Home ಕ್ಲಾಸಿಪೈಡ್ ಹಿಡಿ ಅನ್ನ ಆರೋಗ್ಯಕ್ಕೆ ಸೋಪಾನವಿದ್ದಂತೆ..!

ಹಿಡಿ ಅನ್ನ ಆರೋಗ್ಯಕ್ಕೆ ಸೋಪಾನವಿದ್ದಂತೆ..!

36
0
SHARE

ಹಿಡಿ ಅನ್ನ ಆರೋಗ್ಯಕ್ಕೆ ಸೋಪಾನವಿದ್ದಂತೆ..!

ಅನ್ನ ಪರಬ್ರಹ್ಮ ಸ್ವರೂಪ ಎಂದಿದ್ದಾರೆ ನಮ್ಮ ಹಿರಿಯರು.. ಅವರು ಹೇಳಿದರೆಂದು ಅಲ್ಲ.. ನಿಜಕ್ಕೂ ಪೋಷಕಾಂಶಗಳ ವಿಷಯದಲ್ಲಿ ಅನ್ನದ ಪ್ರತ್ಯೇಕತೆಯೇ ಬೇರೆ. ಹಾಗಾಗಿ ಎಷ್ಟೇ ವೆರೈಟಿ ಪದಾರ್ಥಗಳ ಸೇವನೆ ಮಾಡಿದರೂ ಕೊನೆಗೆ ಒಂದು ಹಿಡಿ ಮೊಸರನ್ನ ಸೇವಿಸಿದ ತೃಪ್ತಿ ಇರದು ಬಹಳ ಜನರಿಗೆ. ವಾಸ್ತವಿಕವಾಗಿ ಅದು ಒಳ್ಳೆಯ ಅಭ್ಯಾಸ ಕೂಡಾ.
ಅಕ್ಕಿಯಲ್ಲಿ ಅಧಿಕವಾಗಿರುವ ಗಂಜಿ ದೇಹಕ್ಕೆ ತಂಪು ನೀಡುತ್ತದೆ.

ಗೋಧಿ ಇತರ ಧಾನ್ಯಗಳೊಂದಿಗೆ ಹೋಲಿಸಿದರೆ ಅಕ್ಕಿಯಲ್ಲಿ ಹೆಚ್ಚು ಪ್ರೋಟಿನ್ಗಳು ಶೇಕಡಾ 7ರಷ್ಟು ಅಧಿಕ. ವಿಟಮಿನ್ ಬಿ (ಥಯಾಮಿನ್) ಹೆಚ್ಚಾಗಿರುತ್ತದೆ. ಹೆಚ್ಚು ಪಾಲಿಷ್ ಮಾಡಿದ, ತೊಳೆದ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದೇನು ಅಲ್ಲ. ಇಂಥ ಅಕ್ಕಿಯಿಂದ ಅನ್ನ ಮಾಡುವಾಗ ಶೇಕಡಾ 70 ರಷ್ಟು ಥಯಾಮಿನ್ ಕಡಿಮೆಯಾಗುತ್ತದೆ. ಇದರಿಂದ ಶರೀರದಲ್ಲಿ ವಿಟಮಿನ್ ಬಿ ಕೊರತೆಯಾಗುತ್ತದೆ. ಅದಕ್ಕೆಂದೇ ಪಾಲಿಷ್ ಮಾಡದ ಅಕ್ಕಿಯನ್ನು ಬಳಸಬೇಕು.

ಅಧಿಕ ಕಾರ್ಬೋಹೈಡ್ರೇಟ್ ಇದೆ. ಕೊಬ್ಬು ಪ್ರಮಾಣ ಕಡಿಮೆ. ಉಪ್ಪು, ಸಕ್ಕರೆ ಅಂಶ ಅತ್ಯಲ್ಪ. ನಾರಿನಂಶ ಹೆಚ್ಚು. ಹೃದ್ರೋಗದಿಂದ ಬಳಲುವವರು ಅಕ್ಕಿಯಿಂದ ಮಾಡಿದ ಪದಾರ್ಥಗಳನ್ನು ಆನಂದವಾಗಿ ಸೇವಿಸಬಹುದು. ಕುಟ್ಟಿದ ಅಕ್ಕಿ ಉತ್ತಮ. ಇದರಲ್ಲಿ ಪ್ರೋಟಿನ್, ವಿಟಮಿನ್ಗಳು ಖನಿಜಾಂಶ ಹೆಚ್ಚು. ಅದಕ್ಕೆ ಕೇವಲ ಅನ್ನವಾಗಿ ಅಲ್ಲದೆ ಅಕ್ಕಿಯನ್ನು ಇತರೆ ರೂಪದಲ್ಲಿ ಕೂಡಾ ಬಳಸಿ. ಮಕ್ಕಳಿಗೆ ಅಕ್ಕಿಯ ಪಾಯಸ ಆರೋಗ್ಯಕರ.

LEAVE A REPLY

Please enter your comment!
Please enter your name here