Home ಕ್ಲಾಸಿಪೈಡ್ ಮಳೆಗಾಲ ಚಳಿಗಾಲ ಬಂದ್ರೆ ಸಾಕು ಅಸ್ತಮಾ ರೋಗಿಗಳಿಗೆ ಉಬ್ಬಸದಿಂದ ಹೇಗಪ್ಪಾ ಪಾರಾಗೋದು ಅನ್ನೋದೇ ದೊಡ್ಡ ಸಮಸ್ಯೆ..ಯೋಚನೆ...

ಮಳೆಗಾಲ ಚಳಿಗಾಲ ಬಂದ್ರೆ ಸಾಕು ಅಸ್ತಮಾ ರೋಗಿಗಳಿಗೆ ಉಬ್ಬಸದಿಂದ ಹೇಗಪ್ಪಾ ಪಾರಾಗೋದು ಅನ್ನೋದೇ ದೊಡ್ಡ ಸಮಸ್ಯೆ..ಯೋಚನೆ ಮಾಡ್ಬೇಡಿ ಅದಕ್ಕಿಲ್ಲಿದೆ ಮನೆ ಮದ್ದು..

43
0
SHARE

ದಮ್ಮು ಉಬ್ಬಸ, ಗೂರಲು ಈ ಮೂರು ಒಂದೇ ಆಗಿದೆ. ಉಸಿರಾಟದ ವಿವಿಧ ಅಂಗಗಳು ಸಂಕುಚಿತ ಗೊಂಡಿದ್ದು ಕಫ ಸಂಗ್ರಹವಾಗಿ ಉಸಿರಾಟದ ತೊಂದರೆ ಯುಂಟಾಗುವುದೇ ಅಸ್ತಮಾವೆಂದು ಕರೆಯುತ್ತಾರೆ. ಅಲರ್ಜಿ, ವಿರುದ್ಧ ಆಹಾರ ವಿಹಾರ, ಮಲಬದ್ಧತೆ, ಚಿಂತೆ, ಋತುಮಾನ ಬದಲಾವಣೆ, ವಾಯುಮಾಲಿನ್ಯ, ಧೂಳು, ಹೋಗೆ, ತೇವ ವಿರುವ ಸ್ಥಳಗಳಲ್ಲಿ ವಾಸ, ಅತಿವ್ಯಾಯಾಮ, ಅನುವಂಶಿಕ ಕಾರಣಗಳು ಅಸ್ತಮಾ ರೋಗ ಬರಲು ಕಾರಣವಾಗಿವೆ. ಕೆಮ್ಮು, ಒಮ್ಮೆಮ್ಮೆ ಸಣ್ಣ ಜ್ವರ, ಉಸಿರಿನತಡೆ, ಕಫ ಹೆಚ್ಚಾಗುವುದು, ರಾತ್ರಿ ಅತಿ ಬೆವರು, ಎದೆಯಲ್ಲಿ ಒತ್ತಿದ ಹಾಗೆ ಆಗುವುದು ಇತ್ಯಾದಿ ಅಸ್ತಮಾ ರೋಗದ ಲಕ್ಷಣಗಳಾಗಿವೆ.

ಈ ಸಮಸ್ಯೆಯು ಶೀತಕಾಲದಲ್ಲಿ, ಮೋಡ ಮುಸುಕಿದ ವಾತಾವರಣದಲ್ಲಿ ಹೆಚ್ಚಾಗುತ್ತದೆ.

-ಶುಂಠಿ, ಮೆಣಸು, ಹಿಪ್ಪಲಿ ಸಮ ಪ್ರಮಾಣದ ಚೂರ್ಣವನ್ನು ಅಷ್ಟೇ ಪ್ರಮಾಣದ ಜೇನು ತುಪ್ಪದಲ್ಲಿ ದಿನಕ್ಕೆ ಎರಡು ಬಾರಿಯಂತೆ ನಾಲ್ಕು ವಾರ ಸೇವಿಸುವುದು.

-ಹಸಿ ಶುಂಠಿಯ ಒಂದು ಚಮಚ ರಸಕ್ಕೆ, ಒಂದು ಚಮಚ ಜೇನು ತುಪ್ಪವನ್ನುಸೇರಿಸಿ ದಿನಕ್ಕೆರಡು ಬಾರಿಯಂತೆ ೪ ವಾರ ಸೇವಿಸುವುದು.

-ಆಡು ಮುಟ್ಟದ ಬಳ್ಳಿಯ ಐದು ಎಲೆಗಳನ್ನು ಐದು ಚಮಚ ಜೀರಿಗೆ ಸೇರಿಸಿ ಅರೆದು ಬೆಟ್ಟದ ನೆಲ್ಲಿಕಾಯಿ ಗಾತ್ರದಷ್ಟು ಗುಳಿಗೆಯನ್ನು ಮಾಡಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ೭ /೨೧/೪೧ ದಿವಸ ಉಪಯೋಗಿಸಬೇಕು.

– ಈಶ್ವರಿ ಬಳ್ಳಿಯ ಒಣಗಿದ ಅಥವಾ ತಾಜಾ ಎಲೆಯನ್ನು ಬಾಯಲ್ಲಿಟ್ಟು ಕೊಂಡು ನಿಧಾನವಾಗಿ ಚೀಪುತ್ತ ರಸವನ್ನು ನುಂಗಬೇಕು. ತಿಂಡಿ ತಿಂದ ಒಂದು ಗಂಟೆಯ ನಂತರ ಈ ಚಿಕಿತ್ಸೆಯನ್ನು ಆರು ದಿವಸ ಸತತವಾಗಿ ಮಾಡ್ಬೇಕು. ಔಷಧಿ ತೆಗೆದು ಕೊಂಡ ಮೂರು ಗಂಟೆಗಳ ಕಾಲ ಏನನ್ನು ತಿನ್ನುವುದಾಗಲಿ ಕುಡಿಯುವುದಾಗಲಿ ಮಾಡಬಾರದು.

-ಒಂದು ವಿಲ್ಯೆದೆಲೆಯಲ್ಲಿ ಐದು ತುಳಸಿಎಲೆ, ಒಂದುಲವಂಗ, ಸ್ವಲ್ಪ ಸೈನದ ವಲವಣ ಮಡಿಸಿ ನಿತ್ಯ ಮೂರು ವೇಳೆ ೧ರಿಂದ ೨ ವಾರ ಸೇವಿಸ ಬೇಕು.

-ಆಡು ಸೋಗೆ ಎಲೆಯ ರಸ ಎರಡು ಚಮಚ ಮತ್ತು ಎರಡು ಚಮಚ ಜೇನು ತುಪ್ಪದ ಜೊತೆ ಅಥವಾ ಶುಂಠಿಪುಡಿಯ ಜೊತೆ ದಿನಕ್ಕೆರಡು ಬಾರಿ ಸೇವಿಸಬೇಕು.

-ಈರುಳ್ಳಿಯರಸ, ಬೆಳ್ಳುಳ್ಳಿಯರಸ, ಒಂದು ಪಾವು ಲೋಳೆರಸ, ಜೇನು ತುಪ್ಪ ಪ್ರತಿಯೊಂದನ್ನು ಒಂದು ಜಾಡಿಯಲ್ಲಿ ಹಾಕಿ ಭದ್ರವಾಗಿ ಮುಚ್ಚಬೇಕು .ಒಂದು ವಾರದ ಅನಂತರ ತೆಗೆದು ಪ್ರತಿದಿನ ಈ ಔಷಧಿಯನ್ನು ೧ ಚಮದಷ್ಟು ಒಂದು ತಿಂಗಳುಗಳ ಕಾಲ ಸೇವಿಸಬೇಕು.

-ನಾಲ್ಕು ಚಮಚ ಆಡುಸೋಗೆ ರಸಕ್ಕೆ ,ಅರ್ಧಚಮಚ ತ್ರಿಫಲಾಚೂರ್ಣ ಸೇರಿಸಿ ಅದಕ್ಕೆ ಒಂದು ಚಮಚ ಜೇನು ತುಪ್ಪ ಸೇರಿಸಿ ಎರಡು ಹೊತ್ತು ೩ ರಿಂದ ೪ ವಾರ ಕೊಡುವುದು.

-ಅಸ್ತಮಾ ರೋಗಿಗಳು ತೀವ್ರ ಉಸಿರಾಟದ ತೊಂದರೆ ಯಾದಾಗ ಸಾಸಿವೆ ಎಣ್ಣೆಯಲ್ಲಿ ಸೈನ್ದವಲ ವಣ ಸೇರಿಸಿ ಎದೆಗೆ ತಿಕ್ಕಿಕೊಳ್ಳಬೇಕು.

 

 

LEAVE A REPLY

Please enter your comment!
Please enter your name here