Home ಕ್ಲಾಸಿಪೈಡ್ ಬಾಲ ಕಾರ್ಮಿಕ ಮಕ್ಕಳಿಗೆ ಪುನರ್ವಸತಿ ನೀಡಿದ್ರು ನಿವೃತ್ತ ಎಸ್ಪಿ

ಬಾಲ ಕಾರ್ಮಿಕ ಮಕ್ಕಳಿಗೆ ಪುನರ್ವಸತಿ ನೀಡಿದ್ರು ನಿವೃತ್ತ ಎಸ್ಪಿ

39
0
SHARE

ಬಾಲ ಕಾರ್ಮಿಕ ಮಕ್ಕಳಿಗೆ ನಿವೃತ್ತ ಪೊಲೀಸ್ ಅಧಿಕಾರಿಗಳಿಂದ ಪುನರ್ವಸತಿ ಶಾಲೆ. ಶಾಲೆಯಲ್ಲೆ ಮಕ್ಕಳಿಗೆ ಕಲಿಕೆಯ ಜೊತೆಗೆ ಊಟ ವಸತಿ ಸೌಲಭ್ಯ, ಬಾಲ ಕಾರ್ಮಿಕ ಮಕ್ಕಳಿಗೆ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳ ಪಾಠ, ಬೆಳಕು ಸಂಸ್ಥೆಯ ಮೂಲಕ ಮಕ್ಕಳ ಬಾಳಲ್ಲಿ ಇಂಚರ ಮೂಡಿಸಿದ ಪೊಲೀಸ್ ಅಧಿಕಾರಿ ನಮ್ಮ ಇಂದಿನ ಪಬ್ಲಿಕ್ ಹೀರೋ.ಬಾಲ ಕಾರ್ಮಿಕ ಮಕ್ಕಳ ಶಿಕ್ಷಣಕ್ಕೆ ನೆರವಾಗಿರುವವರು ದಾವಣಗೆರೆಯ ನಿವೃತ್ತಿ ಎಎಸ್ಪಿ ರವಿನಾರಾಯಣ್. ಇವರು ಸೇವೆಯಲ್ಲಿದ್ದಾಗ ದಾವಣಗೆರೆಯ ಮಂಡಕ್ಕಿ ಭಟ್ಟಿ ಸೇರಿ ಇತರೆ ಕಡೆ ಧಾಳಿ ನಡೆಸಿ 200ಕ್ಕೂ ಹೆಚ್ಚು ಬಾಲ ಕಾರ್ಮಿಕ ಮಕ್ಕಳನ್ನು ಸಂರಕ್ಷಣೆ ಮಾಡಲಾಗಿದೆ. ಈ ವೇಳೆ ಕೆಲ ಮಕ್ಕಳನ್ನು ಅವರ ಪೋಷಕರ ಮನೆಗೆ ಕರೆದು ಕೊಂಡು ಹೋಗುತ್ತಾರೆ.

ಉಳಿದ ಮಕ್ಕಳಿಗೆ ತಾವೇ ಯಾಕೆ ಶಿಕ್ಷಣ ನೀಡಬಾರದು ಎಂದು ತಮ್ಮ ಸಹದ್ಯೋಗಿಗಳ ಜೊತೆ ಮಾತನಾಡಿ ರವಿನಾರಾಯಣ್ ಬೆಳಕು ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಇಂಚರ ಎಂಬ ಶಾಲೆ ತೆರೆದು ಮಕ್ಕಳಿಗೆ ಶಾಲೆಯನ್ನು ಆರಂಭಿಸುತ್ತಾರೆ. ದಾವಣಗೆರೆ ನಗರದ ವಿವಿಧೆಡೆ ಶಾಲೆಗಳನ್ನು ನಡೆಸಿ ನಂತರ ದಾವಣಗೆರೆ ತಾಲೂಕು ಕಲ್ಲಪನಹಳ್ಳಿಯಲ್ಲಿ ಜಾಗ ಖರೀದಿಸಿ ಒಂದು ವಸತಿ ಶಾಲೆ ತೆರೆದು ಅಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಲಾಗುತ್ತಿದೆ. ಇಲ್ಲಿ ಮೊದಲು ಬಾಲ ಕಾರ್ಮಿಕ ಮಕ್ಕಳಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ನಂತರ ಅವರಿಗೆ ಜೀವನದ ಗುರಿಗಳನ್ನು ಹೇಳಿ ಕೊಡಲಾಗುತ್ತದೆ. ಮೊದಲು ಈ ಸಂಸ್ಥೆಗೆ ರಾಜ್ಯ ಬಾಲ ಕಾರ್ಮಿಕ ಯೋಜನೆಯಡಿ ಹಣ ಬರುತ್ತಿತ್ತು. ಆದರೆ, ಈಗ ಯೋಜನೆಯ ಅವಧಿ ಮುಕ್ತಾಯವಾದ ಕಾರಣ ಸಂಸ್ಥೆಗೆ ಹಣ ಬರಲಿಲ್ಲ.

ಆದರೂ ಸಹ ಎಲ್ಲರೂ ತಮ್ಮ ಕೈಲಾದಷ್ಟು ಹಣ ಹಾಕಿ ಶಾಲೆ ನಡೆಸುತ್ತಿದ್ದಾರೆ. ಅದಕ್ಕಾಗಿ ಈಗ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಬರುವಂತೆ ಮಾಡಿ ಅವರಿಗೆ ಸರ್ಕಾರಿ ಶಾಲೆಗೆ ದಾಖಲು ಮಾಡಲಾಗುತ್ತಿದೆ. ಇನ್ನು ಕೆಲವು ಮಕ್ಕಳನ್ನು ಸರ್ಕಾರಿ ಹಾಸ್ಟೆಲ್ಗಳಿಗೆ ದಾಖಲು ಮಾಡಲಾಗುತ್ತಿದೆ. ಸದ್ಯ ಶಾಲೆಯಲ್ಲಿ 25 ಮಕ್ಕಳಿದ್ದು ಇವರೆಲ್ಲಾ 12 ವರ್ಷದ ಒಳಗಿನವರು. ಕೆಲವರು ಹೋಟೆಲ್, ಮಂಡಕ್ಕಿ ಭಟ್ಟಿಯ ಜೊತೆಗೆ ತಮ್ಮ ತಂದೆ-ತಾಯಿಯರ ಜೊತೆ ಕೆಲಸದಲ್ಲಿ ಇದ್ದವರು ಈಗ ವಿದ್ಯಾಭ್ಯಾಸ್ ಮಾಡಿಕೊಂಡು ಉತ್ತಮ ನಾಗರೀಕರಾಗುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಪೊಲೀಸರು ಎಂದಕ್ಷಣ ಕೇವಲ ಲಂಚಬಾಕರು, ಕರುಣೆ ಇಲ್ಲದವರು, ಎಂದು ಮೂಗು ಮುರಿಯುವವರ ನಡುವೆ ರವಿನಾರಾಯಣ್ ರೀತಿ ಇರುವವರು ಬೆರಣಿಕೆಯಷ್ಟು ಮಂದಿ ಮಾತ್ರ. ಇಂತಹವರಿಗೆ ಸಮಾಜ ಹಾಗೂ ಸರ್ಕಾರ ಸಹಾಯ ಹಸ್ತ ಚಾಚ ಬೇಕಿದೆ.

LEAVE A REPLY

Please enter your comment!
Please enter your name here