Home ಕ್ಲಾಸಿಪೈಡ್ ಪೋಲಿಸ್ ಇಲಾಖೆಯಲ್ಲೊಬ್ಬ ಸಾಧಕ ಉದಯಕುಮಾರ್ ನಾಯ್ಡು

ಪೋಲಿಸ್ ಇಲಾಖೆಯಲ್ಲೊಬ್ಬ ಸಾಧಕ ಉದಯಕುಮಾರ್ ನಾಯ್ಡು

30
0
SHARE

ಎರಡೆರಡು ಕಲೆಗಳಲ್ಲಿ ನಿಪುಣರಾಗಿರುವವರು ತೀರಾ ವಿರಳ. ಕ್ರೀಡೆಯಲ್ಲಿ ಸಾಧನೆ ಮಾಡಿದವರು ಸಂಗೀತ ಅಥವಾ ಇನ್ನಿತರ ಕ್ಷೇತ್ರಗಳತ್ತ ಗಮನಹರಿಸುವುದು ಕಡಿಮೆ. ಏಕೆಂದರೆ ದೈನಂದಿನ ದೈಹಿಕ ಕಸರತ್ತಿನ ಜೊತೆ ಅವರಿಗೆ ಇತರ ಕಲೆಗಳನ್ನು ಕಲಿಯಲು ಸಾಧ್ಯವಾಗುವುದಿಲ್ಲ ಅದೇ ರೀತಿ ಸಂಗೀತ, ಕಲಿಯುವವರಿಗೂ ಇತರೇ ಕಲೆಗಳತ್ತ ಚಿತ್ತಹರಿಸಲು ಅವಕಾಶ ಸಿಗುವುದಿಲ್ಲ. ಆದರೆ, ಇಲ್ಲೊಬ್ಬ ಕ್ರೀಡಾಪಟು ಅರ್ಥಾತ್ ಪವರ್ ಲಿಫ್ಟರ್ ಸುಗಮ ಸಂಗೀತ ಕ್ಷೇತ್ರದಲ್ಲೂ ಮಿಂಚುವ ಮೂಲಕ ರಾಜ್ಯದೆಲ್ಲೆಡೆ ಹೆಸರು ವಾಸಿಯಾಗಿದ್ದಾರೆ, ಅವರೇ ಸಾಗರದ ಉದಯಕುಮಾರ್ ನಾಯ್ಡು.

ನಾಯ್ಡು ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸದ್ಯ ಸಾಗರ ಗ್ರಾಮಾಂತರ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದಾರೆ. ವೃತ್ತಿಯಿಂದ ಪೊಲೀಸ್ ಆಗಿ ನಾಗರಿಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದಾದರೂ ಪ್ರವೃತ್ತಿಯಿಂದ ಕ್ರೀಡಾಪಟು ಮತ್ತು ಉತ್ತಮ ಹಾಡುಗಾರರೂ ಆಗಿ ಹೆಸರು ಗಳಿಸಿದ್ದಾರೆ. ತಮ್ಮ 50ರ ಹರಯದಲ್ಲೂ ಇಂದಿಗೂ ಸಹ ಪವರ್ ಲಿಪ್ಟಿಂಗ್ ಸ್ಪಧೆರ್Éಯಲ್ಲಿ ಭಾಗವಹಿಸುತ್ತಿದ್ದಾರೆ. 1984ರಲ್ಲಿ ಚಿನ್ನದ ಪದಕವನ್ನು ಗಳಿಸುವ ಮೂಲಕ ಪದಕಗಳ ಬೇಟೆ ಆರಂಭಿಸಿದ ಇವರು, ಇಂದಿಗೂ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದಲ್ಲೆಲ್ಲಾ ಪ್ರಶಸ್ತಿ ಮುಡಿಗೇರಿಸಿಯೇ ಮರುಳುತ್ತಿದ್ದಾರೆ. ಅಂತರ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಯೋಗ್ಯತಾ ಪ್ರಮಾಣ ಪತ್ರ ಇವರಿಗೆ ದಕ್ಕಿದೆ. ರಾಜ್ಯ ಮಟ್ಟದ ಸ್ಪರ್ದೆಗಳಲ್ಲಿ ಪದಕಗಳನ್ನು ಬಾಚಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಯೂ ಸಹ ಇವರ ಮುಡಿಗೇರಿದೆ. ಮಧ್ಯಪ್ರದೇಶ ಮುಂಬೈ, ಅಹಮದ್ ನಗರ, ಕೇರಳದ ಅಲಪ್ಪುಜಾ, ಭಿಲಾಯ್, ಚೆನೈನಲ್ಲಿ ನಡೆದ ಸ್ಪರ್ಧೆಗಳಲ್ಲಿ ಪದಕ ಧರಿಸಿಯೇ ಬಂದಿದ್ದಾರೆ.

ಇದರೊಟ್ಟಿಗೆ ಸುಗುಮ ಸಂಗೀತ ಕ್ಷೇತ್ರದಲ್ಲಿ ಇವರ ಹೆಸರು ಬಹುದೊಡ್ಡದು. ಭಕ್ತಗೀತೆಯನ್ನು ತನ್ಮಯದಿಂದ ಹಾಡುವಾಗ ಎಂತಹವರೂ ಸಹ ಆ ರಾಗ, ಲಯಕ್ಕೆ ತಲೆದೂಗಲೇಬೇಕು. ಮಧುರ ಕಂಠವು ಇವರಿಗೆ ಸಿಕ್ಕ ದೊಡ್ಡ ವರವಾಗಿದೆ. ಹೆಸರಾಂತ ಸಂಗೀತ ನಿರ್ದೇಶಕ ಕಲ್ಯಾಣ್ ಕಾರ್ಯಕ್ರಮದಲ್ಲಿ ಹಾಡಿದ್ದಾರೆ. ಡಾ.ರಾಜಕುಮಾರ್, ವಿಷ್ಣುವರ್ಧನ್, ವಿನಯಾಪ್ರಸಾದ್, ದರ್ಶನ್ ಮೊದಲಾದವರ ಜೊತೆ ಕಾರ್ಯಕ್ರಮ ನೀಡಿದ್ದಾರೆ. ಆಕಾಶವಾಣಿ ಮತ್ತು ಕನ್ನಡದ ಬಹುತೇಕ ಚಾನೆಲ್ಗಳ ಕಾರ್ಯಕ್ರಮದಲ್ಲೂ ಹಾಡಿದ್ದಾರೆ. ಇಷ್ಟೇ ಏಕೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಮ್ಮ ಗಾಯನ ಸುಧೆಯಲ್ಲಿ ಹರಿಸಿದ್ದಾರೆ. ಚಂಬಲ್ ಕಣಿವೆಯ ಸಮೀಪ ಇರುವ ಜೌರ ಎಂಬಲ್ಲಿ ನಡೆದ ರಾಷ್ಟ್ರೀಯ ಯುವ ಮೇಳದಲ್ಲಿ ಭಾಗವಹಿಸಿ ಹಾಡಿದ ಕೀರ್ತಿ ನಾಯ್ಡು ಅವರದ್ದು. ಇವರ ಈ ಸಾಧನೆಗೆ ಹರಿದುಬಂದ ಪ್ರಶಸ್ತಿಗಳು ಸಾಲುಸಾಲು. 2007ರಲ್ಲಿ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ, ನಾಡರತ್ನ, ರಾಷ್ಟ್ರ ರತ್ನ, ವಿಶ್ವಮಾನವ ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, ಕಾಯಕರತ್ನ, ಶ್ರೀಗಂಧ ಸಿಂಧೂರ ಮೊದಲಾದ ಪ್ರಶಸ್ತಿಗಳು ಇವರ ಕಂಠಸಿರಿಗೆ ಸಂದಿವೆ. 2014ರಲ್ಲಿ ಕೀನ್ಯಾ ದೇಶದಲ್ಲಿ ನಡೆದ ವಿಶ್ವ ಕನ್ನಡ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಿದ್ದಾರೆ.

ಪೋಲೀಸ್ ಇಲಾಖೆಯಲ್ಲಿ ಕೆಲಸದ ಒತ್ತಡದ ಮಧ್ಯೆ ಇತರೆ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಸುಲಭದ ಕೆಲಸವಲ್ಲ. ಜೊತೆಗೆ, ಅಲ್ಲಿನ ಕಾರ್ಯ ಭಾರವೇ ಇತರೇ ಹವ್ಯಾಸಗಳನ್ನು ಸ್ಥಗಿತಗೊಳಿಸಿ ಬಿಡುತ್ತದೆ. ಇಂತಹುದರಲ್ಲಿ ನಾಯ್ಡು ಅವರು, ಇಲಾಖೆಯ ದೈನಂದಿನ ಕೆಲಸದ ನಡುವೆಯೂ ಹಾಡು ಎಂದರೆ ಹಾಡುತ್ತಾರೆ. ಭಾರ ಎತ್ತುವುದನ್ನೂ ಮಾಡುತ್ತಿದ್ದಾರೆ. ಪೋಲೀಸ್ ಇಲಾಖೆಯಲ್ಲಿ ಇರುವ ಅಪೂರ್ವ ಪ್ರತಿಭೆಗಳಲ್ಲಿ ಇವರದು ಎದ್ದು ಕಾಣುವ ವ್ಯಕ್ತಿತ್ವ. ಇಂತಹ ಪ್ರತಿಭೆಗಳಿಗೆ ಇಲಾಖೆಯವರು ಪ್ರೋತ್ಸಹ ನೀಡಿದ್ದಾರೆ. ವಾರ್ಷಿಕ ಕಾರ್ಯಕ್ರಮದ ಸಂದರ್ಭದಲ್ಲಿ ಸನ್ಮಾನಿಸುವ ಕೆಲಸವನ್ನು ಹಿರಿಯ ಅಧಿಕಾರಿಗಳು ಮಾಡುವ ಮೂಲಕ ಅವರಲ್ಲಿ ಇನ್ನಷ್ಟು ಕಲಾಚೈತನ್ಯ ಮೂಡುವಂತೆ ಮಾಡುತ್ತಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುವಾಗಿ ಮಿಂಚುತ್ತಿರುವ ನಾಯ್ಡು, ಭದ್ರಾವತಿ ಆಕಾಶವಾಣಿ ಕಲಾವಿದರೂ ಆಗಿದ್ದಾರೆ.

LEAVE A REPLY

Please enter your comment!
Please enter your name here