Home ಕ್ಲಾಸಿಪೈಡ್ ಬೆಂಗಳೂರಿನಲ್ಲಿ ದೇಶದ ಮೂರನೇ ಚರ್ಮ ಬ್ಯಾಂಕ್/ಬಡ ರೋಗಿಗಳಿಗೆ ಇದು ವರದಾನ

ಬೆಂಗಳೂರಿನಲ್ಲಿ ದೇಶದ ಮೂರನೇ ಚರ್ಮ ಬ್ಯಾಂಕ್/ಬಡ ರೋಗಿಗಳಿಗೆ ಇದು ವರದಾನ

27
0
SHARE

ಬೆಂಕಿ ಅವಘಡ, ರಸ್ತೆ ಅಪಘಾತ, ಆಸಿಡ್ ದಾಳಿ, ನಾನಾ ಧರ್ಮ ಕಾಯಿಲೆಗಳಿಗೆ ತುತ್ತಾಗಿ ಚರ್ಮದ ಸೌಂದರ್ಯ ಹಾಳಾಗಿದ್ದವರು ಇನ್ನು ಚಿಂತಿಸಬೇಕಿಲ್ಲ. ರಾಜ್ಯದಲ್ಲೂ ಶೀಘ್ರದಲ್ಲೇ ಚರ್ಮ ಬ್ಯಾಂಕ್ ಆರಂಭಗೊಳ್ಳಲಿದ್ದು ಚರ್ಮ ರೋಗಿಗಳಿಗೆ ಇದು ವರದಾನವಾಗಲಿದೆ.
ಸುಟ್ಟ ಗಾಯಗಳಿಂದ ಉಂಟಾಗಬಹುದಾದ ಮರಣ ತಡೆಯಲು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮ ಬ್ಯಾಂಕ್ ಸ್ಥಾಪಿಸಲಾಗಿದ್ದು, ರಾಜ್ಯದ ಮೊದಲ ಹಾಗೂ ದೇಶದ ಮೂರನೇ ಸ್ಕಿನ್ ಬ್ಯಾಂಕ್ ಇದಾಗಿದೆ. ಒಂದೆರಡು ವಾರಗಳಲ್ಲಿ ಸಾರ್ವಜನಿಕ ಸೇವೆಗೆ ಸಿದ್ಧಗೊಳ್ಳಲಿದೆ. ರೋಟರಿಯವರ ಸಹಕಾರದಲ್ಲಿ ಆಶೀರ್ವಾದ ಪೈಪ್ ಪ್ರೈವೇಟ್ ಲಿಮಿಟೆಡ ಧರ್ಮ ಬ್ಯಾಂಕ್ ಸ್ಥಾಪನೆಗೆ 45 ಲಕ್ಷ ರೂ. ದೇಣಿಗೆ ನೀಡಿದ್ದು, ಬ್ಯಾಂಕ್ಗೆ ‘ಮಿಡ್ಟೌನ್ ರೋಟರಿ ಆಶಿರ್ವಾದ್ ಚರ್ಮ ಬ್ಯಾಂಕ್’ ಎಂದು ಹೆಸರಿಡಲಾಗಿದೆ.

ಶೇ.40 ರಿಂದ 50 ರಷ್ಟು ಸುಟ್ಟಗಾಯಗಳಾಗಿದ್ದರೆ ಅದೇ ವ್ಯಕ್ತಿಯ ದೇಹದ ಬೇರೆ ಭಾಗದ ಚರ್ಮವನ್ನು ತೆಗೆದು ಸುಟ್ಟ ಭಾಗಕ್ಕೆ ಅಳವಡಿಸಿ ಚಿಕಿತ್ಸೆ ನೀಡಬಹುದು. ಆದರೆ, ದೇಹದ ಶೇ.50ಕ್ಕೂ ಹೆಚ್ಚು ಭಾಗ ಸುಟ್ಟು ಹೋಗಿದ್ದಲ್ಲಿ ದಾನಿಗಳ ಚÀರ್ಮ ಬೇಕೇ ಬೇಕು. ಅಂತಹ ಸಮಯದಲ್ಲಿ ಅನುಕೂಲ ಕಲ್ಪಿಸಲು ಚರ್ಮ ಬ್ಯಾಂಕ್ ಕಾರ್ಯಪ್ರವೃತ್ತವಾಗಲಿದೆ. ಪ್ರಸ್ತುತ ಮುಂಬೈನಲ್ಲಿರುವ ನ್ಯಾಷನಲ್ ಬರ್ನ್ ಸೆಂಟರ್ನ ಸ್ಕಿನ್ ಬ್ಯಾಂಕ್ನಿಂದ ಚÀರ್ಮ ತರಿಸಲಾಗುತ್ತಿದ್ದು, ಇನ್ನು ಮುಂದೆ ಸ್ಥಳೀಯವಾಗಿಯೇ ಚರ್ಮವನ್ನು ಸಂಗ್ರಹಿಸಿ ಅಗತ್ಯವಿರುವ ರೋಗಿಗಳಿಗೆ ಅಳವಡಿಸುವ ಪ್ರಕ್ರಿಯೆ ನಡೆಯಲಿದೆ.
ತಿಂಗಳಿಗೆ 200 ಪ್ರಕರಣ
ಆತ್ಮಹತ್ಯೆ, ಗ್ಯಾಸ್ಸಿಲಿಂಡರ್ ಸ್ಪೋಟ, ವರದಕ್ಷಿಣೆ ಕಿರುಕುಳ ಮುಂತಾದ ಪ್ರಕರಣಗಳಲ್ಲಿ ಗಾಯಗೊಂಡಿರುವರನ್ನು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನುರಿತ ತಾಂತ್ರಿಕ ವರ್ಗ ಇರುವುದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ತಿಂಗಳಿಗೆ 180 ರಿಂದ 200 ಗಾಯಾಳುಗಳು ದಾಖಲಾಗುತ್ತಾರೆ.
ಈಗ ಚÀರ್ಮ ಬ್ಯಾಂಕ್ ಎಲ್ಲಿವೆ?
ಮುಂಬೈನಲ್ಲಿ ನ್ಯಾಷನಲ್ ಬರ್ನ್ ಸೆಂಟರ್, ಚೆನೈನ ಸ್ಕಿನ್ ಬರ್ನ್ ಕೇರ್ ಸೆಂಟರ್ನಲ್ಲಿ ಈಗಾಗಲೇ ಇವೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದೇಶದ ಮೂರನೇ ಸ್ಕಿನ್ ಬ್ಯಾಂಕ್ ಸ್ಥಾಪನೆಗೊಳ್ಳಲಿದೆ.

LEAVE A REPLY

Please enter your comment!
Please enter your name here