Home ಕ್ಲಾಸಿಪೈಡ್ ಹಳ್ಳಿ ಹುಡುಗ 11 ಚಿನ್ನದ ಪದಕಗಳ ಸರದಾರ

ಹಳ್ಳಿ ಹುಡುಗ 11 ಚಿನ್ನದ ಪದಕಗಳ ಸರದಾರ

47
0
SHARE

ಬಡ ಕುಟುಂಬದಿಂದ ಬಂದಂತಹ ಕೃಷಿಕನ ಮಗ ರಘುವೀರ ಈಗ 11 ಚಿನ್ನದ ಪದಕಗಳನ್ನು ಪಡೆದ ಸರದಾರ ಎನಿಸಿದ್ದಾನೆ. 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತು ಸಾಧನೆ ಮಾಡಿದ ರಘುವೀರ್ ಬೆಂಗಳೂರು ಕೃಷಿ ವಿ.ವಿ ಕ್ಯಾಂಪಿಸ್ ಜಿಕೆವಿಕೆಯಲ್ಲಿ ಸೋಮವಾರ ನಡೆದ 51ನೇ ಘಟಿಕೋತ್ಸವದಲ್ಲಿ ನಾನಾ ವಿಭಾಗಗಳಲ್ಲಿ ಅತ್ಯಧಿಕ ಅಂಕ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಲಾಯಿತು.

ಇವರ ಪೈಕಿ ಬಿಎಸ್ಸಿ ಕೃಷಿ ವಿಭಾಗದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಎಂ.ರಘುವೀರ್ ಸಾಧನೆಗೆ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಕಿವಿಗಡಚುಕ್ಕುವ ಕರತಾಡನ ಮೂಲಕ ಮೆಚ್ಚುಗೆಯ ಮಹಾಪೂರ ದೊರೆಯಿತು. ರಘುವೀರ್ ಸಾಧನೆಗೆ ಸ್ವತಃ ಕೃಷಿ ಸಚಿವ, ವಿವಿ ಕುಲಪತಿ ಹಾಗೂ ಕೇಂದ್ರ ಸರಕಾರದ ಕೃಷಿ ಸಂಶೋಧನಾ ಸಚಿವಾಲಯದ ಕಾರ್ಯದರ್ಶಿಯವರು ಮೆಚ್ಚುಗೆ ವ್ಯಕ್ತಪಡಿಸಿ ಮುಂದೆಯೂ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಬೆನ್ನು ತಟ್ಟಿದರು.

ವಿಶ್ವವಿದ್ಯಾಲಯ ವ್ಯಾಪ್ತಿಯ ಮಂಡ್ಯದ ವಿ.ಸಿ.ಫಾರ್ಮ ಕೃಷಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿರುವ ರಘುವೀರ್, ಈ ಹಿಂದಿನ ಹತ್ತು ಚಿನ್ನದ ಪದಕಗಳ ದಾಖಲೆಯನ್ನು ಮುರಿದರು. ಸದ್ಯ ರಘುವೀರ್ ಧಾರವಾಡ ಕೃಷಿ ವಿವಿಯಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದಾನೆ. ರಘುವೀರ್ ಜತೆಗೆ ಬಿ.ಆರತಿ ಏಳು ಚಿನ್ನದ ಪದಕಗಳು, ಸಿ. ಪ್ರೀತಿ ಹಾಗೂ ವೈ.ಸಿ. ಅರ್ಚನಾ ತಲಾ ಆರು ಚಿನ್ನದ ಪದಕಗಳನ್ನು ಪಡೆದುಕೊಂಡರು. ಕಳೆದೆರಡು ವರ್ಷಗಳಿಂದ ಹೊರ ರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಚಿನ್ನದ ಪದಕಗಳನ್ನು ಪಡೆದಿದ್ದು, ಈ ವರ್ಷ ರಾಜ್ಯದವರೇ ಹೆಚ್ಚು ಪದಕಗಳನ್ನು ಪಡೆದಿದ್ದಾರೆ.

ಕನ್ನಡ ಮಾಧ್ಯಮ, ಗ್ರಾಮೀಣ ಪ್ರತಿಭೆ
ಎಂ. ರಘುವೀರ್ ಅಪ್ಪಟ ಗ್ರಾಮೀಣ ಪ್ರತಿಭೆ. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಹನೂರು ಹೋಬಳಿಯ ಕುಗ್ರಾಮ ನಂಜೇ ಒಡೆಯರ್ ದೊಡ್ಡಿಯ ಮಾದಪ್ಪ, ಭಾಗ್ಯಮ್ಮರ ಪುತ್ರ. 1-5ನೇ ತರಗತಿ ವರೆಗೆ ಸ್ವಗ್ರಾಮದ ಸರಕಾರಿ ಶಾಲೆಯಲ್ಲೇ ವ್ಯಾಸಂಗ ಮಾಡಿದರು. 6-8ರ ವರೆಗೆ ಬೈರನತ್ತ ಗ್ರಾಮದಲ್ಲಿ ಹಾಗೂ ಎಸ್ಎಸ್ಎಲ್ಸಿಯನ್ನು ಮಣ್ಣಗಳ್ಳಿಯಲ್ಲಿ ಪೂರೈಸಿದರು. ಪಿಯುಸಿಯಲ್ಲಿ ಇಂಗ್ಲಿಷ್ ಕಲಿತು ನಂತರ ವಿ.ಸಿ.ಫಾಮ್ರ್ನಲ್ಲಿ ಬಿಎಸ್ಸಿಗೆ ಸೇರಿದರು.

ಸಾಧನೆಗೆ ತಾಯಿಯ ತ್ಯಾಗ ಕಾರಣ
ಬಿಎಸ್ಸಿ ಕೃಷಿ ಸ್ನಾತಕ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಬಾಚಿಕೊಂಡಿರುವ ಸಿ. ಪ್ರೀತಿ ಬೆಂಗಳೂರಿನ ಬನಶಂಕರಿ ನಿವಾಸಿ. ಚಿಂತಾಮಣಿಯ ರೇಷ್ಮೆ ಕೃಷಿ ಕಾಲೇಜಿನ ವಿದ್ಯಾರ್ಥಿನಿಯಾದ ಈಕೆ ಕೋರ್ಸ್ ಸೇರುವ ವೇಳೆ ಥೈರಾಯ್ಡ್ಗೆ ಕಾಯಿಲೆಗೆ ತುತ್ತಾಗಿದ್ದರು. ಸೀಟು ಸಿಕ್ಕರೂ ವ್ಯಾಸಂಗ ಮಾಡಲು ಸಾಧ್ಯವಾಗಲಿಲ್ಲ. ಆದರೂ ಛಲದಿಂದ ಕಾಯಿಲೆ ಗೆದ್ದು, ಸಾಧನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here