Home ಕ್ಲಾಸಿಪೈಡ್ ಜೀವನದಲ್ಲಿ ಏನು ಸಾಧನೆ ಮಾಡೋಕೆ ಆಗ್ತಿಲ್ಲ ಅಂತ ಜೀವನದ ಕೊನೆಯ ಪುಟಗಳನ್ನೂ ಏಣಿಸುವ ವ್ಯಕ್ತಿಗಳಿಗೆ ಸ್ಫೂರ್ತಿ...

ಜೀವನದಲ್ಲಿ ಏನು ಸಾಧನೆ ಮಾಡೋಕೆ ಆಗ್ತಿಲ್ಲ ಅಂತ ಜೀವನದ ಕೊನೆಯ ಪುಟಗಳನ್ನೂ ಏಣಿಸುವ ವ್ಯಕ್ತಿಗಳಿಗೆ ಸ್ಫೂರ್ತಿ ಈ ನಾಯಕ..!

37
0
SHARE

ರಾತ್ರಿ ನಿದ್ದೆ ಬರದೆ ಒಂದು ಇಂಗ್ಲೀಷ್ ಆಕ್ಷನ್ ಸಿನಿಮಾ ನೋಡ್ತಾ ಕುಳಿತಿದ್ದೆ ಆ ಸಿನಿಮಾ ನಾಯಕನ ನಟನೆ ಅಪರೂಪಕ್ಕೆ ತುಂಬ ಇಷ್ಟ ಆಯ್ತು ಕಾರಣ ನಾನು ಸಿನಿಮಾನ ಸಿಲಬಸ್ ಥರ ನೋಡ್ತೀನಿ ಸೋ…ನಂಗೆ ಅಷ್ಟು ಬೇಗ ಯಾವ ನಟರು ಮತ್ತು ಯಾವ ಸಿನಿಮಾಗಳು ಇಷ್ಟ ಆಗೋಲ್ಲ ಆದರೆ ಆ ನಟನ ನಟನೆಗಿಂತ ಆತನ ಆಳವಾದ ಕಣ್ಣಿನಲ್ಲಿ ಕಾಣ್ತಾ ಇದ್ದ ಒಂದು ಮಿಂಚು ನನಗೆ ಆತನ ಬಗ್ಗೆ ಇನ್ನೂ ತಿಳ್ಕೋಬೇಕು ಅನ್ನೋ ಆಸೆ ಹೆಚ್ಚಿಸಿತ್ತು …..ಆತನ ಜೀವನ ಯಾವ ಸಿನಿಮಾಗಿಂತ ಕಡಿಮೆ ಇಲ್ಲ ಅದಕ್ಕೆ ಅದನ್ನ ನಿಮ್ಮ ಜೊತೆ ಶೇರ್ ಮಾಡೋಣ ಅನಿಸ್ತು.

ಆತ ಸುಮಾರು 6 ವರ್ಷದ ಹುಡುಗನಿದ್ದಾಗಲೆ ಆತನಿಗೆ ಆತನ ತಂದೆ ಡ್ರಗ್ಸ್ ಅಭ್ಯಾಸವನ್ನ ಮಾಡಿಸುತ್ತಾನೆ, ಆ ಹುಡುಗ 8 ವರ್ಷ ಆಗುವ ಅಷ್ಟರಲ್ಲೇ ಆತ ಡ್ರಗ್ಸ್ ಎಂಬ ಮೋಹಿನಿಯ ದಾಸನಾಗುತ್ತಾನೆ.ತಂದೆ ಕೂಡ ನಟನಾಗಿದ್ದರಿಂದ ಈತ ಚಿಕ್ಕ ವಯಸಿನಲ್ಲೆ ಬಣ್ಣ ಹಚ್ಚಲು ಶುರು ಮಾಡುತ್ತಾನೆ,ಹೀಗೆ ಬೆಳೆದ ಆತನಿಗೆ 1984ರಲ್ಲಿ ಜೆಸ್ಸಿಕಾ ಎಂಬಾಕೆಯ ಮೇಲೆ ಪ್ರೇಮಾಂಕುರವಾಗುತ್ತದೆ,ಅವರ ಸಂಬಂಧ 7 ವರ್ಷಗಳ ಕಾಲ ನಡಿಯುತ್ತೆ.

1991ರಷ್ಟಿಗೆ ಆತನ ಅಡಿಕ್ಷನ್ ಮುಗಿಲು ಮುಟ್ಟಿ ಆತನ ಮೇಲೆ ಪ್ರವಾಹದಂತೆ ಎರಗುತ್ತದೆ ಅದರ ಮೊದಲ ಬಲಿ ಆತನ ಪ್ರೀತಿ , ಜೆಸ್ಸಿಕಾ ಈತನನ್ನು ಬಿಟ್ಟು ಹೋಗ್ತಾಳೆ ಅದನ್ನ ಸಹಿಸದ ಆತ ತನ್ನ ಅಡಿಕ್ಷನ್ ನ ಹೆಚ್ಚು ಮಾಡಿಕೊಳ್ಳತ್ತಾನೆ ಹೀಗೆ ನಶೆಯಲ್ಲಿ ಯಾರದ್ದೊ ಮನೆಗೆ ನುಗ್ಗಿ ಒಂದು ಚಡ್ಡಿಯಲ್ಲಿ ಮಲಗಿದ್ದ ಈತನನ್ನ ಎಬ್ಬಿಸಲು ಪೋಲಿಸರೆ ಬರಬೇಕಾಗುತ್ತೆ ಇದೆ ಮುಂದುವರಿದು 1997 ರಲ್ಲಿ ಡ್ರಗ್ಸ್ ಸೇರಿದಂತೆ ಕೆಲ ಅಪರಾಧಿ ಕೃತ್ಯಗಳ ಪರಿಣಾಮ ಜೈಲಿಗೆ ಹೋಗ್ತಾನೆ, ಅಲ್ಲಿ ಬೇರೆ ಕ್ರಿಮಿನಲ್ ಗಳಿಂದ ಹೊಡೆಸಿಕೊಳ್ಳತ್ತಾನೆ ಹೀಗೆ ಹೊಡೆಸಿಕೊಂಡು 2 ಬಾರಿ ತನ್ನದೆ ರಕ್ತದ ಮಡುವಿನಲ್ಲಿ ಮಲಗಿರ್ತಾನೆ.

ಆತ ಅದರ ಬಗ್ಗೆ ಹೀಗೆ ಹೇಳ್ತಾನೆ “ಕಂಬಿಗಳ ಹಿಂದಿನ ಜೀವನ ಅಲ್ಲಿ ನನ್ನ ಅನುಭವವನ್ನು ಹೇಳೋಕೆ ಆಗೊಲ್ಲ ಸುತ್ತಲು ವಿದ್ಯುತ್ ಬೇಲಿ ಗನ್,ಲಾಠಿಗಳೊದಿಂಗೆ ಇರೋ ಸಿಬ್ಬಂದಿಗಳು ಮತ್ತು ಅವರ ಕೆಲಸ ಸಮಾಜವನ್ನ ನಮ್ಮಂತವರಿಂದ ದೂರ ಇಡೋದು,ಆದರೆ ಇದು ನನ್ನ ಕಣ್ಣು ತರೆಸಿತು”. ಆತ ತನ್ನ ಮತ್ತು ಡ್ರಗ್ಸ್ ನೊಂದಿಗಿನ ದಾಸ್ಯವನ್ನ ಹೇಳುವ ಬಗೆ ಒಂದು ಕ್ಷಣ ಕಣ್ಣಂಚನ್ನ ಕೆಂಪಗೆ ಮಾಡುತ್ತೆ ” ನನ್ನ ಸ್ಥಿತಿ ಹೇಗಿತ್ತು ಅಂದರೆ ನನ್ನ ಬಾಯಿಯೊಳಗೆ ಶಾಟ್ ಗನ್ ಇತ್ತು, ಟ್ರಿಗರ್ ಮೇಲೆ ನನ್ನದೇ ಬೆರಳುಗಳು ಕಾರಣ ನನಗೆ ಆ ಬುಲೆಟ್ ರುಚಿ ಇಷ್ಟ ಆಗಿತ್ತು”.

ಜೈಲಿನಿಂದ ಹೊರಬರ್ತಾನೆ ಎಲ್ಲರಿಗೂ ಆತನ ನಶೆ ಬಗ್ಗೆ ತಿಳಿದಿದ್ದರಿಂದ ಯಾರು ಆತನಿಗೆ ನಟನೆಯ ಅವಕಾಶ ಕೊಡಲು ಹಿಂದು ಮುಂದು ನೋಡ್ತಾರೆ,2001ರಲ್ಲಿ ಆತನ ಹೆಂಡತಿ ಕೂಡ ಆತನನ್ನು ಬಿಟ್ಟು ಹೋಗ್ತಾಳೆ, ಈಗ ಅವನ ಹತ್ರ ಕುಟುಂಬ ಇಲ್ಲ, ಹಣ ಇಲ್ಲ 8 ಡಾಲರ್ ಗಳಿಗೋಸ್ಕರ ಪಿಜ್ಜಾ ಶಾಪ್ ನಲ್ಲಿ ಕೆಲಸ ಮಾಡ್ತಾನೆ, ಜೀವನದ ಆಸೆಯನ್ನ ಕಳಕೊಂಡಿದ್ದ ಆತನಿಗೆ ಮತ್ತೆ ತಿರುವು ಸಿಕ್ಕಿದ್ದು ಸುಸಾನ್ ಸಿಕ್ಕಾಗ ಹೌದು 2007ರಲ್ಲಿ ಸುಸಾನ್ ಎಂಬ ಸುಂದರ ಮತ್ತು ಸ್ಟ್ರಾಂಗ್ ಹುಡುಗಿ ಮೇಲೆ ಆತನಿಗೆ ಪ್ರೀತಿ ಶುರುವಾಗುತ್ತೆ.

ಆಕೆ ನೀನು ನಿನ್ನ ಡ್ರಗ್ಸ್ ನ ಬಿಟ್ಟರೆ ಜೊತೆಗೆ ಇರ್ತಿನಿ ಅಂತಾ ಹೇಳ್ತಾಳೆ, ಅವಳ ಮೇಲಿನ ಪ್ರೀತಿ ಡ್ರಗ್ಸ್ ಎಂಬ ಮೋಹಿನಿಯಿಂದ ಹೊರಬರೋಕೆ ಪ್ರಯತ್ನ ಪಡ್ತಾನೆ ಆ ಪ್ರಯತ್ನದಲ್ಲಿ ಸುಸಾನ್ ಜೊತೆಯಾಗಿರ್ತಾಳೆ , ನಂತರ ಮತ್ತೆ ಸಿನಿಮಾದಲ್ಲಿ ಪಾತ್ರ ಹುಡುಕುತ್ತ ಕೆಲವು ಸಣ್ಣ ಬಜೆಟ್ಟಿನ ಮೂವಿಗಳಲ್ಲಿ ಹಾಗೂ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾನೆ. ನಂತರ 2008 ರಲ್ಲಿ ಒಂದು ದೊಡ್ಡ ಸ್ಟುಡಿಯೋದಿಂದ ಸಿನಿಮಾ ಅವಕಾಶ ಬರುತ್ತೆ. ಆ ಸಿನಿಮಾ ಪ್ರಪಂಚಾದ್ಯಂತ ಹಿಟ್ ಆಗುತ್ತೆ.

ಆ ಸಿನಿಮಾ ಹೆಸರು ಐರನ್ ಮ್ಯಾನ್, ಆ ನಟನ ಹೆಸರು ರಾಬರ್ಟ್ ಡೌನಿ .ಜೂ ಎಸ್ ಈಗ ಟ್ರೈಲರ್ ರಿಲೀಸ್ ಆಗಿ ಬಹಳ ಸುದ್ದಿಯಲ್ಲಿ ಅವೆಂಜರ್ಸ್ ಸಿನಿಮಾದ ಒಬ್ಬ ನಾಯಕ,ಪ್ರಪಂಚದಲ್ಲಿ ಹೆಚ್ಚು ಸಂಭಾವನೆ ಪಡೆಯೋ ಸ್ಟಾರ್.ಆತನೇ ಹೇಳ್ತಾನೆ “ಕಷ್ಟಗಳು ಕಷ್ಟ ಅಲ್ಲ ಅದರಿಂದ ಹೊರಬರಬೇಕು ಅಂತ ತೀರ್ಮಾನ ಮಾಡೋದು ಕಷ್ಟ ಆ ತೀರ್ಮಾನಕ್ಕೆ ಬಂದರೆ ಕಷ್ಣಗಳಯ ತಾನಾಗೆ ಕರಗುತ್ತೆ” ಎಂದು . ಎಸ್ ನೆವರ್ ಗೀವ್ ಅಪ್ ಆಟಿಟ್ಯುಡ್ ಗೆ ಉದಾಹರಣೆ ಈತ . ಸೋಲ್ತಾ ಇದ್ದೀವಿ ಅಂತ ಕೊರಗೋರಿಗೆ ಸ್ಪೂರ್ತಿ ಈತ.

LEAVE A REPLY

Please enter your comment!
Please enter your name here