Home ಕ್ಲಾಸಿಪೈಡ್ ವಿದ್ಯೆಯೆಂಬ ಶ್ರೀಮಂತಿಕೆಯನ್ನು ಪಡೆದ ಭಿಕ್ಷುಕ ಹುಡುಗ..!

ವಿದ್ಯೆಯೆಂಬ ಶ್ರೀಮಂತಿಕೆಯನ್ನು ಪಡೆದ ಭಿಕ್ಷುಕ ಹುಡುಗ..!

29
0
SHARE

ಒಂದು ಕಾಲದಲ್ಲಿ ಭಿಕ್ಷುಕರಾಗಿದ್ದು ನಂತರ ಕೋಟ್ಯಾಧಿಪತಿಗಳಾದ ವ್ಯಕ್ತಿಗಳ ಬಗ್ಗೆ ಹಲವಾರು ಕಥೆಗಳನ್ನು ನಾವೆಲ್ಲರೂ ಕೇಳಿದ್ದೇವೆ ಮತ್ತು ನೋಡಿದ್ದೇವೆ. ಇದಕ್ಕೆಲ್ಲ ಅವರ ಹಣೆ ಬಹರವೇ ಕಾರಣ ಎಂದು ನಾವೆಲ್ಲ ಹೇಳುತ್ತೇವೆ. ಬಡತನದಿಂದ ಶ್ರೀಮಂತಿಕೆಯನ್ನು ಪಡೆದ ವ್ಯಕ್ತಿಗಳ ಕಥೆಗಳು ಬೇರೆ ಬೇರೆಯಾಗಿದ್ದರೂ ಕೆಲವರ ಕಥೆ ಮಾತ್ರ ಎಲ್ಲರ ಮನಮುಟ್ಟುವಂತಿರುತ್ತದೆ. ಅಂತವರಲ್ಲಿ ಓರ್ವ ವ್ಯಕ್ತಿಯ ಬಗ್ಗೆ ಇಲ್ಲಿ ಈ ಕಥೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ವ್ಯಕ್ತಿ ಬಿಕ್ಷುಕನಾಗಿದ್ದು ಹಣದ ಶ್ರೀಮಂತಿಕೆಯನ್ನು ಪಡೆಯಲಿಲ್ಲ. ಬದಲಿಗೆ ವಿದ್ಯೆಯೇ ವಿನಯ, ವಿದ್ಯೆಯೇ ಭೂಷಣ ಎಂಬುದಕ್ಕೆ ಈ ಬಿಕ್ಷುಕ ಹುಡುಗನೇ ಕಾರಣ.

ಇವನಿಗೆ ಹಣದ ಬದಲಿಗೆ ವಿದ್ಯೆಯ ಶ್ರೀಮಂತಿಕೆ ಪಡೆದು ಬೀದಿಯಿಂದ ನೇರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ಪ್ರವೇಶವನ್ನು ಪಡೆದಿದ್ದಾನೆ. ಕೆಲವೇ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಇಟಲಿಗೂ ಹೋಗಲಿದ್ದಾನೆ. ಈ ವ್ಯಕ್ತಿ ಯಾರು ಎಂಬ ಕುತೂಹಲ ನಿಮಗೆಲ್ಲ..! ಈತನೇ ಚೆನ್ನೈ ನಗರದ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಜಯಾವಲ್. ಈತನಿಗೆ ಬೇರೆ ಯಾವ ಬಂಡವಾಳವು ಸಹ ಇಲ್ಲದಿರುವುದೇ ಈತನ ಭಿಕ್ಷಾಟನೆಗೆ ಕಾರಣವಾಗಿದೆ. ಬನ್ನಿ, ಈತನ ಬಗ್ಗೆ ತಿಳಿದುಕೊಳ್ಳೋಣ.

ಜಯಾವಲ್ ನೆಲ್ಲೂರು ಜಿಲ್ಲೆಯ ಕೃಷಿಯಾಧಾರಿತ ಕುಟುಂಬ ವರ್ಗಕ್ಕೆ ಸೇರಿದವನು. 70ರ ದಶಕದಲ್ಲಿ ಬೆಳೆಗಳು ಸಂಪೂರ್ಣವಾಗಿ ನಾಶವಾದ ಬಳಿಕ ಮನೆ-ಮಠ ಬಿಟ್ಟು ನಿರ್ಗತಿಕರಾಗಿ ಚೆನ್ನೈಗೆ ಬಂದ ಈ ಕುಟುಂಬಕ್ಕೆ ಬೇರೆ ಯಾವ ಮಾರ್ಗವೇ ಇರಲಿಲ್ಲ. ಇವರಿಗೆ ಭಿಕ್ಷಾಟನೆ ಅನಿವಾರ್ಯವಾಗಿತ್ತು. ಇದನ್ನು ಬಿಟ್ಟರೆ ಈ ಕುಟುಂಬಕ್ಕೆ ಯಾವುದೇ ಮಾರ್ಗ ಉಳಿದಿರಲಿಲ್ಲ.

ಮನೆಯ ಎಲ್ಲಾ ಸದಸ್ಯರು ಚೆನ್ನೈ ನಗರದ ಬೀದಿಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ, ರಾತ್ರಿ ಫುಟ್ಪಾಥ್ಗಳಲ್ಲಿ ಮಲಗುತ್ತಿದ್ದರು. ಏನು ಸಿಗುತ್ತದೋ ಅದನ್ನೆ ತಿಂದು, ಬೀದಿ ನಲ್ಲಿಗಳ ನೀರು ಕುಡಿಯುತ್ತಾ ಕಾಲ ಕಳೆಯುತ್ತಿದ್ದರು. ಇವರಿಗೆ ಭಿಕ್ಷಾಟನೆಯ ಸಮಯದ ವೇಳೆ ಮಳೆ ಬಂದರೆ ಅಂಗಡಿಗಳ ಮುಂದೆ ನೆರಳು ಛಾವಣಿಯ ಕೆಳಗೆ ನಿದ್ದೆ ಇಲ್ಲದೇ ಆಶ್ರಯ ಪಡೆಯುತ್ತಿದ್ದರು. ಎಲ್ಲಿಯವರೆಗೆ ಅಂದರೆ ಅವರನ್ನು ಪೋಲೀಸರು ಬಂದು ಅಲ್ಲಿಂದ ಓಡಿಸುವ ತನಕ. ಮದ್ಯಪಾನವನ್ನು ಸೇವಿಸುವ ತಾಯಿ, ಹಣವನ್ನೆಲ್ಲಾ ಕಿತ್ತುಕೊಳ್ಳುತ್ತಿದ್ದಳು.!

ತನ್ನ ಕುಟುಂಬ ಬೀದಿಪಾಲಾಗಿರುವುದನ್ನು ಸಹಿಸದ ತಾಯಿ ಮದ್ಯಪಾನದ ಮೊರೆ ಹೋದಳು. ಮಕ್ಕಳು ಇಡೀ ದಿನವೆಲ್ಲಾ ಭಿಕ್ಷೆ ಬೇಡಿ ತಂದ ಹಣವನ್ನೆಲ್ಲಾ ತಾಯಿ ಬಲವಂತವಾಗಿ ಕಿತ್ತುಕೊಳ್ಳುವಳು. ಜಯಾವಲ್ಗೆ ತನ್ನ ಖರ್ಚು ನಿಭಾಯಿಸಿಕೊಳ್ಳುವುದಕ್ಕೂ ಸಾಧ್ಯವಾಗಲಿಲ್ಲ. ಆಪತ್ಬಾಂಧವರಂತೆ ಬಂದ ಉಮಾ ಮುತ್ತುರಾಮನ್.

ಈ ಸಂದರ್ಭದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಉಮಾ ಮುತ್ತುರಾಮನ್ ಜಯಾವಲ್ನನ್ನು ಮೊದಲ ಬಾರಿ ಭೇಟಿಯಾಗಿ ಆತನ ಬಗ್ಗೆ ಉತ್ಸುಕತೆ ತೋರಿಸಿದರು. ಉಮಾ ಮುತ್ತುರಾಮನ್ ಈತನ ನಿಃಸಹಾಯಕ ಸ್ಥಿತಿ ನೋಡಿ ಈತನಿಗೆ ತನ್ನಿಂದಾದ ಸಹಾಯವನ್ನು ಮಾಡಬೇಕೆಂದು ಕೊಂಡರು. ನಂತರ ಉಮಾ ಆತನನ್ನು “ಸುಯಾಮ್ ಚಾರಿಟೇಬಲ್ ಟ್ರಸ್ಟ್” ಎಂಬ ಹೆಸರಿನ ಎನ್.ಜಿ.ಓ ಅಥವಾ ಸರ್ಕಾರೇತರ ಸೇವಾ ಸಂಸ್ಥೆಯೊಂದಕ್ಕೆ ಸೇರಿಸಿದರು.

ಅಲ್ಲಿಂದ ಈತನ ಹೊಸ ಜೀವನದ ಅಧ್ಯಾಯನವೊಂದು ಪ್ರಾರಂಭವಾಯಿತು. ಈ ಎನ್.ಜಿ.ಓ ಸಂಸ್ಥೆಯ ನೆರವಿನಿಂದ ಶಿಕ್ಷಣವನ್ನು ಜಯಾವಲ್ ಮುಂದುವರೆಸಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ. ಈತನ ಅಂಕಗಳನ್ನು ಗಮನಿಸಿದ ಕೆಲವು ಸಹೃದಯಿ ದಾನಿಗಳು ಈತನ ಮುಂದಿನ ಶಿಕ್ಷಣದ ವೆಚ್ಚವನ್ನು ಸಾಲದ ರೂಪದಲ್ಲಿ ಕೊಡಲು ಮುಂದೆ ಬಂದರು.

ಜಯಾವಲ್ ಉನ್ನತ ಶಿಕ್ಷಣಕ್ಕಾಗಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯನ್ನು ಬರೆದರು. ಈ ಪರೀಕ್ಷೆಯಲ್ಲಿಯೂ ಉತ್ತಮ ಅಂಕಗಳನ್ನು ಪಡೆದು ಆಯ್ಕೆಯಾದ. ಅಲ್ಲದೇ ಬ್ರಿಟನ್ನಿನ ಗ್ಲಿಂಡ್ವರ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆಯುಲು ಪ್ರವೇಶವನ್ನೂ ದೊರಕಿಸಿ ಕೊಂಡಿದ್ದಾನೆ.

LEAVE A REPLY

Please enter your comment!
Please enter your name here