Home ಕ್ಲಾಸಿಪೈಡ್ ಗರ್ಭಿಣಿಯಾಗಿದ್ದಾಗ ಕಾಫಿ ಸೇವನೆ ಮಗುವಿನ ಹೃದಯಕ್ಕೆ ಮಾರಕ!

ಗರ್ಭಿಣಿಯಾಗಿದ್ದಾಗ ಕಾಫಿ ಸೇವನೆ ಮಗುವಿನ ಹೃದಯಕ್ಕೆ ಮಾರಕ!

33
0
SHARE

ಗರ್ಭಿಣಿಯಾಗಿದ್ದಾಗ ಬಯಕೆಗಳು ಸಾಮಾನ್ಯ ಆದರೆ ಆ ಬಯಕೆಯಲ್ಲಿ ‘ಕಾಫಿ’ ಸೇವನೆಯೂ ಸೇರಿದ್ದರೆ ನಿಮ್ಮ ಮಗುವಿನ ಹೃದಯಕ್ಕೆ ಮಾರಕವಾಗಬಹುದೆಂಬ ಅಂಶವನ್ನು ಸಂಶೋಧನೆಯೊಂದು ಹೊರಹಾಕಿದೆ. ಎಫ್ಎಎಸ್ಇಬಿ ವರದಿಯ ಪ್ರಕಾರ ಗರ್ಭಿಣಿಯಾಗಿದ್ದಾಗ ದಿನಕ್ಕೆ ಎರಡು ಬಾರಿಯಂತೆ ಸೇವಿಸುವ ಕಾಫಿಯು ಭ್ರೂಣದ ಹೃದಯದ ಬೆಳವಣಿಗೆಯನ್ನು ಕುಂಠಿತವಾಗುವಂತೆ ಮಾಡಿ ಮುಂದೆ ಮಗು ಹೃದಯ ಸಂಬಂಧಿ ಕಾಯಿಲೆಗಳಿಂದ ನರಳುವಂತೆ ಮಾಡ ಬಲ್ಲದಾಗಿದೆ.

ಈ ಸಂಶೋಧನೆಯ ಮುಖ್ಯಸ್ಥ ಹಾಗೂ ಮಕ್ಕಳ ತಜ್ಞ ಸ್ಕಾಟ್ ರಿವ್ಕೀಸ್ ಹೇಳುವ ಪ್ರಕಾರ ಅಧ್ಯಾಯನ ಕೆಫೇನ್ ಅಂಶದ ಪ್ರಭಾವ ಗರ್ಭಿಣಿಯರ ಮೇಲೆ ಹೇಗಾಗುತ್ತದೆ ಎಂಬುದನ್ನು ತಿಳಿಯುವುದಾಗಿದ್ದು, ಗರ್ಭಿಣಿಯರಲ್ಲಿ ಅದರ ಬಳಕೆಯ ಸುರಕ್ಷತೆಯ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ. ಸದ್ಯಕ್ಕೆ ಇಲಿಗಳ ಮೇಲಿನ ಸಂಶೋಧನೆ ಈ ಅಂಶವನ್ನು ತಿಳಿಸಿದೆ. ಗರ್ಭಿಣಿಯರೆ ನಿಮಗಾಗಿ ಅಲ್ಲದಿದ್ದರೂ, ಮುಂದೆ ಹುಟ್ಟುವ ಮಗುವಿನ ಆರೋಗ್ಯಕ್ಕಾಗಿಯಾದರೂ ಕಾಫಿಯ ಬಗ್ಗೆ ಎಚ್ಚವಾಗಿರಿ!

LEAVE A REPLY

Please enter your comment!
Please enter your name here