Home ಕ್ಲಾಸಿಪೈಡ್ 87 ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ಪದವೀಧರ!

87 ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ಪದವೀಧರ!

26
0
SHARE

87 ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ಪದವೀಧರ!

ಒಳ್ಳೆಯ ನೌಕರಿ ಸೇರಬೇಕೆಂಬ ಹಠದಲ್ಲಿ ಈ ಪದವೀಧರ ಎದುರಿಸಿದ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಖ್ಯೆ 87!
ಈ ಪೈಕಿ 13ರಲ್ಲಿ ಯಶಸ್ಸು ಕಂಡು, ಯಾವ ನೌಕರಿಗೆ ಹೋಗಬೇಕೆಂಬ ಆಯ್ಕೆ ಸ್ವಾತಂತ್ರ್ಯವನ್ನು ತನ್ನಲ್ಲಿಯೇ ಇಟ್ಟುಕೊಂಡು ಸದ್ಯ ಪಿಎಸ್ಐ ಆಗಿ ಕಾರ್ಯ ನಿರ್ವಹಿಸಲು ಸನ್ನದ್ಧರಾಗಿರುವ 30 ವರ್ಷದ ಜೆ. ರಾಜೇಂದ್ರ ಅವರ ಉದ್ಯೋಗದ ಬೇಟೆ, ಸ್ಪರ್ಧಾತ್ಮಕ ಪರೀಕ್ಷೆಯ ಹಂಬಲ ಇನ್ನೂ ತೀರಿಲ್ಲ. ಕೆಎಎಸ್-ಐಎಎಸ್ ಕನಸನ್ನು ಒಡಲಲ್ಲಿ ಇಟ್ಟುಕೊಂಡೇ ಸದ್ಯಕ್ಕೆ ಖಾಕಿ ಧರಿಸುತ್ತಿರುವ ಜೆ.ರಾಜೇಂದ್ರ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಕೆ. ಯಡತೊರೆಯವರು.

ಸಿವಿಲ್ ಪೊಲೀಸ್ ಸಬ್ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿ, ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಕಳೆದ 53 ವಾರದಿಂದ ರಾಜೇಂದ್ರ ಪಡೆಯುತ್ತಿದ್ದ ತರಬೇತಿ ಶನಿವಾರ ಪೂರ್ಣಗೊಂಡಿದೆ. ಈಗ ಕರ್ತವ್ಯಕ್ಕೆ ಹಾಜರಾಗುತ್ತಿರುವ ಅವರು ಅಪ್ಪಟ್ಟ ಗ್ರಾಮೀಣ ಪ್ರತಿಭೆ. ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ಎಚ್.ಡಿ.ಕೋಟೆಯಲ್ಲಿ ಶಿಕ್ಷಣ. ಬಡತನದ ನಡುವೆ, ಸಹೋದರನ ಬೆಂಬಲದಿಂದ ಬಿಬಿಎಂ ವ್ಯಾಸಂಗಕ್ಕಾಗಿ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದರು.

ಸ್ನೇಹಿತನ ಸವಾಲ್
ಯಾವುದಾದರೂ ಸರಕಾರಿ ಕೆಲಸ ಸಿಕ್ಕರೆ ಸಾಕು ಎಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದರು. ಜತೆಯಲ್ಲಿದ್ದ ಸ್ನೇಹಿತನೊಬ್ಬ “ಎಸ್ಎಸ್ಎಲ್ಸಿ, ಪಿಯುಸಿ ಅರ್ಹತೆಯ ಸರಕಾರಿ ಕೆಲಸಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದಕ್ಕಿಂತ ಧೈರ್ಯವಿದ್ದರೆ ಪದವಿ ಅರ್ಹತೆಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಯಶಸ್ವಿಯಾಗು ನೋಡೋಣ,” ಎಂದು ಹಾಕಿದ ಸವಾಲು, ರಾಜೇಂದ್ರ ಅವರ ಶೈಕ್ಷಣಿಕ ದಿಕ್ಕನ್ನೇ ಬದಲಿಸಿತು.

ಪದವಿ ಅರ್ಹತೆಯ ಪೊಲೀಸ್ ಇಲಾಖೆ, ರೈಲ್ವೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಬ್ಯಾಂಕ್ ಸೇರಿದಂತೆ ಹಲವು ಸರಕಾರಿ ವಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಆರಂಭಿಸಿದರು. ಆದರೆ ಬರಿಗೈಯಲ್ಲಿ ಈ ಕೆಲಸ ಸಾಧ್ಯವಿಲ್ಲ ಎಂಬುದನ್ನು ಅರಿತು ಪಿಯುಸಿ ವಿದ್ಯಾರ್ಹತೆಗೆ ಸಿಕ್ಕ ಪೊಲೀಸ್ ಪೇದೆಯ ಕೆಲಸ ಗಿಟ್ಟಿಸಿಕೊಂಡು ವೃತ್ತಿ ಜೀವನ ಆರಂಭಿಸಿದರು. ಕೆಲಸದೊಂದಿಗೆ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ಧತೆ ನಡೆಸುತ್ತಿದ್ದರು.

ತರಬೇತುದಾರರಾಗಿ ಸೇವೆ:
ಮೈಸೂರಿನ ಜ್ಞಾನ ಬುತ್ತಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ಪಿಎಸ್ಐ ಹುದ್ದೆಗೆ ತರಬೇತಿ ಪಡೆದು ಹಲವು ಬಾರಿ ಪರೀಕ್ಷೆಗೂ ಹಾಜರಾದ ರಾಜೇಂದ್ರ, ಪಿಎಸ್ಐ ಆಕಾಂಕ್ಷಿಗಳಿಗೆ ತರಬೇತಿ ನೀಡಲು ಬೋಧಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಕೊನೆಗೆ ಕೆಎಸ್ಆರ್ಪಿ, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸೇರಿದರು. ಕೆಲಸದ ವೇಳೆ ರಾಷ್ಟ್ರಮಟ್ಟದ ತರಬೇತಿ ಪಡೆದರು. ನಂತರ ಸಿವಿಲ್ ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಯಶಸ್ವಿಯಾದರು.

LEAVE A REPLY

Please enter your comment!
Please enter your name here