Home ಕ್ಲಾಸಿಪೈಡ್ ವಿಶ್ವವಿದ್ಯಾನಿಲಯಗಳ ದೂರ ಶಿಕ್ಷಣ ಕಲಿಕೆಗೆ ಸ್ಕೂಲ್ ಗುರುವಿನ ಇ-ಕಲಿಕೆಯ ಅದ್ಭುತ ಪ್ಲಾಟ್ ಫಾರಂ

ವಿಶ್ವವಿದ್ಯಾನಿಲಯಗಳ ದೂರ ಶಿಕ್ಷಣ ಕಲಿಕೆಗೆ ಸ್ಕೂಲ್ ಗುರುವಿನ ಇ-ಕಲಿಕೆಯ ಅದ್ಭುತ ಪ್ಲಾಟ್ ಫಾರಂ

34
0
SHARE

ವಿಶ್ವವಿದ್ಯಾನಿಲಯಗಳ ದೂರ ಶಿಕ್ಷಣ ಕಲಿಕೆಗೆ ಸ್ಕೂಲ್ ಗುರುವಿನ ಇ-ಕಲಿಕೆಯ ಅದ್ಭುತ ಪ್ಲಾಟ್ ಫಾರಂ
ಡೊಕೆಬೋ ಸಂಸ್ಥೆಯ ವರದಿಯ ಪ್ರಕಾರ ಇ-ಲರ್ನಿಂಗ್ ಕ್ಷೇತ್ರದಲ್ಲಿ ಬಂಡವಾಳದ ಹರಿವು ಕಳೆದ 5 ವರ್ಷಗಳಲ್ಲಿ ಪ್ರಪಂಚದಾದ್ಯಂತ ಸುಮಾರು 6 ಬಿಲಿಯನ್ ಯುಎಸ್ ಡಾಲರ್ ನಷ್ಟು ಏರಿಕೆಯಾಗಿದೆ. ಭಾರತೀಯ ಶಿಕ್ಷಣ ಮಾರುಕಟ್ಟೆಯಲ್ಲಿ 2014ರಿಂದ2019ರೊಳಗೆ ಶೇ.17.50ರಷ್ಟು ಏರಿಕೆಯ ಗುರಿ ಹೊಂದಿದೆ ಎಂದು ಟೆಕ್ ನಾವಿಯೋಸ್ ವರದಿ ಮಾಡಿದೆ. ಇದು ಪ್ರಪಂಚದಲ್ಲಿಯೇ ಅತೀ ಹೆಚ್ಚಿನ ಬೆಳವಣಿಗೆಯಾಗಬಹುದೆಂದು ಹೇಳಲಾಗುತ್ತಿದೆ.

ಪ್ರಸ್ತುತ ಭಾರತೀಯ ಶಿಕ್ಷಣ ಮಾರುಕಟ್ಟೆಯ ಶೇ.50ರಷ್ಟು ಭಾಗವನ್ನು ಉನ್ನತ ಶಿಕ್ಷಣಕ್ಕಾಗಿ ಮೀಸಲಿಡಲಾಗುತ್ತಿದೆ. ಈ ದೂರದೃಷ್ಟಿಯನ್ನು ಸ್ಕೂಲ್ ಗುರು ಸಂಸ್ಥೆಯ ಸಂಸ್ಥಾಪಕರು 2012ರಲ್ಲಿಯೇ ಹೊಂದಿದ್ದರು. ಸರ್ಕಾರ ಶಿಕ್ಷಣ ಕ್ಷೇತ್ರದ ಕಡೆ ಗಮನ ಹರಿಸಿ, ಪ್ರೋತ್ಸಾಹ ನೀಡಿದಾಗ ಭೌತಿಕ ಮೂಲಸೌಕರ್ಯಗಳನ್ನೂ ಸಹ ಹೆಚ್ಚಿಸಲೇಬೇಕೆಂಬ ವಿಷಯವನ್ನು ಸ್ಕೂಲ್ ಗುರು ಸಂಸ್ಥೆ ಸಂಸ್ಥಾಪಕರು ಮನಗಂಡಿದ್ದರು. ಆಗ ಸಾಮಾನ್ಯ ಜನರು ಉನ್ನತ ಶಿಕ್ಷಣದಿಂದ ವಂಚಿತರಾಗಬಹುದಾದ ಸಾಧ್ಯತೆಯೂ ಇತ್ತು. ಈ ಸಮಸ್ಯೆಗಳಿಗೆಲ್ಲಾ ಪರಿಹಾರವಾಗಿ ಸ್ಥಾಪನೆಯಾಯ್ತು ಸ್ಕೂಲ್ ಗುರು. ದೂರ ಶಿಕ್ಷಣದ ಸಮಸ್ಯೆಗೆ ಪರಿಹಾರ ಸಾಧ್ಯವಿತ್ತು. ದೂರ ಶಿಕ್ಷಣದ ವಿದ್ಯಾರ್ಥಿಗೂ ಓದಿಗೆ ಉತ್ತಮ ಸಲಕರಣೆಗಳನ್ನು ನೀಡುವ ಉದ್ದೇಶದಿಂದ ಸ್ಕೂಲ್ ಗುರು ಸಂಸ್ಥೆ ತನ್ನ ಕಾರ್ಯಾರಂಭ ಮಾಡಿತು. ಸ್ಕೂಲ್ ಗುರುನ ಸಹಸಂಸ್ಥಾಪಕ ಶಂತÀನು ರೂಜ್ಗೆ ಇದೇನು ಹೊಸ ಅನುಭವವಾಗಿರಲಿಲ್ಲ. ಉದ್ದಿಮೆದಾರನಾಗಿ ಶಂತನುಗೆ ಸುಮಾರು 18 ವರ್ಷಗಳ ಅನುಭವವಿತ್ತು. ಪ್ಯಾರಾಡೈನ್, ಬ್ರಾಡ್ ಲೈನ್ ಕಂಪನಿಗಳ ಮೂಲಕ ಕಾಲೇಜುಗಳು ಮತ್ತಿತರ ಶಿಕ್ಷಣ ಸಂಸ್ಥೆಗಳಿಗೆ ಎಂಟರ್ ಪ್ರೈಸ್ ರಿಸೋರ್ಸ್ ಪ್ಲಾನಿಂಗ್ ಪರಿಹಾರ ನೀಡುವ ಕಾರ್ಯದ ಮೂಲಕ ತಮ್ಮ ಉದ್ಯಮದ ಪ್ರಮಾಣವನ್ನು ಆರಂಭಿಸಿದವರು ಶಂತನು.

ಸ್ಕೂಲ್ ಗುರು ಟೀಮ್

ಕೆಲ ಕಾಲದ ನಂತರ ತಮ್ಮ ಎರಡೂ ಕಂಪನಿಗಳನ್ನು ಗ್ಲಾಡೈನ್ ಟೆಕ್ನೋಸರ್ವ್ಗೆ ಮಾರಾಟ ಮಾಡಿದರು ಶಂತನು. ಅಲ್ಲಿ ರವಿ ರಂಗನ್ ಅವರ ಭೇಟಿಯಾಗುತ್ತೆ. ರವಿರಂಗ್ ಅವರಿಗೆ ಉದ್ಯಮಪತಿಯಾಗಿ 20 ವರ್ಷಗಳ ಅನುಭವವಿತ್ತು. ರವಿರಂಗನ್ ಕೂಡ ತಮ್ಮ ಕೊಮ್ಯಾಟ್ ಟೆಕ್ನಾಲಜೀಸ್ ಕಂಪನಿಯನ್ನು ಗ್ಲಾಡೈನ್ ಟೆಕ್ನೋಸರ್ವ್ಗೆ ಮಾರಾಟ ಮಾಡಿದ್ದರು. ಶಿಕ್ಷಣ ಕ್ಷೇತ್ರದ ಕುರಿತಾದ ಮಾಹಿತಿಯ ಗಟ್ಟಿ ತಳಹದಿ ಹಾಗೂ ಉದ್ದಿಮೆದಾರರಾಗಿದ್ದ ಅನುಭವದೊಂದಿಗೆ ಸ್ಕೂಲ್ ಗುರು ಸಂಸ್ಥೆ ರೂಪುಗೊಂಡಿತು. ನಂತರ ಈ ಸಂಸ್ಥೆಗೆ ಶಂತನುರವರ ಆತ್ಮೀಯ ಸ್ನೇಹಿತ ಅನಿಲ್ ಭಟ್ ಕೂಡ ಸೇರಿಕೊಂಡರು. ಕೇವಲ ಒಂದೂವರೆ ವರ್ಷದಲ್ಲೇ ಸ್ಕೂಲ್ ಗುರು ಸಂಸ್ಥೆಯ ಬಂಡವಾಳ ಹೂಡಿಕೆ 2 ಮಿಲಿಯನ್ ಅಮೇರಿಕನ್ ಡಾಲರ್ಗಳಿಗೆ ಏರಿಕೆಯಾಯಿತು.

ಇದರ ಕಾರ್ಯನಿರ್ವಹಣೆ ಹೇಗೆ?

ಮಾಹಿತಿ, ಸಂಪರ್ಕ ವ್ಯವಸ್ಥೆ ಒದಗಿಸುವ ಮೂಲಕ ಸ್ಕೂಲ್ ಗುರು ವಿಶ್ವವಿದ್ಯಾನಿಲಯ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡದೇ ತಂತ್ರಜ್ಞಾನ ಸಿಂಗಲ್ ಪ್ಲಾಟ್ ಫಾರಂ ಒದಗಿಸಿದೆ.ಈ ಸೇವೆ ಕೇವಲ ದಾಖಲಾತಿ, ಶುಲ್ಕ ಹಾಗೂ ವಿಚಾರಣೆಗಳಿಗೆ ಸೀಮಿತವಾಗದೇ ನಿರ್ವಹಣಾ ವ್ಯವಸ್ಥೆ ಕಲಿಕೆ ಮೂಲಕ ಮನೆಯಲ್ಲಿ ಕುಳಿತೇ ವಿವಿಗಳ ಬೋಧನಾ ವ್ಯವಸ್ಥೆಯ ಅನುಕೂಲ ಒದಗಿಸಿದೆ. ದೂರ ಶಿಕ್ಷಣದ ಮೂಲಕ ಸ್ಕೂಲ್ ಗುರು ಬಿಎ, ಬಿಸಿಎ, ಎಂಸಿಎನಂತಹ ಪೂರ್ಣಕಾಲಿಕ ಪದವಿಗಳನ್ನು ಪಡೆಯಲು ಸಹಕಾರಿಯಾಗಿದೆ. ಅಲ್ಲದೇ, ಕೌಶಲ್ಯ ಮತ್ತು ವಿರಾಮದ ವಿಷಯಗಳನ್ನೂ ಸಹ ತಿಳಿಸಿಕೊಡುತ್ತಿದೆ.

ವಿದ್ಯಾರ್ಥಿಗಳ ದೃಷ್ಟಿಯಲ್ಲಿ

ವಿದ್ಯಾರ್ಥಿಗಳಿಗೆ ಮುದ್ರಿತ ಸಾಮಗ್ರಿ ನೀಡುವುದಷ್ಟೇ ಅಲ್ಲದೇ ಸ್ಕೂಲ್ ಗುರು ಆಪ್ ಹೊಂದಿರುವ ಒಂದು ಮೆಮೋರಿ ಕಾರ್ಡ್ ಸಹ ನೀಡಲಾಗುತ್ತೆ. ಈ ಆಪ್ನಲ್ಲಿ ವಿವಿ ಮತ್ತು ಕೋರ್ಸ್ಗೆ ಸಂಬಂಧಿಸಿದಂತೆ ಜ್ಞಾನವನ್ನು ವೃದ್ಧಿಸುವ ಮಾಹಿತಿಯೂ ಇರುತ್ತದೆ. ವಿದ್ಯಾರ್ಥಿಗೆ ಏನಾದರೂ ಸಂಶಯ ಬಂದ ಪಕ್ಷದಲ್ಲಿ ಸ್ಕೂಲ್ ಗುರು ಆಪ್ ಮುಖಾಂತರ ವಿಷಯ ಸಂಬಂಧಿ ಉಪನ್ಯಾಸಕರನ್ನು ಸಂಪರ್ಕಿಸುವ ಅವಕಾಶವೂ ಇದರಲ್ಲಿದೆ. ಅಲ್ಲದೇ ವಿದ್ಯಾರ್ಥಿಯ ಮೊಬೈಲ್ನಲ್ಲಿ ಇಂಟರ್ ನೆಟ್ ಸೌಲಭ್ಯವಿದೆಯೋ ಇಲ್ಲವೋ ಎಂದು ಗುರುತಿಸುತ್ತದೆ. ಇಂಟರ್ ನೆಟ್ ಕನೆಕ್ಷನ್ ಇಲ್ಲದಿದ್ದರೆ ಗ್ರಾಫಿಕ್ ಫಾರ್ ಮ್ಯಾಟ್ ಎಸ್ಎಂಎಸ್ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತದೆ. ಇದು ವಿದ್ಯಾರ್ಥಿಗಳಿಗೆ ಒಂದು ಅತ್ಯುತ್ತಮ ವ್ಯವಸ್ಥೆಯಾಗಿದೆ.

ಮೊದಲ ಹಂತದಲ್ಲಿ 8 ರಾಜ್ಯಗಳ 11 ದೊಡ್ಡ ವಿಶ್ವವಿದ್ಯಾಲಯಗಳಲ್ಲಿ (ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ಉತ್ತರಖಂಡ) ಈ ಸೇವೆ ಆರಂಭವಾಗಿದ್ದು, 9 ಭಾರತೀಯ ಭಾಷೆಗಳ 170 ವಿಷಯಗಳನ್ನು ಬೋಧಿಸಲಾಗುತ್ತಿದೆ. ಇನ್ನೂ 4 ರಾಜ್ಯಗಳ 4 ವಿಶ್ವವಿದ್ಯಾಲಯದಲ್ಲಿ ಸೇವೆ ಆರಂಭಿಸುವ ಮಾತುಕತೆ ನಡೆದಿದೆ. ಈ ಶೈಕ್ಷಣಿಕ ವರ್ಷದಲ್ಲೇ ಅದು ಜಾರಿಗೆ ಬರುವ ಸಾಧ್ಯತೆಯೂ ಇದೆ. ಕೇವಲ 5 ಜನರಿಂದ ಆರಂಭವಾದ ಈ ಉದ್ದಿಮೆ ಈಗ 145 ಮಂದಿ ಸದಸ್ಯರನ್ನು ಹೊಂದಿದೆ. 11 ಪ್ರದೇಶಗಳಲ್ಲಿ ಸೇವೆಯೂ ಆರಂಭವಾಗಿದೆ. ಆದರೆ ಎಲ್ಲೂ ಮಾರುಕಟ್ಟೆ ಕುಸಿತ ಕಂಡಿಲ್ಲ.

ಆರ್ಥಿಕತೆ ಮತ್ತು ಬೆಳವಣಿಗೆ:

ವಿದ್ಯಾರ್ಥಿ ಒಮ್ಮೆ ಈ ಆನ್ ಲೈನ್ ಕೋರ್ಸ್ಗೆ ದಾಖಲಾದ ಮೇಲೆ ಆ ವಿದ್ಯಾರ್ಥಿ ಪಾವತಿಸುವ ಶುಲ್ಕದಲ್ಲಿ ಶೇ.30ರಿಂದ50ರಷ್ಟು ಶುಲ್ಕವನ್ನು ವಿಶ್ವವಿದ್ಯಾಲಯ ಮತ್ತು ಸ್ಕೂಲ್ ಗುರು ಹಂಚಿಕೊಳ್ಳುತ್ತದೆ. ವಾರ್ಷಿಕ ಬೆಳವಣಿಗೆಯ ಮಾದರಿಯಲ್ಲಿ ಪ್ರಥಮ ವರ್ಷದಲ್ಲಿ ಅಂದರೆ 2013ರಲ್ಲಿ 1500ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ 2014ರ ವೇಳೆಗಾಗಲೇ 6000 ವಿದ್ಯಾರ್ಥಿಗಳಿಗೆ ಏರಿಕೆಯಾಗಿದೆ. 2015ರ ಅಂತ್ಯದ ವೇಳೆಗೆ 1.5 ಲಕ್ಷ ವಿದ್ಯಾರ್ಥಿಗಳಿಗೆ ಈ ಸ್ಕೂಲ್ ಗುರು ಸೇವೆ ಒದಗಿಸುವ ಗುರಿ ಹೊಂದಲಾಗಿದೆ. ವರ್ಷದ ಆರಂಭದ ನಾಲ್ಕೇ ತಿಂಗಳಲ್ಲಿ ನಿಶ್ಚಿತ ಗುರಿಯ ಅರ್ಧದಷ್ಟು ಅಂದರೆ 1 ಲಕ್ಷ ವಿದ್ಯಾರ್ಥಿಗಳು ಈ ಸೇವೆಗೆ ಒಳಪಟ್ಟಿದ್ದಾರೆ. ಮಹಾರಾಷ್ಟ್ರದ ಯಶವಂತರಾವ್ ಚವನ್ ಮುಕ್ತ ವಿವಿಯೊಂದರಿಂದಲೇ 1 ಲಕ್ಷದಷ್ಟು ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಮಾರುಕಟ್ಟೆ ಕುರಿತಂತೆ ಶಂತನು ಹೇಳುವಂತೆ ಈ ಬೆಳವಣಿಗೆ ಅನುಭವಾತೀತ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಸೇರುತ್ತಾರೆಯೇ ಹೊರತು ಸ್ಕೂಲ್ ಗುರುವಿಗಲ್ಲ. ಸ್ಕೂಲ್ ಗುರು ವ್ಯವಸ್ಥೆ ಹೊಂದಿರುವ ವಿವಿಗಳಲ್ಲಿ ವರ್ಷವೊಂದಕ್ಕೆ 20 ಲಕ್ಷ ವಿದ್ಯಾರ್ಥಿಗಳು ದಾಖಲಾಗುತ್ತಾರೆ.

ಕೆಲವು ವಿವಿಗಳಲ್ಲಿ ಆನ್ ಲೈನ್ ಕಲಿಕೆಯನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಕಡ್ಡಾಯಗೊಳಿಸುವ ಕುರಿತಂತೆ ಚಿಂತನೆ ನಡೆಯುತ್ತಿದೆ. ಅಲ್ಲದೇ ವಿವಿಗಳು ಆನ್ ಲೈನ್ ಶಿಕ್ಷಣಕ್ಕೆ ಇನ್ನಷ್ಟು ವಿಷಯಗಳನ್ನು ಸೇರಿಸುವ ನಿರ್ಧಾರಕ್ಕೂ ಬಂದಿವೆ. ಮೊದಲ ವರ್ಷದಲ್ಲಿ ವಿವಿಗಳು 2 ವಿಷಯಗಳನ್ನು ಆನ್ ಲೈನ್ಗೆ ಸೇರಿಸುತ್ತಿದ್ದವು. ಪ್ರಸ್ತುತ 20 ವಿಷಯಗಳನ್ನು ಆನ್ ಲೈನ್ಗೆ ಸೇರಿಸಿವೆ. ಇದರಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಕೂಲ್ ಗುರು ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ. 2014 ರಲ್ಲಿ ಸ್ಕೂಲ್ ಗುರು ಸುಮಾರು 3.5 ಕೋಟಿ ಆದಾಯ ಗಳಿಸಿದೆ.ಈ ವರ್ಷ 20 ಕೋಟಿ ದಾಟುವ ನಿರೀಕ್ಷೆ ಹೊಂದಿದೆ.

ಮುಂದಿನ ಯೋಜನೆ:

ಮುಂದಿನ 2 ವರ್ಷದಲ್ಲಿ ಇದು 25 ಯುನಿವರ್ಸಿಗಳಲ್ಲಿ ಒಂದು ಮಿಲಿಯನ್ ವಿದ್ಯಾರ್ಥಿಗಳ ದಾಖಲಾತಿಯತ್ತ ಗಮನ ಹರಿಸಿದೆ. ಜೊತೆಗೆ ಸಂಸ್ಥೆ ವಿದೇಶಿ ವಿವಿಗಳ ಅದರಲ್ಲೂ ಆಫ್ರಿಕಾ ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳ ವಿದ್ಯಾಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದೆ. ಮನೆಯಲ್ಲಿ ಕುಳಿತೇ ಆನ್ ಲೈನ್ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಸೌಲಭ್ಯ ಒದಗಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ. ಡಿಸೆಂಬರ್ಗಿಂತ ಮುಂಚೆ ಈ ಸೌಕರ್ಯ ಲಾಂಚ್ ಮಾಡುವ ತಯಾರಿ ನಡೆದಿದೆ. ಸರ್ಕಾರ್ ಆನ್ ಲೈನ್ ಎಕ್ಸಾಮಿನೇಶನ್ ವ್ಯವಸ್ಥೆ ಜಾರಿ ತರುವ ಮುನ್ನವೇ ಆನ್ ಲೈನ್ ಪರೀಕ್ಷಾ ಸೇವೆಗಳನ್ನು ಸಿದ್ಧವಾಗಿಟ್ಟುಕೊಳ್ಳುವ ಪ್ರಯತ್ನದಲ್ಲಿದೆ ಸ್ಕೂಲ್ ಗುರು. ಅಲ್ಲದೇ ಸರ್ಕಾರದ ಸಾಮಾನ್ಯ ಸೇವೆ ಕೇಂದ್ರಗಳ ಜೊತೆ ಸಹಭಾಗಿತ್ವ ಕೂಡ ಹೊಂದುವ ಪ್ರಯತ್ನದಲ್ಲಿದೆ.

ಈ ಮೂಲಕ ಗ್ರಾಮಪಂಚಾಯತ್ ಹಂತದಲ್ಲಿ ಇ-ಲರ್ನಿಂಗ್ ಸೇವೆ ಒದಗಿಸುವ ಗುರಿ ಹೊಂದಿದೆ. ಸ್ಕೂಲ್ ಗುರು ಸದ್ಯ 3ಮಿಲಿಯನ್ ಅಮೇರಿಕನ್ ಡಾಲರ್ ಹೆಚ್ಚುವರಿ ಹೂಡಿಕೆಗೆ ಮುಂದಾಗಿದೆ. ಸುಮಾರು 40 ಮಿಲಿಯನ್ ಡಾಲರ್ ಹಣವÀನ್ನು ಶೈಕ್ಷಣಿಕ ತಂತ್ರಜ್ಞಾನದ ಅಭಿವೃದ್ಧಿಗೆ ಸ್ಕೂಲ್ ಗುರು ಹೂಡಿಕೆ ಮಾಡಿದೆ. ಇತ್ತೀಚೆಗಷ್ಟೇ ಸಿಗ್ರಿಡ್ ಬಹಿರಂಗ ಪಡಿಸದ ಮೊತ್ತವನ್ನು ಆಲಿಫ್ಯಾನ್ಸ್ ಕ್ಯಾಪಿಟಲ್ನಿಂದ ಹೂಡಿಕೆ ಮಾಡಿದೆ. ಹಾಗೆಯೇ ಎಡುಕಾರ್ಟ್ ಯುವರಾಜ್ ಸಿಂಗ್ರ ಯುವಿ ಕ್ಯಾನ್ವೆಂಚರ್ಸ್ ಹಾಗೂ 500 ವಿವಿಧ ಸಂಸ್ಥೆಗಳಿಗೆ 1 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಯುನೈಟೆಡ್ ಫಿನ್ಸೆಕ್ನಿಂದ ಹೂಡಿಕೆ ಮಾಡಿದೆ.

LEAVE A REPLY

Please enter your comment!
Please enter your name here