Home ಕ್ಲಾಸಿಪೈಡ್ ಭಾರತದ ಯುದ್ಧ ವಿಮಾನದ ಮೊದಲ ಮಹಿಳಾ ಪೈಲೆಟ್ ಬಗ್ಗೆ ತಿಳಿದುಕೊಳ್ಳಿ, ಪ್ರತಿಯೊಬ್ಬ ಬಾಲಕಿಗೆ ಹಾಗೂ ಯುವತಿಯರಿಗೆ...

ಭಾರತದ ಯುದ್ಧ ವಿಮಾನದ ಮೊದಲ ಮಹಿಳಾ ಪೈಲೆಟ್ ಬಗ್ಗೆ ತಿಳಿದುಕೊಳ್ಳಿ, ಪ್ರತಿಯೊಬ್ಬ ಬಾಲಕಿಗೆ ಹಾಗೂ ಯುವತಿಯರಿಗೆ ಈಕೆ ಸ್ಫೂರ್ತಿ..

42
0
SHARE

ವಿಶ್ವದಲ್ಲೇ ತನ್ನ ಸೈನಿಕ ಬಲದ ಮೂಲಕ ಗಮನ ಸೆಳೆದಿರುವ ಭಾರತೀಯ ಸೇನೆ ಇದೀಗ ಹೊಸ ಇತಿಹಾಸ ಸೃಷ್ಟಿಸಿರುವುದು ಹೆಮ್ಮೆಯ ವಿಷಯ. ಭಾರತದ ಸೈನ್ಯದಲ್ಲಿರುವ ಮಹಿಳೆಯೊಬ್ಬರು ಮಿಗ್ 21 ಬಿಸನ್ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.ಅಷ್ಟಕ್ಕೂ ರಕ್ಷಣಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿರುವ ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್ ಆದರೂ ಯಾರು ಗೊತ್ತೇ??

ವಿಶ್ವದಲ್ಲೇ ತನ್ನ ಸೈನಿಕ ಬಲದ ಮೂಲಕ ಗಮನ ಸೆಳೆದಿರುವ ಭಾರತೀಯ ಸೇನೆ ಇದೀಗ ಹೊಸ ಇತಿಹಾಸ ಸೃಷ್ಟಿಸಿದ್ದು, ಮೊದಲ ಬಾರಿಗೆ ಏಕಾಂಗಿಯಾಗಿ ಮಹಿಳಾ ಪೈಲಟ್ ಅವಾನಿ ಚತುರ್ವೇದಿ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ನಡೆಸಿದ ಭಾರತೀಯ ಸೇನೆಯ ಮಹಿಳಾ ಪೈಲಟ್ ಅಧಿಕಾರಿಯಾಗಿದ್ದಾರೆ. ಗುಜರಾತ್ನ್ಜಮ್ನ ಗರ್ನಟಲ್ಲಿ ಸೋಮವಾರ ಅವನಿ ಚತುರ್ವೇದಿ ಒಬ್ಬರೇ ಮಿಗ್-21 ಬಿಸನ್ಯುದ್ಧ ವಿಮಾನ ಹಾರಾಟ  ನಡೆಸಿದ್ದಾರೆ . ಅಷ್ಟೇ ಅಲ್ಲದೇ, ಇದು  .

ಮಹಿಳೆಯರು ಯಾವ ಸಾಧನೆಗೂ ಸೈ ಎನ್ನುವುದಕ್ಕೆ ಉತ್ತಮ ನಿದರ್ಶನ ಎಂದರೆ ಕಲ್ಪನಾ ಚಾವ್ಲ, ಧೀರೆ ನೀರಜಾ ಹೀಗೆ ಅದೆಷ್ಟೋ ಮಹಿಳಾ ಮಣಿಯರಿದ್ದಾರೆ. ಭಾರತೀಯ ವಾಯು ಪಡೆಯ ಮಹಿಳಾ ಪೈಲೆಟ್ ಅವಾನಿ ಚತುರ್ವೇದಿ ಹೊಸ ಇತಿಹಾಸ ಬರೆದಿದ್ದಾರೆ.ಕಳೆದ ಸೋಮವಾರ ಏಕಾಂಗಿಯಾಗಿ ಮಿಗ್-21 ಯುದ್ಧ ವಿಮಾನವನ್ನು ಹಾರಾಟ ನಡೆಸುವ ಮೂಲಕ ಇತಿಹಾಸವನ್ನು ಬರೆಯುವ ಜೊತೆಗೆ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಸುದೀರ್ಘ 30 ನಿಮಿಷಗಳ ಕಾಲ ಅವಾನಿ ಅವರು ರಷ್ಯಾಮೂಲದ ಜೆಟ್ ಯಶಸ್ವಿಯಾಗಿ ಹಾರಾಟ ನಡೆಸಿ ಇತಿಹಾಸ ನಿರ್ಮಿಸಿದ್ದಾರೆ.

ಮಧ್ಯ ಪ್ರದೇಶ ದರೇವಾ ಜಿಲ್ಲೆಯವರಾದ ಅವಾನಿಚತುರ್ವೇದಿ ಅವರ ಸಾಧನೆಯನ್ನು ಭಾರತೀಯ ವಾಯುಪಡೆಯಲ್ಲಿ ನಾರಿ ಶಕ್ತಿಯ ಸೇರ್ಪಡೆ ಎಂದೇ ಬಣ್ಣಿಸಲಾಗುತ್ತಿದೆ. ಮಹಿಳಾ ಪೈಲೆಟ್ಮೊದಲ ಬಾರಿಗೆ ಏಕಾಂಗಿಯಾಗಿ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿರುವುದು ಭಾರತೀಯ ವಾಯುಪಡೆ ಇತಿಹಾಸದಲ್ಲಿ ಮೈಲಿಗಲ್ಲಾಗಿದೆ.ಇದರೊಂದಿಗೆ ವಾಯುಪಡೆಯಲ್ಲಿ ನಾರಿಶಕ್ತಿಯ ಕಾಲ ಆರಂಭವಾಗಿದೆ ಎಂದರೆ ತಪ್ಪಾಗಲಾರದು.

ಇನ್ನು 2016 ರ ಜೂನ್ ಗಳಲ್ಲಿ ಭಾರತದ ಮೊದಲ ಮೂವರು ಮಹಿಳಾ ಪೈಲೆಟ್ ಅಧಿಕಾರಿಗಳನ್ನು ಸೇರಿಸಿ ಕೊಳ್ಳಲಾಗಿದ್ದು, ಅದರಲ್ಲಿ ಅವಾನಿಚತುರ್ವೇದಿಯೂ ಒಬ್ಬರು .ಕಳೆದ ವಾರದವರೆಗೂ ಇಬ್ಬರು ಪೈಲೆಟ್ಗಳ ತರಬೇತಿ ಯುದ್ಧ ವಿಮಾನ ಹಾರಾಟ ನಡೆಸಿದ್ದು, ಈ ಯುದ್ಧ ವಿಮಾನದಲ್ಲಿ ನುರಿತ ಮಾರ್ಗದರ್ಶಕ ರಜತೆ ಅವಾನಿ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. 2016ರಲ್ಲಿ ವಾಯಪಡೆಗೆ ಸೇರಿದ ನಂತರ ಅವಾನಿ ಅವರು ಬೀದರ್ನಲ್ಲಿರುವ ವಾಯುನೆಲೆಯಲ್ಲಿ ಸುದೀರ್ಘ ಒಂದು ವರ್ಷತರಬೇತಿ ಪಡೆದಿದ್ದರು.ನಂತರ ಆರುತಿಂಗಳ ಕಾಲಹಕಿಮ್ಪೇಟ್ನ ಕಿರಣತರಬೇತಿ ಜೆಟ್ನಲ್ಲಿ ತರಬೇತಿ ಪಡೆದಿದ್ದರು.

LEAVE A REPLY

Please enter your comment!
Please enter your name here