Home ಕ್ಲಾಸಿಪೈಡ್ ಜ್ಞಾಪಕಶಕ್ತಿ ಕುಂಠಿತಕ್ಕೆ ಹಾರ್ಮೋನ್ ಕಾರಣ

ಜ್ಞಾಪಕಶಕ್ತಿ ಕುಂಠಿತಕ್ಕೆ ಹಾರ್ಮೋನ್ ಕಾರಣ

49
0
SHARE

ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಉಂಟಾಗುವ ಹಾರ್ಮೋನಿನ ಏರುಪೇರು ಮಾನಸಿಕ ಬದಲಾವಣೆಯನ್ನೂ ಮಾಡುತ್ತದೆ. ಅದು ಅವರಲ್ಲಿದ್ದ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದು ಕೆನಡಾದ ಸಂಶೋಧಕರ ಅಧ್ಯಯನ ಹೇಳಿದೆ.
ಹಾರ್ವೋನುಗಳಲ್ಲಿ ಉಂಟಾಗುವ ಬದಲಾವಣೆ ಸ್ತ್ರೀಯರ ನಿರ್ಧರಿಸುವ ಶಕ್ತಿಯನ್ನೇ ಕುಂಠಿತ ಮಾಡುತ್ತದೆ. ಕೆಲವೊಮ್ಮೆ ಅವರ ಜ್ಞಾಪಕಶಕ್ತಿಯ ಮೇಲೂ ಅದರ ಪರಿಣಾಮ ಆಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಇದಕ್ಕೆ ಮತ್ತೊಂದು ಪ್ರಮುಖ ಕಾರಣ ಎಂದರೆ, ಗರ್ಭಧಾರಣೆ ನಂತರದ ದಿನಗಳಲ್ಲಿ ಋತುಚಕ್ರದಲ್ಲಿ ಉಂಟಾಗುವ ವ್ಯತ್ಯಾಸ.  ಇದೂ ಜ್ಞಾಪಕಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಎಂಬ ಹಾರ್ಮೋನುಗಳ ಉತ್ಪತ್ತಿಯಲ್ಲಿ ಆಗುವ ವ್ಯತ್ಯಾಸವೇ ಕಾರಣ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here