Home ಕ್ಲಾಸಿಪೈಡ್ ಯುವ ಸಾಧಕರ ಕಣ್ಣಲ್ಲಿ ಭಾರತ

ಯುವ ಸಾಧಕರ ಕಣ್ಣಲ್ಲಿ ಭಾರತ

47
0
SHARE

ಯುವ ಸಾಧಕರ ಕಣ್ಣಲ್ಲಿ ಭಾರತ

ಶಿಕ್ಷಣ ಬೆಳವಣಿಗೆಗೆ ಪೂರಕ

ಭಾರತದಲ್ಲಿರುವ ಶಿಕ್ಷಣ ವ್ಯವಸ್ಥೆ ನಿಜವಾಗಿಯೂ ನನ್ನ ಬದುಕಿನಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದಿದೆ. ಇಂದು ಇಷ್ಟು ದೊಡ್ಡ ಸ್ಥಾನಮಾನದ ಜತೆಗೆ ವೃತ್ತಿಯಲ್ಲಿ ಏನಾದರೂ ನಾನು ಸಾಧಿಸಿದ್ದೇನೆ ಎಂದಾದರೆ ಅದಕ್ಕೆ ಭಾರತದಲ್ಲಿ ಸಿಕ್ಕಿರುವ ಶಿಕ್ಷಣವೇ ಮೂಲ ಕಾರಣ. ನನ್ನ ಪ್ರತಿಭೆಗೆ ನೀರು ಎರೆದು ಬೆಳೆಸಿದ ಶಿಕ್ಷಕರ ಮೇಲೆ ನನಗೆ ಅಪಾರವಾದ ಗೌರವ ಭಾವನೆಯಿದೆ.

ಹೆತ್ತವರು, ಕುಟುಂಬದವರು ನನಗೆ ಹೇಳಿಕೊಟ್ಟ ಭಾರತೀಯ ಮೌಲ್ಯಗಳು ನನ್ನ ಬದುಕಿಗೆ ಆದರ್ಶಪ್ರಾಯವಾಗಿ ನಿಂತಿವೆ. ನಾವು ಅಮೆರಿಕದಲ್ಲಿದ್ದರೂ ಕೂಡ ನನ್ನ ಪತ್ನಿ ಪಾಯಲ್ ಹಾಗೂ ನಾನು ನನ್ನ ಇಬ್ಬರು ಮಕ್ಕಳಿಗೆ ಭಾರತೀಯ ಸಂಸ್ಕಾರ ಹಾಗೂ ಮೌಲ್ಯಗಳನ್ನು ಹೇಳಿಕೊಡುತ್ತಾ ಒಳ್ಳೆಯ ನಾಗರಿಕರಾಗಿ ಬೆಳೆಸುತ್ತಿದ್ದೇವೆ. ನಾನು ಭಾರತದಲ್ಲಿಯೇ ಹುಟ್ಟಿ, ಅಲ್ಲಿಯೇ ಶಿಕ್ಷಣ ಪಡೆದುಕೊಂಡು ಬದುಕಿನ ಪ್ರತಿಯೊಂದು ಪುಟಗಳನ್ನು ಅಲ್ಲಿಂದಲೇ ಆರಂಭ ಮಾಡಿದ್ದೇನೆ. ದೇಶದ ಬಗ್ಗೆ ಪ್ರತಿ ಕ್ಷಣವೂ ಹೆಮ್ಮೆ, ಗೌರವ ಮೂಡುತ್ತದೆ.

ಹಾಲಿವುಡ್ ಸಿನಿಮಾ ಕ್ಷೇತ್ರದಲ್ಲಿನ ವಿಶಿಷ್ಟ ತಾಂತ್ರಿಕ ಸಾಧನೆಗಾಗಿ ಆಸ್ಕರ್ ಪ್ರಶಸ್ತಿಗೆ ಭಾಜನರಾದವರು. ದಕ್ಷಿಣ ಕನ್ನಡ ಜಿಲ್ಲೆಯ ಕಡಂದಲೆಯ ಕಿರಣ್ ಭಟ್. ಐಎಲ್ಎಂ ಫೇಶಿಯಲ್ ಪರ್ಫಾರ್ಮೆನ್ಸ್ ಕ್ಯಾಪ್ಚರ್ ಸಾಲ್ವಿಂಗ್ ಸಿಸ್ಟಂ ಎಂಬ ತಂತ್ರಜ್ಞಾನದ ವಿನ್ಯಾಸಕ್ಕಾಗಿ ಈ ಪ್ರಶಸ್ತಿ ಬಂದಿದೆ.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತನ್ನದೇ ಆದ ತಾಂತ್ರಿಕ ಸಂಸ್ಥೆ ಸ್ಥಾಪಿಸಿದ ಕಿರಣ್ ಆರು ವರ್ಷಗಳ ಹಿಂದೆ, ತನ್ನ ಸಹೋದ್ಯೋಗಿಗಳ ಜತೆ ಐಎಲ್ಎಂ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ಕಿರಣ್ ಅವರು ರಾಜಸ್ಥಾನದ ಪಿಲಾನಿಯ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಪದವಿ, ಬಳಿಕ ಅಮೆರಿಕದ ಕಾರ್ನೆಗಿ ಮೆಲೋನ್ ಯುನಿವರ್ಸಿಟಿಯಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

ಭಾಷೆ-ಸಂಸ್ಕøತಿಯೇ ಗಟ್ಟಿ

ಮೂಲತಃ ಮಂಡ್ಯದವರಾದ ಇವರು, ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡಿರುವ ಪ್ರತಿಭಾವಂತರು. ಬೆಂಗಳೂರಿನ ಜಯನಗರದಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಮುಗಿಸಿದ ನಂತರ ಇವರು ಚೆನೈನಲ್ಲಿ ಥಿಯರೆಟಿಕಲ್ ಫಿಜಿಕ್ಸ್ ಬೋಧಕರಾಗಿದ್ದಾರೆ. ಕ್ವಾಂಟಂ ವಿಜ್ಞಾನದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರು, ಅಲ್ಲಿ ಮಾಡಿರುವ ಸಂಶೋಧನೆಗಳು ಸಂಚಲನ ಹುಟ್ಟಿಸಿವೆ.

ಚಂದ್ರಶೇಖರ್ ಅವರು ಭಾರತ ಸರಕಾರದ ‘ಶ್ರೀನಿವಾಸ ರಾಮಾನುಜನ್ ಫೆಲೋಶಿಪ್’ ಮತ್ತು ಕೆನಡಾದ ಮೈಕ್ ಆಂಡ್ ಓಫೀಲಿಯಾ ಲಜರೈಡಿಸ್ ಫೆಲೋಶಿಪ್ಗೂ ಪಾತ್ರರಾಗಿದ್ದಾರೆ. ಕೆನಡಾದ ಉನ್ನತ ಸಂಸ್ಥೆಯಿಂದ ಇವರು ಪಿಎಚ್.ಡಿ ಪಡೆದಿದ್ದಾರೆ.

ನಾನು 12 ವರ್ಷಗಳ ಕಾಲ ಅಮೆರಿಕ, ಇಂಗ್ಲೆಂಡ್, ಕೆನಡಾ, ಐಲೆರ್ಂಡ್ ಮತ್ತು ಜಪಾನ್ನಲ್ಲೇ ಇದ್ದರೂ ಯಾವತ್ತೂ ಆ ಸಮುದಾಯಗಳ ಭಾಗವೆನಿಸಲಿಲ್ಲ, ನಮ್ಮ ದೇಶ, ಭಾಷೆ, ಸಂಸ್ಕøತಿಯ ಗಟ್ಟಿತನವೆಂದರೆ ಇದೇ. ದೇಶಕ್ಕೆ ಪುರಾತನ ಹಿನ್ನೆಲೆ, ಚರಿತ್ರೆ ಇದೆ. ನಾನು, ಚೆನೈನಲ್ಲಿ ಕೆಲಸ ಮಾಡುತ್ತಿರುವ ‘ದಿ ಇನ್ಸಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸ್’ ನಲ್ಲಿ ಕ್ವಾಂಟಂ ಫಿಜಿಕ್ಸ್ ಬಗ್ಗೆ ಸಮಾವೇಶ ಏರ್ಪಡಿಸಿದ್ದೆ.

ಬೇರೆ ಬೇರೆ ದೇಶಗಳ ಮೇಧಾವಿಗಳು ಬಂದಿದ್ದರು. ದೇಶದ ಕಲೆ, ಸಂಸ್ಕøತಿ ಮತ್ತು ಭಾಷೆಗಳ ವೈವಿಧ್ಯದ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ನೋಡಿ ನನಗೆ ಅಚ್ಚರಿಯಾಯಿತು. ಆದರೆ, ನಮ್ಮಲೇ ಹೆಚ್ಚಿನವರಿಗೆ ಇಂಥ ಆಸಕ್ತಿ ಇಲ್ಲ, ನಮ್ಮ ದೇಶದಲ್ಲಿರುವಷ್ಟು ಜೀವನಶೈಲಿಯ ವಿಭಿನ್ನತೆ ಮತ್ತು ಅದನ್ನು ಸಾಹಿತ್ಯದಲ್ಲಿ ಹಿಡಿದಿಟ್ಟಿರುವ ಶ್ರೀಮಂತಿಕೆ ಪ್ರಪಂಚದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ನಮ್ಮ ದೇಶಕ್ಕೆ ಭವಿಷ್ಯವೂ ಉಜ್ವಲವಾಗಿದೆ. ಇದನ್ನು ರಚನಾತ್ಮಕವಾಗಿ ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆಯಾಗಿದೆ.

ವಿದೇಶಿಗರಿಗೆ ನಿಷ್ಠೆ

ಒಬ್ಬ ವ್ಯಕ್ತಿಗೆ ಜೀವನದಲ್ಲಿ ತನ್ನದೇ ಆದ ವ್ಯಕ್ತಿತ್ವ ರೂಪಿಸಿಕೊಳ್ಳುವ ಧ್ಯೇಯ ಇರುತ್ತದೆ. ಆದರೆ ಎಂದಾದರೂ ನಮ್ಮಲ್ಲಿ ನಮ್ಮ ವ್ಯಕ್ತಿತ್ವದ ಬಗ್ಗೆ ಹೆಮ್ಮೆಯುಂಟು ಮಾಡುವ ಒಂದು ಪ್ರಶ್ನೆ ಎದುರಾದಲ್ಲಿ ಅದಕ್ಕೆ ಒಂದೇ ಉತ್ತರ-ನಾನು ಭಾರತೀಯ. ಭಾರತದ ಕಥೆಯೇನು ಸಾಮಾನ್ಯವಲ್ಲ. ಇತಿಹಾಸದಲ್ಲಿ ಹಲವು ಆಕ್ರಮಣಗಳಿಗೆ ಸಿಲುಕಿ ನಲುಗಿದರೂ ಇದು ಫೀನಿಕ್ಸ್ ಪಕ್ಷಿಯಂತೆ ಮರುಜೀವ ಪಡೆದಿದೆ.

ನೂರಾರು ವರ್ಷ ಪರಕೀಯರ ಆಳ್ವಿಕೆಗೆ ಒಳಪಟ್ಟರೂ ತನ್ನ ಅನನ್ಯ ಸಂಸ್ಕøತಿಯನ್ನು ಸಂರಕ್ಷಿಸಿ ಇಟ್ಟುಕೊಂಡ ದೇಶ. ಸ್ವಾತಂತ್ರ್ಯ ದೊರೆತ ನಂತರ ಕೇವಲ 70 ವರ್ಷಗಳಲ್ಲಿ ಅಪಾರ ಸಾಧನೆಯ ಮೆಟ್ಟಿಲುಗಳನ್ನು ಏರಿ, ಪ್ರತಿಯೊಂದು ಕ್ಷೇತ್ರದಲ್ಲಿ ಜಯದ ಪತಾಕೆ ಹಾರಿಸಿದ ರಾಷ್ಟ್ರ. ಮೇಧಾವಿಗಳು, ಪ್ರತಿಭಾವಂತ ಕಲಾವಿದರು, ವಿಜ್ಞಾನಿಗಳು, ಭವ್ಯ ಕಟ್ಟಡಗಳು ಹಾಗೂ ಕಾರ್ಖಾನೆಗಳ ನಾಡು. ಹಾಗೆಯೇ ವಿಭಿನ್ನ ಕಲೆ, ಸಂಸ್ಕøತಿ, ನಡೆ-ನುಡಿ, ಜನಾಂಗಗಳು, ಪ್ರಕೃತಿರಮ್ಯ ತಾಣಗಳು, ನಿಸರ್ಗ ಸೌಂದರ್ಯದ ಬೀಡು. ವಿದೇಶಿಯರು ನಿಷ್ಠೆಯಿಂದ ನೋಡಬಹುದಾದ ನಮ್ಮ ಹೆಮ್ಮೆಯ ದೇಶ ಇದು.

ಇಂದು ಭಾರತ ಬೆಳೆಯುತ್ತಿದೆ. ಉನ್ನತ ಗುರಿಯೆಡೆಗೆ ಸಾಗಿದೆ. ಅತ್ಯಂತ ಪ್ರಾಚೀನ ಸಂಸ್ಕøತಿ, ಅತ್ಯಾಧುನಿಕ ತಂತ್ರಜ್ಞಾನ, ಸರ್ವಶ್ರೇಷ್ಠ ಪ್ರಜಾ ತಂತ್ರದ ಸಿಹಿ ಮಿಶ್ರಣವಾದ ಈ ರಾಷ್ಟ್ರದ ಪ್ರಜೆಯೆಂದೆನ್ನಲು ನನಗೆ ಎಂದೆಂದೂ ಹೆಮ್ಮೆ.

LEAVE A REPLY

Please enter your comment!
Please enter your name here