Home ಕ್ಲಾಸಿಪೈಡ್ ನೀರು ಕುಡಿಯುವುದು ಹೇಗೆ?

ನೀರು ಕುಡಿಯುವುದು ಹೇಗೆ?

39
0
SHARE

ಆಯುರ್ವೇದದಲ್ಲಿ ನೀರು ಕುಡಿಯುವುದು ಹೇಗೆ ಎಂಬುದನ್ನು ವಿವರಿಸಲಾಗಿದೆ.

1). ಊಟಕ್ಕೆ ಕುಳಿತುಕೊಳ್ಳುವ ಹಾಗೆ ನೀರು ಕುಡಿಯಲೂ ಕುಳಿತುಕೊಳ್ಳಿ.

2). ಒಂದೇ ಸಲ ಗಟಗಟನೇ ನೀರನ್ನು ಕುಡಿಯಬೇಡಿ. ಒಂದೊಂದೇ ಗುಟುಕು ಕುಡಿಯುತ್ತಾ, ಅದನ್ನು ನುಂಗಿ, ಉಸಿರಾಡಿ, ನಿಧಾನವಾಗಿ ಚೇತರಿಸಿಕೊಳ್ಳಿರಿ.

3). ದಿನಪೂರ್ತಿ ಆಗಾಗ್ಗೆ ನೀರು ಕುಡಿಯುವುದು ಅತ್ಯಗತ್ಯ. ಒಮ್ಮೆಲೇ ಕುಡಿಯುವ ನೀರು ಒಮ್ಮೆಲೇ ಮೂತ್ರದ ಮುಖಾಂತರ ಹೊರಹೋಗುತ್ತದೆ. ಹಾಗಾಗಿ ದೇಹಕ್ಕೆ ಉಪಯುಕ್ತವಾಗಲು ನೀರನ್ನು ಹಾಗಾಗೆ ಕುಡಿಯಬೇಕು.

4). ಅತಿ ತಣ್ಣಗಿರುವ ನೀರು, ಐಸ್ನೀರು ನಿಮ್ಮ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ.

5). ಊಟದ ಮಧ್ಯೆ ಮಧ್ಯೆ ಸ್ವಲ್ಪ ಸ್ವಲ್ಪ ನೀರು ಕುಡಿಯಿರಿ. ನಿಮ್ಮ ಹೊಟ್ಟೆ 25% ನೀರಿನಿಂದ ತುಂಬಿದರೆ, 50% ಆಹಾರದಿಂದ ತುಂಬಿರಬೇಕು. ಇನ್ನು 25% ಹಾಗೇ ಖಾಲಿಯಾಗಿರಬೇಕು. ಆಗಲೇ ಜೀರ್ಣಕ್ರಿಯೇ ಸರಿಯಾಗಿ ನಡೆಯುತ್ತದೆ.

6). ನಿಮಗೆ ಬಾಯಾರಿದಾಗ ನೀರು ಕುಡಿಯಿರಿ. ನಾಲಿಗೆ, ತುಟಿ-ಬಾಯಿಗಳು ನೀಡುವ ಸಂದೇಶಗಳನ್ನು ಆಲಕ್ಷಿಸಬೇಡಿ,

7). ಗಂಟಲು, ನಾಲಿಗೆ, ತುಟಿಗಳಲ್ಲಿ ಯಾವಾಗಲೂ ತೇವಾಂಶವಿರಬೇಕು. ಆಗ ಮಾತು, ಧ್ವನಿ ಸ್ಪಷ್ಟವಾಗಿ, ಇಂಪಾಗಿ ಇರುತ್ತದೆ.

8). ನಿದ್ರೆ ಮಾಡುವ ಸಮಯ ಸುಮಾರು 7 ರಿಂದ 9 ಗಂಟೆ ಕಾಲ ನಾವು ನೀರು ಕುಡಿಯದಿರುವ ದೀರ್ಘ ಸಮಯವದು. ಆದರೆ ನಿದ್ರೆ ಮಾಡುವಾಗಲೂ ಉಸಿರಾಡುತ್ತೇವಷ್ಟೇ. ಉಸಿರಾಟದ ಮೂಲಕ, ಚರ್ಮದ ಮೂಲಕ ನಿರಂತರವಾಗಿ ನೀರನ್ನು ಹೊರಹಾಕುತ್ತೇವೆ. ಹಾಗಾಗಿ ನಿದ್ರೆಯ ನಡುವೆಯೂ ಎಚ್ಚರವಾದಾಗ ನೀರು ಕುಡಿಯುವುದು ಆರೋಗ್ಯಕರವಾದ ಸಂಗತಿ.

LEAVE A REPLY

Please enter your comment!
Please enter your name here