ದೀರಿ..?

ಮುಂದಿನದು ಅಂತ. ಅಲ್ಲಿ ಹೋದರೆ, ಎಲ್ಲ ಆ್ಯಕ್ಟಿವಿಟಿಗಳನ್ನು ಕೊನೆಗೊಳಿಸುವ ಆಯ್ಕೆಯೂ ಇರುತ್ತದೆ, ಎಲ್ಲಿ, ಯಾವಾಗ ಫೇಸ್ ಬುಕ್ ಲಾಗಿನ್ ಆಗಿದ್ದೀರಿ ಅಂತನೂ ಅಲ್ಲೇ ತೋರಿಸಲಾಗುತ್ತದೆ. ನಿಮಗೆ ಸಂದೇಹವಿದ್ದುದನ್ನು ನೋಡಿ ಕ್ಲಿಕ್ ಮಾಡಬಹುದು, ಬೇಕಾದಾಗ ಪುನಃ ಲಾಗಿನ್ ಆದರಾಯಿತು.

ನಿಮ್ಮ ನಂತರ ನಿಮ್ಮ ಖಾತೆ ಯಾರಿಗೆ?

ಮುಖ್ಯವಾದದ್ದು ಇನ್ನೊಂದಿದೆ. ಅಂತ. ಅಂದರೆ ನಾವು ಕಾಲವಾದ ಬಳಿಕ ನಮ್ಮ ಖಾತೆಯನ್ನು ಯಾರು ನಿಭಾಯಿಸಬೇಕೇ ಬೇಡವೇ ಎಂದು ತೀರ್ಮಾನಿಸಿಕೊಂಡು, ಬೇಕೂಂತಾದರೆ, ಅದನ್ನು ಯಾರಿಗೆ ಸೇರಿದ್ದು ಅಂತ ವಿಲ್ ಬರೆದು ಬಿಡಬಹುದು (ಉಯಿಲು). ನಿಮ್ಮ ಸ್ನೇಹಿತರ ಅಥವಾ ಫೇಸ್ ಬುಕ್ನಲ್ಲಿರುವ ಕುಟುಂಬಿಕರ ಪಟ್ಟಿಯಿಂದ ವಿಶ್ವಾಸಾರ್ಹರನ್ನು ಸೇರಿಸಿಕೊಳ್ಳುವ ಆಯ್ಕೆ ಇಲ್ಲಿರುತ್ತದೆ. ಇಲ್ಲಿ ಹೆಸರು ಸೇರಿಸಿದವರಿಗೆ ನಿಮ್ಮ ಖಾತೆವಸೀಮಿತ ಅವಕಾಶವಿರುತ್ತದೆ. ಅಂದರೆ, ಹೊಸ ಫ್ರೆಂಡ್ ರಿಕ್ವೆಸ್ಟ್ಗಳನ್ನು ಒಪ್ಪಿಕೊಳ್ಳುವ, ಟೈಮ್ ಲೈನ್ನಲ್ಲಿ ಯಾವುದಾರೂ ಪೋಸ್ಟ್ ಅನ್ನು ಪಿನ್ ಮಾಡಿಡುವ, ಪ್ರೋಫೈಲ್ ಚಿತ್ರ ಬದಲಾಯಿಸುವ ಅವಕಾಶ ಮಾತ್ರ ಇರುತ್ತದೆ. ನಿಮ್ಮ ಪರವಾಗಿ ಪೋಸ್ಟ್ ಮಾಡಲು ಅನುಮತಿ ಇರುವುದಿಲ್ಲ ಎಂಬುದು ನೆನಪಿರಲಿ.
ಉಸಾಬರಿ ಬೇಡವೇ?
ಕೊನೆಯಾದಾಗಿ, ಎಂಬ ಆಯ್ಕೆ. ಸ್ವಲ್ಪ ಕಾಲ ಫೇಸ್ ಬುಕ್ನಿಂದ ವಿರಮಿಸಲು ಮತ್ತು ನಿಮ್ಮ ಎಲ್ಲ ಸ್ನೇಹಿತರಿಗೆ ನೀವು ಫೇಸ್ ಬುಕ್ನಲ್ಲಿ ಕಾಣಿಸಿಕೊಳ್ಳದಂತಿರಲು ಫೇಸ್ ಬುಕ್ ಕೊಟ್ಟಿರುವ ಆಯ್ಕೆಯಿದು. ಮನಸ್ಸಾದಾಗ ಫೇಸ್ ಬುಕ್ ಗೆ ವಾಪಸಾಗಲು ಎಂದಿನಂತೇ ಲಾಗಿನ್ ಆದರೆ ಸಾಕಾಗುತ್ತದೆ.

LEAVE A REPLY

Please enter your comment!
Please enter your name here