Home ಕ್ಲಾಸಿಪೈಡ್ ಓದಿದ್ದು ಕೇವಲ 1ನೇ ತರಗತಿ ರಚಿಸಿದ್ದು 4 ಕಾವ್ಯ, 10ಪುರಾಣ

ಓದಿದ್ದು ಕೇವಲ 1ನೇ ತರಗತಿ ರಚಿಸಿದ್ದು 4 ಕಾವ್ಯ, 10ಪುರಾಣ

29
0
SHARE

ಅಕ್ಷರ ಬರೆಯುವುದಕ್ಕೆ ಬರದಿದ್ದರೇನು ಓದುವುದಕ್ಕೆ ಬಂದರೆ ಸಾಕು, ದೇಶ ಸುತ್ತಬಹುದು ಕೋಶ ಓದುಬಹುದು ಎನ್ನುವ ಮಾತಿದೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ 1ನೇ ಕ್ಲಾಸ್ ಓದಿದ್ದರೂ ಅವರ ಸಾಹಿತ್ಯ ಕೃಷಿ ಮಾತ್ರ ಎಂತಹವರನ್ನೂ ಮೆಚ್ಚಿಸುವಂತಹದ್ದಾಗಿದೆ.

ಗದಗದ ಬೆಟಗೇರಿ ನಿವಾಸಿ ರಾಮಣ್ಣ ಬ್ಯಾಟಿ ಕೇವಲ ಒಂದನೇ ಕ್ಲಾಸ್ ಓದಿದ್ದರೂ ಅವರಿಗೆ ಸಾಹಿತ್ಯ ಎನ್ನುವುದು ರಕ್ತಗತವಾಗಿ ಬಂದಿದೆ. ಓದುವುದಕ್ಕೆ ಬಂದರೂ ಬರೆಯುವುದಕ್ಕೆ ಕಷ್ಟ. ಆದರೂ ಓದಿನಲ್ಲಿ ಪಾಂಡಿತ್ಯ ಪಡೆದಿರುವ ರಾಮಣ್ಣ, 4ಕಾವ್ಯಗಳು, 10ಪುರಾಣಗಳು ಹಾಗೂ 40ಕ್ಕೂ ಅಧಿಕ ಕೃತಿಗಳನ್ನು ಬರೆಸಿದ್ದಾರೆ.

25ನೇ ವಯಸ್ಸಿನಿಂದ ಸಾಹಿತ್ಯ ಕೃಷಿ ಶುರು ಮಾಡಿದ ರಾಮಣ್ಣ, ಗೌರಿಶಂಕರ ಚರಿತಾಮೃತ, ಬಾಬಾ ಸಾಹೇಬ್ ಅಂಬೇಡ್ಕರ್ ಪುರಾಣ, ಬಸವ ಪುರಾಣ, ಗಣೇಶ ಚರಿತೆ ಪುರಾಣ ಸೇರಿದಂತೆ 10 ಪುರಾಣಗಳು ಇವರಿಂದ ರಚನೆ ಮಾಡಿದ್ದಾರೆ.
ಮಗಳು ಬರೆಯುತ್ತಾಳೆ:

ರಾಮಣ್ಣ, ವಿಷಯವನ್ನು ಹೇಳುತ್ತಾ ಹೋದಂತೆ ಸೆಕೆಂಡ್ ಪಿಯುಸಿ ಓದುತ್ತಿರುವ ಮಗಳು ಗಾಯತ್ರಿ ಬರೆಯುತ್ತಾ ಹೋಗುತ್ತಾಳೆ. ಹೀಗೆ ಬರೆದ ವಿಷಯವನ್ನು ಇವರದ್ದೇ ಆದ ಗಾಯತ್ರಿ ಪ್ರಕಾಶನದಲ್ಲಿ ಪ್ರಿಂಟ್ ಹಾಕಲಾಗುತ್ತದೆ. ಪ್ರಿಂಟ್ ಖರ್ಚುಗಳನ್ನು ದಾನಿಗಳೇ ಭರಿಸುತ್ತಾರೆ. ಮೊದಲು ನೇಕಾರಿಕೆ ಮಾಡುತ್ತಿದ್ದ ರಾಮಣ್ಣ, ಈಗ ವಯಸ್ಸಾಗಿರುವುದರಿಂದ ಆ ಕೆಲಸವನ್ನು ನಿಲ್ಲಿಸಿ ಸಾಹಿತ್ಯ ಕೃಷಿಯಲ್ಲಿ ಹೆಚ್ಚು ತೊಡಗುತ್ತಿದ್ದಾರೆ

ತೃವನಪ್ತಿಕರ ಜೀ:  ಇನ್ನು ಮಗಳು ಆಗಾಗ ಕೂಲಿ ಕೆಲಸ ಮಾಡುತ್ತಾಳೆ. ಜೊತೆಗೆ ಪುಸ್ತಕ ಕೊಂಡೊಯ್ಯುವ ಮಂದಿ ತಿಂಗಳಿಗೆ ಒಂದಷ್ಟು ಹಣ ಕೊಡುತ್ತಾರೆ. ಅಲ್ಲದೇ ಇಲ್ಲಿನ ತೋಂಟದಾರ್ಯ ಮಠದಿಂದ ಪ್ರತಿ ತಿಂಗಳು ಅಕ್ಕಿ, ಬೇಳೆ ಬರುತ್ತದೆ. ಹೀಗಾಗಿ ಸಾಹಿತ್ಯ ಕೃಷಿಯ ಜೊತೆ ಜೀವನ ತೃಪ್ತಿಕರವಾಗಿದೆ.

ಸದ್ಯ ರಾಮಣ್ಣ ಸಾಧನೆಯನ್ನು ಗಮನಿಸಿರುವ ವಿವಿಧ ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. ಅಲ್ಲದೇ ಇವರು ತಾಲ್ಲೂಕು ಕನ್ನಡ ಸಾಹಿತ್ಯ ಸಮೇಳನಾಧ್ಯಕ್ಷರನ್ನಾಗಿಯೂ ಮಾಡಲಾಗಿತ್ತು. ಗೆಳೆಯರ ಸಹಕಾರ, ಮನೆಯವರ ಪ್ರೋತ್ಸಾಹದಿಂದ ರಾಮಣ್ಣ ದೊಡ್ಡ ಸಾಹಿತಿಯಾಗಿ ಹೊರಹೊಮ್ಮುತ್ತಿದ್ದಾರೆ.

LEAVE A REPLY

Please enter your comment!
Please enter your name here