Home ಕ್ಲಾಸಿಪೈಡ್ ದೀರ್ಘಾಯುಷ್ಯಕ್ಕಾಗಿ ಉತ್ತಮವಾಗಿ ಉಸಿರಾಡಿ

ದೀರ್ಘಾಯುಷ್ಯಕ್ಕಾಗಿ ಉತ್ತಮವಾಗಿ ಉಸಿರಾಡಿ

82
0
SHARE

ದೀರ್ಘಾಯುಷ್ಯಕ್ಕಾಗಿ ಉತ್ತಮವಾಗಿ ಉಸಿರಾಡಿ

ಡಾ| ಡಿ.ಕೆ. ಮಹಾಬಲರಾಜು

ಬದುಕಿರುವ ಎಲ್ಲ ಜೀವಿಗಳೂ ಉಸಿರಾಡುತ್ತವೆ ಎಂಬ ವಿಷಯ ಯಾರಿಗೂ ಹೊಸತಲ್ಲ. ಮಾನವನು ಪ್ರತಿನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾನೆ. ಉಸಿರಾಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳವುದೇ ಇಲ್ಲ. ಏಕೆಂದರೆ ಉಸಿರಾಟ ನಮ್ಮಇಚ್ಛೆಗೆ ಕಾಯದೆ ಅನೈಚ್ಛಿಕವಾಗಿ ನಡೆಯುತ್ತಿರುತ್ತದೆ. ಜಗತ್ತಿನಲ್ಲಿ ಬಹಳಷ್ಟು ಜನರು ಉಸಿರಾಡುತ್ತಿರುವ ಕ್ರಮ ಸರಿಯಿಲ್ಲ. ಹೇಗೋ ಉಸಿರಾಡಿಕೊಂಡು ಬದುಕಿದ್ದಾರೆ ಎಂದು ಆಧುನಿಕ ವೈದ್ಯರು ಆರೋಪಣೆ ಮಾಡುತ್ತಿದ್ದಾರೆ.

ನೀವು ಸರಿಯಾಗಿ ಉಸಿರಾಡುತಿದ್ತ್ದೀರ? ಇದನ್ನು ತಿಳಿದುಕೊಳ್ಳಲು ಒಂದು ಸರಳ ವಿಧಾನ ಇದೆ. ನೀವು ಈಗ ಎಲ್ಲೇ ಇರಿ. ಏನೇ ಮಾಡುತ್ತಿರಿ. ಒಮ್ಮೆ ಆಳವಾಗಿ ಉಸಿರನ್ನು ಎಳೆದುಕೊಳ್ಳಿ. ನಿಮ್ಮ ಎದೆ ಹೊಟ್ಟೆಗಿಂತಾ ಹೆಚ್ಚು ಉಬ್ಬಿದ್ದರೆ. ನೀವು ತಪ್ಪುತಪ್ಪಾಗಿ ಉಸಿರಾಡುತಿದ್ದೀರಾ ಎಂದು ತಿಳಿಯಿರಿ. ಬದಲಿಗೆ ಹೊಟ್ಟೆಯೇ ಎದೆಗಿಂತಾ ಹೆಚ್ಚು ಉಬ್ಬಿದ್ದರೆ ನೀವು ಸರಿಯಾಗಿ ಉಸಿರಾಡುತಿದ್ದೀರಿ ಎಂದು ತಿಳಿಯಿರಿ.

 

ನಿಧಾನವಾಗಿ ಮತ್ತು ಆಳವಾಗಿ ಹೊಟ್ಟೆ ಉಬ್ಬಿ ಇಳಿಯುವಂತೆ ನಡೆಸುವ ಶ್ವಾಸೋಚ್ಛಾ ಸದಿಂದ ಅದ್ಭುತ ಲಾಭಗಳಿವೆ ಎಂದು ನಮ್ಮ ಪೂರ್ವಜರು ಹೇಳಿದ್ದಾರೆ. ಇದರ ಸತ್ಯಾಸತ್ಯತೆಯನ್ನು ವೈಜ್ಞಾನಿಕವಾಗಿ ಪರೀಕ್ಷಿಸಿದ ಇಂದಿನ ವೈದ್ಯರೂ ಸಹ ದೀರ್ಘ ಶ್ವಾಸೋಚ್ಛಾ ಸವನ್ನು ಅನುಮೋಸಿದ್ದಾರೆ. ದೊಡ್ಡ ದೊಡ್ಡ ದೇಶದಲ್ಲಿನ ದೊಡ್ಡ ದೊಡ್ಡ ಆಸ್ಪತ್ರೆಯಲ್ಲಿನ ವೈದ್ಯರು ಈಗ ತಮ್ಮ ಎಲ್ಲ ರೋಗಿಗಳಿಗೆ ದೀರ್ಘ ಶ್ವಾಸೋಚ್ಛಾ ಸದ ಮೂಲ ಪಾಠಗಳನ್ನು ಬೋಧಿಸಲು ಪ್ರಾರಂಭಿಸಿದ್ದಾರೆ. ನೆಗಡಿಯಿಂದ ಹಿಡಿದು ಕ್ಯಾನ್ಸರ್ ವರೆಗಿನ ಎಲ್ಲ ರೋಗಗಳ ಉಪಶಮನದಲ್ಲಿ ದೀರ್ಘಶ್ವಾಸೋಚ್ಛಾ ಸದಿಂದ ಪ್ರಯೋಜನಗಳಿವೆ ಇಂದು ವೈದ್ಯರು ಕಂಡುಕೊಂಡಿದ್ದಾರೆ. ಹೀಗಾಗಿ ಕೆಲ ವೈದ್ಯರಂತೂ ತಮ್ಮ ಪರಿಣಿತ ಚಿಕಿತ್ಸೆಯನ್ನು ಬದಿಗೊತ್ತಿ ರೋಗಿಗಳಿಗೆ ದೀರ್ಘಶ್ವಾಸೋಚ್ಛಾ ಸದ ಮಹತ್ತ್ವವನ್ನು ಒತ್ತಿ ಒತ್ತಿ ಹೇಳಲಾರಂಭಸಿದ್ದಾರೆ.
ನಿಜಕ್ಕೂ ನಾವೀಗ ಅವಸರ ಅವಸರವಾಗಿ ತಪ್ಪುತಪ್ಪಾಗಿ ಉಸಿರಾಡುತ್ತಿದ್ದೇವೆ . ನಮ್ಮಲ್ಲಿನ ಮಾನಸಿಕ ಒತ್ತಡ, ಆಂತಕ, ಉದ್ವೇಗ ಹಾಗೂ ಉಸಿರಾಟದ ಬಗ್ಗೆ ಗಮನಹರಿಸದಿರುವುದೇ ಇದಕ್ಕೆ ಕಾರಣವಾಗಿದೆ. ಉಸಿರಾಟ ಅನೈಶ್ಚಿಕವಾಗಿ ನಡೆಯುವ ಕ್ರಿಯೆಯಾದರೂ ಚಿತ್ತೈಕಾಗ್ರತೆ ಇಂದ ನಮ್ಮ ಉಸಿರಾಟವನ್ನು ಉತ್ಕರ್ಷಗೊಳಿಸಿಕೊಳ್ಳಬಹುದು.

ನಿಧಾನವಾಗಿ ಹೊಟ್ಟೆಹೆಚ್ಚು ಉಬ್ಬುವಂತೆ ಉಸಿರನ್ನು ಎಳೆದುಕೊಂಡಾಗ ವಾಯು ಶ್ವಾಸಕೋಶದ ತಳದಲ್ಲಿ ಹೆಚ್ಚಾಗಿ ಜಮಾಯಿಸುತ್ತದೆ. ಆಗ ದೇಹಕ್ಕೆ ಹೆಚ್ಚು ಆಮ್ಲಜನಕ ಸೇರಲು ಹಾಗೂ ದೇಹದಿಂದ ಇಂಗಾಲ ಮುಂತಾದ ಕಲ್ಮಷ ಸಂಪೂರ್ಣವಾಗಿ ಹೊರಹೋಗಲು ಹೆಚ್ಚು ಅವಕಾಶ ದೊರೆಯ್ತುತದೆ. ಉತ್ತಮ ವಾಯುವಿನಿಮಯದಿಂದ ದೇಹದ ಆರೋಗ್ಯ ಉತ್ತಮಗೊಳ್ಳುತ್ತದೆ. ಉಸಿರಾಟದ ಗತಿ ನಿಮಿಷಕ್ಕೆ ಏಳು ಅಥವಾ ಎಂಟಕ್ಕೆ ಇಳಿಯುತ್ತದೆ. ಈ ಎಲ್ಲ ವಿದ್ಯಮಾನಗಳಿಂದ ಆರೋಗ್ಯದೊಂದಿಗೆ ಆಯುಷ್ಯವೂ ಹೆಚ್ಚುತ್ತದೆ. ಈಗಾಗಲೇ ರುಜುವಾತು ಆಗಿರುವಂತೆ ದೀರ್ಘಶ್ವಾಸೋಚ್ಛಾ ಸದಿಂದ ರಕ್ತದೊತ್ತಡ ತಗ್ಗುತ್ತದೆ. ಹೃದಯ ಬಡಿತ ಕಡಿಮೆಯಾಗುತ್ತದೆ. ದೇಹದ ಮಾಂಸಖಂಡಗಳು ಸಡಿಲಗೊಂಡು ವಿಶ್ರಾಂತಿ ಪಡೆಯುತ್ತವೆ. ಮಾನಸಿಕ ಉದ್ವೇಗ ತಗ್ಗತ್ತದೆ. ಮನಸ್ಸು ಪ್ರಶಾಂತವಾಗುತ್ತದೆ. ಮಾನವನು ಪ್ರತಿ ನಿಮಿಷಕ್ಕೆ ಹದಿನಾರು ಬಾರಿ ಉಸಿರಾಡುತ್ತಾ ಸರಾಸರಿ ಅರವತ್ತು ವರ್ಷಮಾತ್ರ ಬದುಕುತಿದ್ದಾನೆ. ಅದೇ ಆಮೆಯನ್ನು ನೋಡಿ ಅದು ನಿಮಿಷಕ್ಕೆ ಕೇವಲ ಮೂರ್‍ನಾಲ್ಕು ಬಾರಿ ಉಸಿರಾಡುತ್ತಾ ಬಹುದೀರ್ಘಕಾಲ ಬದುಕುತ್ತದೆ. ಚಿಕ್ಕ ಮಗುವನ್ನು ನೋಡಿ, ಅದು ಮಲಗಿದ್ದಾಗ ದೀರ್ಘವಾಗಿ ಉಸಿರಾಡುತ್ತಾ ಹೊಟ್ಟೆಯನ್ನು ಬಲೂನಿನಂತೆ ಉಬ್ಬಿಸುತ್ತದೆ. ಹೀಗಾಗಿ ನಾವೆಲ್ಲಾ ಮಕ್ಕಳಂತೆ ಉಸಿರಾಡಬೇಕು ಎನ್ನುತ್ತಾರೆ ತಜ್ಞ ವೈದ್ಯರು.

ಉಸಿರಾಟಂದ ಉತ್ತಮ ಪ್ರಯೋಜನಗಳನ್ನು ಪಡೆಯಲು ನಾವು ದೀರ್ಘವಾಗಿ ಹೊಟ್ಟೆ ಉಬ್ಬುವಂತೆ ಉಸಿರಾಡುವ ಕಲೆಯನ್ನು ಕರಗತಮಾಡಿಕೊಳ್ಳಬೇಕು. ಆರಂಭದಲ್ಲಿ ನಾವು ಪ್ರತಿದಿನ ಹತ್ತಿಪ್ಪತ್ತು ನಿಮಿಷ ನಮ್ಮ ಗಮನವನ್ನು ಉಸಿರಾಟದ ಮೇಲೆ ಹರಿಸಿ, ಚಿತ್ತೈಕಾಗ್ರತೆ ಇಂದ ಉಸಿರಾಟದಲ್ಲಿ ಸಾಕಷ್ಟು ಸುಧಾರಣಿಗಳನ್ನು ತಂದುಕೊಳ್ಳಬಹುದು. ಬೆನ್ನಮೇಲೆ ಮಲಗಿ ಹೊಟ್ಟೆ ಮೇಲೆ ಪುಸ್ತಕ ಇರಿಸಿ ಈ ಅಭ್ಯಾಸ ಮಾಡಬಹುದು. ಇಲ್ಲವೆ, ಕುಳಿತುಕೊಂಡು ಒಂದು ಕೈಯನ್ನು ಹೊಟ್ಟೆ ಮೇಲೆ, ಮತ್ತೊಂದು ಕೈಯನ್ನು ಎದೆ ಮೇಲೇ ಇರಿಸಿ ಅಭ್ಯಸಿಸಬಹುದು. ಪ್ರಾರಂಭದಲ್ಲಿ ನಮಗೆ ಕಾಣುವಂತೆ ಒಂದು ಗಡಿಯಾರವನ್ನು ಇರಿಸಿಕೊಳ್ಳುವುದು ಒಳ್ಳೆಯದು.
ಪ್ರ್ರಶಾಂತವಾದ, ಏಕಾಂತ ಸ್ಥಳವನ್ನು ಆಯ್ದುಕೊಳ್ಳಿ. ನಿಮ್ಮ ಕಣ್ಣಿಗೆ ಕಾಣುವಂತೆ ಸೆಕೆಂಡು ಮುಳ್ಳು ಇರುವ ಗಡಿಯಾರವನ್ನು ಇಟ್ಟುಕೊಳ್ಳಿ. ನಿಮ್ಮ ಉಡುಪು ಸಡಿಲವಾಗಿರಲಿ.

ಬೆನ್ನಮೇಲೆ ಮಲಗಿಕೊಳ್ಳಿ. ಹೊಟ್ಟೆ ಮೇಲೆ ಹಗುರಾದ ಪುಸ್ತಕ ಇರಿಸಿ. ಚಿತ್ತೈಕಾಗ್ರತೆ ಇಂದ ನಿಧಾನವಾಗಿ ಆಳವಾದ ಉಸಿರನ್ನು ಎಳೆದುಕೊಳ್ಳಿ. ಹೊಟ್ಟೆ ಎದೆ ಉಸಿರಿನಿಂದ ತುಂಬಿದ ಅನಂತರ ಒಂದೆರಡು ಕ್ಷಣ ಉಸಿರನ್ನು ಹಾಗೇ ಹಿಡಿದುಕೊಳ್ಳಿ. ಅನಂತರ ನಿಧಾನ ನಿಧಾನವಾಗಿ ಉಸಿರನ್ನು ಹೊರಬಿಡಿ. ಉಸಿರಾಟದುದ್ದಕ್ಕೂ ಹೊಟ್ಟೆಯ ಮೇಲಿನ ಪಸ್ತಕ ಏರಿಳಿಯುವುದನ್ನು ಗಮನಿಸಿ.
ಆರಾಮವಾಗಿ ಕುಳಿತುಕೊಳ್ಳಿ. ಬಲಗೈಯನ್ನು ಹೊಟ್ಟೆಯ ಮೇಲಿಡಿ. ಎಡಗೈಯನ್ನು ಎದೆಯ ಮೇಲಿಡಿ. ಮೇಲಿನಂತೆ ನಿಧಾನವಾ ಆಳವಾಗಿ ಉಸಿರಾಡಿ. ಎಡಗೈ ನಿಶ್ಚಲವಾಗಿ, ಬಲಗೈ ಏರಿಳಿಯುತ್ತಿರುವುದನ್ನು ಗಮನಿಸಿ.


ಗಡಿಯಾರದಲ್ಲಿ ನಿಮ್ಮ ಶ್ವಾಸೋಚ್ಛಾ ಸದ ಗತಿಯನ್ನು ಲೆಕ್ಕ ಹಾಕಿ. ನಿಮ್ಮ ಉಸಿರಾಟ ನಿಮಿಷಕ್ಕೆ ಏಳು ಅಥವಾ ಎಂಟು ಬಾರಿ ಇರಬೇಕು.

ದೀರ್ಘಶ್ವಾಸೋಚ್ಛಾ ಸದ ಪ್ರಯೋಜನಗಳು:
ದೇಹಕ್ಕೆ ಅಧಿಕ ಆಮ್ಲಜನಕ ದೊರೆಯುತ್ತದೆ.
ದೇಹದ ಕಲ್ಮಶ (ಇಂಗಾಲ) ಸಂಪೂರ್ಣವಾಗಿ ವಿಸರ್ಜನೆಯಾಗುತ್ತದೆ.
ಹೃದಯದ ಮಿಡಿತ ಕಡಿಮೆಯಾಗುತ್ತದೆ. ಹೃದಯ ಗಟ್ಟಿಯಾಗುತ್ತದೆ.
ರಕ್ತದೊತ್ತಡ (ಬಿ. ಪಿ.) ಕಡಿಮೆಯಗುತ್ತದೆ.
ಮಾಂಸಖಂಡಗಳಿಗೆ ಸಡಿಲಗೊಂಡು ವಿರಮಿಸುವ ಅವಕಾಶ ಸಿಗುತ್ತದೆ.
ಮಾನಸಿಕ ಉದ್ವೇಗ, ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ.
ಮನಸ್ಸು ಉಲ್ಲಾಸಗೊಳ್ಳುತ್ತದೆ, ಪ್ರಶಾಂತಗೊಳ್ಳುತ್ತದೆ.
ಆರೋಗ್ಯ ಉತ್ತಮವಾಗುತ್ತದೆ. ಆಯಷ್ಸು ಹೆಚ್ಚುತ್ತದೆ.

ವಿಳಾಸ: ಡಾ| ಡಿ. ಕೆ. ಮಹಾಬಲರಾಜು, ಪ್ರಾಧ್ಯಾಪಕರು, ಸಮುದಾಯ ಆರೋಗ್ಯ ವಿಭಾಗ, ಜೆ. ಜೆ. ಎಂ. ಮೆಡಿಕಲ್ ಕಾಲೇಜು, ದಾವಣಗೆರೆ-೫೭೭೦೦೪, ಕರ್ನಾಟಕ, ಭಾರತ.

LEAVE A REPLY

Please enter your comment!
Please enter your name here