Home ಕ್ಲಾಸಿಪೈಡ್ ವಿಟಮಿನ್ ಡಿ ಕೊರತೆಯೇ, ಬಿಸಿಲಿಗೆ ಮೈಯೊಡ್ಡಿ..

ವಿಟಮಿನ್ ಡಿ ಕೊರತೆಯೇ, ಬಿಸಿಲಿಗೆ ಮೈಯೊಡ್ಡಿ..

30
0
SHARE

ವಿಟಮಿನ್ ಡಿ. (ಸನ್ಶೈನ್ ವಿಟಮಿನ್) ದೈವದತ್ತವಾಗಿ ಸಿಗುವಂತಹ ವಿಟಮಿನ್. ಹೊಲದಲ್ಲಿ ಕೆಲಸ ಮಾಡುವಾಗ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುವುದರಿಂದ ಹಳ್ಳಿಗಳಲ್ಲಿ ವಿಟಮಿನ್ ಡಿ ನ್ಯೂನತೆಯಿಂದ ನರಳುವವರು ಕಡಿಮೆ. ನಗರಗಳಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಬದಿ ವ್ಯಾಪಾರಿಗಳು ಮತ್ತು ರಸ್ತೆಯಲ್ಲಿ ಕೆಲಸ ಮಾಡುವವರು ಬಿಟ್ಟರೆ ಹವಾನಿಯಂತ್ರಿತ ಕೊಠಡಿಯಲ್ಲಿ ಕೆಲಸ ಮಾಡುವವರು, ಕಪ್ಪು ಜನರ ಚರ್ಮದಲ್ಲಿನ ಮೆಲನಿನ್ ಅಂಶ ಸೂರ್ಯನ ಕಿರಣ ಚರ್ಮ ತೂರಿ ಹೋಗದಂತೆ ಮಾಡುವುದರಿಂದ, ಜೀರ್ಣಾಂಗ ವ್ಯವಸ್ಥೆ ಸರಿಯಾಗದೆ ವಿಟಮಿನ್ ಡಿ ಅನ್ನು ಪರಿವರ್ತಿಸದಿದ್ದರೆ ವಿಟಮಿನ್ ಡಿ ಕೊರತೆಯಿಂದ ನರಳುತ್ತಾರೆ.

ಸೂರ್ಯನ ಕಿರಣಗಳನ್ನು ಹೊರತುಪಡಿಸಿ ನಾವು ತಿನ್ನುವ ಯಾವುದೇ ಆಹಾರದಲ್ಲಿ ವಿಟಮಿನ್ ಡಿ ಹೇರಳವಾಗಿ ಸಿಗುವುದಿಲ್ಲ. ಸೂರ್ಯನ ಕಿರಣದಲ್ಲಿರುವ ಅಲ್ಟಾವಯಲೆಟ್ ರೇ (ಅತಿನೇರಳೆಯ/ನೇರಳಾತೀತ ಕಿರಣ) ಚರ್ಮದ ಮೂಲಕ ಶರೀರಕ್ಕೆ ಹೋದಾಗ ವಿಟಮಿನ್ ಡಿ ತಾನಗಿಯೇ ದೇಹದಲ್ಲಿ ಉತ್ಪತ್ತಿಯಾಗುತ್ತದೆ.

ಕಪ್ಪನೆಯ ಚರ್ಮದವರಿಗಿಂತ ಬಿಳಿಯ ಚರ್ಮದವರು ಸೂರ್ಯನ ಕಿರಣಕ್ಕೆ ಮೈ ಒಡ್ಡುವುದು ಒಳ್ಳೆಯದು. ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇ.84 ಗರ್ಭಿಣಿ ಮಹಿಳೆಯರು ಮತ್ತು ಶೇ.75 ಬೇರೆಯವರು ವಿಟಮಿನ್ ಡಿ ಕೊರತೆಯಿಂದ ನರಳುತ್ತಿದ್ದಾರಂತೆ. ಇನ್ನೊಂದು ಅಧ್ಯಯನದ ಪ್ರಕಾರ ಗರ್ಭಿಣಿ ಮಹಿಳೆಯ ರಕ್ತದಲ್ಲಿ ವಿಟಮಿನ್ ಡಿ ಪ್ರಮಾಣ ಜಾಸ್ತಿಯಾದರೆ ಹುಟ್ಟಲಿರುವ ಮಗುವಿಗೆ ಕೆಲವೊಂದು ಆಹಾರ ಪದಾರ್ಥ ಅಲರ್ಜಿ ಉಂಟಾಗುತ್ತದೆ.

ವಿಟಮಿನ್ ಡಿ ಆಹಾರದಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನಿಷಿಯಂ ಹೀರಿಕೊಂಡು ಹಲ್ಲು ಮತ್ತು ಮೂಳೆಗಳನ್ನು ಗಟ್ಟಿಯಾಗಿರುವಂತೆ ಮಾಡುತ್ತದೆ. ವಿಟಮಿನ್ ಡಿ ರಕ್ತದಲ್ಲಿರುವ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಮಟ್ಟವನ್ನು ಕಾಪಾಡುವಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ. ಗರ್ಭಿಣಿ ಮಹಿಳೆಯ ರಕ್ತದಲ್ಲಿ ವಿಟಮಿನ್ ಡಿ ಅಗತ್ಯ ಪ್ರಮಾಣದಲ್ಲಿ ಇಲ್ಲವಾದರೆ ಮಗುವಿನ ಮೂಳೆಗಳ ಬೆಳವಣಿಗೆಯಲ್ಲಿ ತೊಂದರೆಯಾಗುತ್ತದೆ.

ವಿಟಮಿನ್ ಡಿ ಕೊರತೆಯಿಂದ ಮಕ್ಕಳಲ್ಲಿ ರಿಕೆಟ್ಸ್ ರೋಗ (ಟೊಳ್ಳು ಮೂಳೆ), ದೊಡ್ಡವರಲ್ಲಿ, ಅಸ್ಥಿರಂಧ್ರತೆ (ಆಸ್ಪಿಯೊಫ್ಲೋರೋಸಿಸ್) ಮತ್ತು ಅಸ್ಥಿಮೃದುತ್ವ (ಆಸ್ಟಿಯೊಮಲೇಸಿಯಾ), ಹೃದಯ ಸಂಬಂಧಿ ರೋಗಗಳು, ಸ್ನಾಯು ನೋವು ಮತ್ತು ಶಕ್ತಿಹೀನ ಸ್ನಾಯುಗಳು, ಕೆಲವೊಂದು ಕ್ಯಾನ್ಸರ್ಗಳಿಗೆ ಮತ್ತು ಮಧುಮೇಹಕ್ಕೂ ಕಾರಣವಾಗುತ್ತದೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.

ವಿಟಮಿನ್ ಡಿ ಸಿಗುವ ಆಹಾರ ಪದಾರ್ಥಗಳೆಂದರೆ ಅಣಬೆ, ಪುದಿನಾ, ಮೊಟ್ಟೆ, ಹಾಲು, ಬೆಣ್ಣೆ, ಮೊಸರು, ಐಸ್ಕ್ರಿಂ, ಚೀಸ್, ಮೀನು, ಕೋಳಿ ಮಾಂಸ, ಕಾಡ್ಲಿವರ್ ಎಣ್ಣೆ, ಕುರಿ ಮಾಂಸ, ಟರ್ಕಿ ಕೋಳಿ ಮಾಂಸ ಇನ್ನೂ ಇತರೆ.

ಎದೆಯುರಿ ಔಷಧ ತರವಲ್ಲ
ಎದೆಯುರಿಗೆ ಜನಪ್ರಿಯ ಕೆಲ ಔಷಧಗಳನ್ನು ಹೆಚ್ಚಿನ ಮಂದಿ ತೆಗೆದುಕೊಳ್ಳುತ್ತಾರೆ. ಅದು ಉದರದಲ್ಲಿನ ಆಸಿಡ್ ಪ್ರಮಾಣವನ್ನು ಕಡಿಮೆಮಾಡುತ್ತದೆ. ಆದರೆ ಇದು ಮೂತ್ರಪಿಂಡ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಸಂಶೋಧಕರ ಹೊಸ ಅಧ್ಯಯನ ಹೇಳಿದೆ. ಎದೆಯುರಿಗೆ ಸಂಬಂಧಿಸಿದಂತೆ ನೀಡುತ್ತಿರುವ ಜನಪ್ರಿಯ ಔಷಧ ಮೂತ್ರಪಿಂಡ ವೈಫಲ್ಯಕ್ಕೂ ಕಾರಣವಾಗಬಹುದು. ಕೆಲ ವೈದ್ಯರೂ ಮಾಹಿತಿ ಕೊರತೆಯಿಂದ ಶಿಫಾರಸ್ಸು ಮಾಡುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ.

LEAVE A REPLY

Please enter your comment!
Please enter your name here