Home ಕ್ಲಾಸಿಪೈಡ್ ಉಪ್ಪು ಅಧಿಕವಾದರೆ ತಪ್ಪದು ಮುಪ್ಪು:

ಉಪ್ಪು ಅಧಿಕವಾದರೆ ತಪ್ಪದು ಮುಪ್ಪು:

36
0
SHARE

ಅಮ್ಮಾ ಈ ದಿನ ಊಟ ಏಕೆ ಸಪ್ಪೆಯಾಗಿದೆ? ಮಗ ಕೇಳಿದರೆ..
‘ಏನ್ ಇವತ್ತು ಸಾಂಬಾರಿನಲ್ಲಿ ಉಪ್ಪು ಹಾಕುವುದನ್ನು ಮರ್ತು ಹೋದೆಯಾ.’ ಪತಿ ಕೇಳಿದರೇ ಗಂಡನಿಗೆ ಹೆಂಡತಿ ತಿಳಿಸುವುದು ಈ ರೀತಿ…ಯಾರೇ ಆಗಲಿ ಉಪ್ಪು ಇಲ್ಲದಿದ್ದರೇ ಊಟ ಮಾಡಲು ಕಷ್ಟ. ಆದರೆ ಇದು ಒಂದಷ್ಟು ಪ್ರಮಾಣದವರೆಗೂ ಸರಿ ಅದೇ ಉಪ್ಪು ಮಿತಿ ಮೀರಿದರೆ ತೊಂದರೆ ತಪ್ಪಿದ್ದಲ್ಲ.

ಹೆಚ್ಚಾದರೇ ತೊಂದರೆ
ನಮ್ಮಲ್ಲಿ ಹೆಚ್ಚು ಮಂದಿ ಉಪ್ಪು-ಕಾರ-ಮಸಾಲೆ ಹೆಚ್ಚಾಗಿರುವ ಪಲ್ಯ, ಚಟ್ನಿ ಇಷ್ಟ ಪಡುತ್ತಾರೆ. ಇಲ್ಲದೇ ಇದ್ದರೇ ಯಾವುದೋ ಬೇಸರದಿಂದ ಒದ್ದಾಡುತ್ತಾರೆ. ಮದುವೆ, ಪಾರ್ಟಿ, ಫಂಕ್ಷನ್ ನಡೆದರೇ ಹೇಳುವ ಅಗತ್ಯವಿಲ್ಲ.. ಎಲ್ಲವನ್ನು ಅಗತ್ಯಕ್ಕಿಂಥ ಹೆಚ್ಚಾಗಿ ಸೇವಿಸುತ್ತೇವೆ. ಯಾವುದೋ ಒಂದು ಸಂದರ್ಭದಲ್ಲಾದರೆ ತೊಂದರೇ ಇಲ್ಲ ಆದರೆ ದಿನವೂ ಹೀಗೆ ಮಾಡಿದರೇ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಣ್ಣೆಯಲ್ಲಿ ಕರೆದು ಉಪ್ಪು ಕಾರ ಹಾಕಿದ ಬೆಳ್ಳುಳ್ಳಿ, ಗೋಡಂಬಿಯ ಸೇವನೆ ಕಡಿಮೆ ಮಾಡಿ. ಒಂದು ಚಿಕ್ಕ ಬೌಲ್ಫುಡ್ನಲ್ಲಿ ಸುಮಾರು 20 ಗ್ರಾಂ ಉಪ್ಪು ಇರುತ್ತದೆ.

ಇಷ್ಟು ಸಾಕು
ದಿನಕ್ಕೆ ಐದರಿಂದ ಆರು ಗ್ರಾಂವರೆಗೂ ತಿನ್ನಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿದೆ. ಅಂದರೆ ಸುಮಾರಾಗಿ ಒಂದು ಟೀ ಸ್ಪೂನ್. ನಮ್ಮ ದೇಶದಲ್ಲಿ ಒಟ್ಟು ಮನುಷ್ಯ ಎಷ್ಟು ಉಪ್ಪು ಸೇವಿಸುತ್ತಾನೆ ಗೊತ್ತೇ? 20 ಗ್ರಾಂಗಳಿಗಿಂತ ಹೆಚ್ಚು. ಅದೇ ಯುಕೆ, ಅಮೆರಿಕದಲ್ಲಿ 6, ಪೋರ್ಚುಗಲ್ 5, ಬೆಲ್ಜಿಯಂ 8.75, ಜಪಾನ್ನಲ್ಲಿ 10 ಗ್ರಾಂ ತಿನ್ನುತ್ತಾರಂತೆ.

ಸೋಡಿಯಂ. ಉಪ್ಪು :
ಈ ಎರಡರಲ್ಲೂ ಬಹಳ ವ್ಯತ್ಯಾಸಿದೆ. ಸೋಡಿಯಂ ಕ್ಲೋರೈಡ್ ಎಂದರೇ ಉಪ್ಪು. ಒಂದು ಗ್ರಾಂ ಸೋಡಿಯಂ ಅಂದರೇ ಎರಡೂವರೆ ಗ್ರಾಂ ಉಪ್ಪಿಗೆ ಸಮಾನ. ಕೆಲವು ಪದಾರ್ಥಗಳ ಮೇಲೆ ಲೇಬಲಿನಲ್ಲಿ 100ಗ್ರಾಂ ಗಳಿಗಿಷ್ಟು ಸೋಡಿಯಂ ಎಂದು ಬರೆದಿರುತ್ತದೆ. ಅದರಲ್ಲಿ ಎಷ್ಟು ಉಪ್ಪು ಇರಬೇಕೆಂದು ತಿಳಿಯಬೇಕೆಂದರೆ ಅದರ ಎರಡೂವರೆಯಷ್ಟು ಗುಣಿಸಿದರೆ ಸಾಕು.

ಹೆಚ್ಚಾದರೆ? ಅಪಾಯ :
• ಹೆಚ್ಚು ಉಪ್ಪು ತಿಂದರೆ ಹೈಬಿಪಿ, ಹೃದಯ ಸಂಬಂಧಿತ ಕಾಯಿಲೆ ಬರುವ ಸಂಭವ ಅಧಿಕ.
• ಅಧಿಕ ಉಪ್ಪು ಮೂತ್ರ ಪಿಂಡಗಳಿಗೆ ಹಾನಿಕರ.
• ಅಧಿಕ ಉಪ್ಪು ಶರೀರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಮಾಡುತ್ತದೆ. ಇದರಿಂದ ಮೂಳೆಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. (ಆಸ್ಟಿಯೋ ಪೋರೋಸಿಸ್).
• ಕಣ್ಣಿನ ದೃಷ್ಟಿಯ ಮೇಲೆ ತೊಂದರೆ ಉಂಟಾಗುತ್ತದೆ.
• ಸ್ಥೂಲಕಾಯಕ್ಕೆ ದಾರಿ ತೋರುವುದರಲ್ಲಿ ಅಧಿಕ ಉಪ್ಪು ಬಳಕೆ ಕಾರಣವಾಗುತ್ತದೆ.

ಹಾಗೆ ಎಂದು ಬಿಟ್ಟರೆ:
ಹಾಗಂಥ ಉಪ್ಪು ತಿನ್ನುವುದನ್ನು ಪೂರ್ತಿಯಾಗಿ ಬಿಡಬಾರದು. ಅದು ಒಳ್ಳೆಯದಲ್ಲ. ಶರೀರದಲ್ಲಿ ಕೆಲವು ಜೀವಕ್ರಿಯೆಗಳಿಗೆ ಇದು ಅತ್ಯಗತ್ಯ. ದೇಹದಲ್ಲಿನ ದ್ರವಗಳನ್ನು ಸಮಪ್ರಮಾಣ ಮಾಡುವುದು ಉಪ್ಪು. ಸ್ನಾಯುಗಳು ಸಕ್ರಮವಾಗಿ ಕೆಲಸ ನಿರ್ವಹಿಸಲು ಉಪ್ಪಿನ ಪಾತ್ರವಿದೆ. ನರಗಳನ್ನು ಉತ್ತೇಜನಗೊಳಿಸಲು ಉಪ್ಪು ಬೇಕೆ ಬೇಕು. ಆಹಾರದಲ್ಲಿನ ಪೋಷಕಾಂಶಗಳನ್ನು ಶರೀರ ತಕ್ಷಣ ಗ್ರಹಿಸುವಂತೆ ಮಾಡುವುದು ಇದೆ. ಆದ್ದರಿಂದ ಪ್ರಮಾಣ ಮೀರದಂತೆ ಉಪ್ಪು ಸೇವಿಸಿ.
ಹೀಗೆ ಕಡಿಮೆ ಮಾಡಿಕೊಳ್ಳಬಹುದು:
ನಾವು ನಿತ್ಯ ಬದುಕಲ್ಲಿ ಉಪ್ಪು ಇಲ್ಲದ ಪದಾರ್ಥಗಳನ್ನು ತಿನ್ನುವುದೆಂದರೇ ದೊಡ್ಡ ಶಿಕ್ಷೆ.
ಹಾಗೆ ಜಾಸ್ತಿ ತಿಂದರೂ ತೊಂದರೆ ತಪ್ಪಿದ್ದಲ್ಲ ಅದಕ್ಕಾಗಿ ಸ್ವಲ್ಪ ಜಾಗ್ರತೆವಹಿಸಿದರೆ ಉತ್ತಮ.
1. ಪ್ರಾಸೆಸ್ಡ್ ಜಂಕ್ಫುಡ್ ಕಡಿಮೆ ಮಾಡಿ ತಾಜಾ ತರಕಾರಿ ಇರುವ ಪದಾರ್ಥ, ಹಣ್ಣು ಹೆಚ್ಚು ಬಳಸಿ.
2. ಮಜ್ಜಿಗೆ, ಮೊಸರನ್ನ ತರಕಾರಿಗಳಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡಿ.
3. ಸಾಮಾನುಗಳನ್ನು ಕೊಳ್ಳುವಾಗ ಲೇಬಲ್ ನೋಡಿ ಅದರಲ್ಲಿ ಎಷ್ಟು ಉಪ್ಪು ಸೋಡಿಯಂ ಇದೆಯೆಂಬುದನ್ನು ತಿಳಿದುಕೊಳ್ಳಬಹುದು.
4. ಊಟ ಮಾಡುವಾಗ ಉಪ್ಪನ್ನು ಪದೇ ಪದೇ ಬಳಸದಿರಿ.
5. ನಾವು ತಿನ್ನುವ ಬಿಸ್ಕತ್, ಚಿಪ್ಸ್, ಬ್ರೆಡ್, ಪಿಜ್ಜಾ ಹೆಲ್ತ್ ಡ್ರಿಂಕ್ಸ್ ಇವೆಲ್ಲಕ್ಕೂ ಉಪ್ಪು ಹೆಚ್ಚಾಗಿರುತ್ತದೆ.
ಯಾರಿಗೆ ಎಷ್ಟು ಉಪ್ಪು
ಯಾವ ವಯಸ್ಸಿನವರು ಎಷ್ಟು ಉಪ್ಪು ಸೇವಿಸಬೇಕೆಂಬ ವಿಷಯದಲ್ಲಿ ಬ್ರಿಟನ್ ಪೋಷಕಾಹಾರ ವೈಜ್ಞಾನಿಕ ಸಲಹಾ ಸಂಘದ ಶಿಫಾರಸ್ಸುಗಳಿವು.
0-6 ತಿಂಗಳು -1 ಗ್ರಾಂ ಗಿಂತ ಕಡಿಮೆ
7-12 ತಿಂಗಳು -1 ಗ್ರಾಂ ಗಳು
1-3 ವರ್ಷ -2 ಗ್ರಾಂ ಗಳು
4-6 ವರ್ಷ -3 ಗ್ರಾಂ ಗಳು
7-10 ವರ್ಷ -5 ಗ್ರಾಂ ಗಳು
11-14 ವರ್ಷ -6 ಗ್ರಾಂ ಗಳು
ದೊಡ್ಡವರು -6 ರಿಂದ 7 ಗ್ರಾಂಗಳು.

LEAVE A REPLY

Please enter your comment!
Please enter your name here