Home ಕ್ಲಾಸಿಪೈಡ್ ಮೂಗಿನಿಂದ ರಕ್ತಸ್ರಾವ ಕಾರಣ ಮತ್ತು ನಿವಾರಣೆ

ಮೂಗಿನಿಂದ ರಕ್ತಸ್ರಾವ ಕಾರಣ ಮತ್ತು ನಿವಾರಣೆ

179
0
SHARE

ಮೂಗಿನಿಂದ ರಕ್ತಸ್ರಾವ ಕಾರಣ ಮತ್ತು ನಿವಾರಣೆ

ಮೂಗಿನ ಮುಂಭಾಗದಲ್ಲಿ ಹಿಂಭಾಗದಲ್ಲಿ ಯಾವುದೇ ಕಾರಣಕ್ಕೆ ರಕ್ತಸ್ರಾವವಾಗಬಹುದು.

ರಕ್ತಸ್ರಾವಕ್ಕೆ ಕಾರಣಗಳು

ಸ್ಥಾನೀಯ ಕಾರಣಗಳು ಮೂಗಿಗೆ ಅಥವಾ ತಲೆಗೆ ಪೆಟ್ಟಾದಾಗ ಹಾಗೂ ಸ್ಪೆನಸ್ಸಿನಿಂದ ರಕ್ತಸ್ರಾವ ಆಗುತ್ತದೆಯಾದರೂ ಈ ಪ್ರಸಂಗಗಳಲ್ಲಿ ಸ್ರಾವ ಬೇಗನೆ ನಿಂತು ಹೋಗುತ್ತದೆ. ಮೆದುಳನ್ನು ಸುತ್ತುವರೆದಿರುವ ಮೂಳೆ ಮುರಿದಾಗ ಮೆದುಳಿನಲ್ಲಿರುವ ದ್ರವ ಪದಾರ್ಥ ರಕ್ತದ ಜೊತೆ ಸೇರಿಕೊಂಡು ಮೂಗಿನ ಮೂಖಾಂತರ ಬರಬಹುದು.

ಮೂಗಿಗೆ ಶಸ್ರ ಚಿಕಿತ್ಸೆ ಮಾಡಿದ ನಂತರವೂ ರಕ್ತ ಬರಬಹುದು. ಒಣ ಹವೆಯಲ್ಲಿ ಮೂಗಿನೊಳಗೆ ಬೆರಳು ಹಾಕಿದಾಗಲೂ ಮೂಗಿನಿಂದ ರಕ್ತ ಬರುವುದು 90% ಜನರಲ್ಲಿ ನಿಶ್ಚಿತ ಇದಲ್ಲದೆ ರಕ್ತಸ್ರಾವವಾದ ನಂತರ ಆ ರಕ್ತ ಹೆಪ್ಪುಗಟ್ಟಿದಾಗ ಅದನ್ನು ಹೊರತೆಗೆಯಲು ಬೆರಳನ್ನು ತೂರಿಸಿದರೆ ಮತ್ತೆ ರಕ್ತಸ್ರಾವವಾಗುತ್ತದೆ. ಮೂಗಿನಲ್ಲಿ ಊತ ಬಂದಾಗ, ದಿಪ್ತೀರಿಯ ಆದಾಗ ಮೂಗಿನಲ್ಲಿರುವ ರೋಮಗಳಲ್ಲಿ ಸೋಂಕು ಉಂಟಾದಾಗ ಮತ್ತು ತೀವ್ರ ರೈನೈಟೆಸ್ ಹಾಗೂ ಸ್ಪೆನೋ ಸೈಟೆಸ್ ಆದಾಗಲೂ ರಕ್ತಸ್ರಾವವಾಗುತ್ತದೆ.

ರೈನೈಟೆಸ್ ಹಾಗೂ ಸೈನೋಸೈಟೆಸ್ ತೊಂದರೆಗಳು ಬಹಳ ಹಿಂದಿನಿಂದ ಇದ್ದರೂ ಮೂಗಿನಿಂದ ಆಗಾಗ್ಗೆ ರಕ್ತ ಬರುತ್ತಿರುತ್ತದೆ. ರೈನೋಸ್ಟೋರಿ ಡಿಯೇಸಸ್ ಕಾಯಿಲೆ ಇದ್ದಾಗ ರಕ್ತಸ್ರಾವ ಅಧಿಕವಾಗಿರುತ್ತದೆ. ಕ್ಷಯ ಸಿಫಿಲಿಸ್, ಕುಷ್ಠ ರೋಗವಿದ್ದಾಗಲೂ ಈ ತೊಂದರೆ ಇರುತ್ತದೆ. ಮೂಗಿನ ಹೊಳ್ಳೆಗಳನ್ನು ಪದೇ ಪದೇ ರಕ್ತ ಸ್ರಾವವಾಗುತ್ತಿದ್ದರೆ. ಅವರು ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. ರಕ್ತದ ಕ್ಯಾನ್ಸರ್ ಹಿಮೊಫಿಲಿಯಾ, ಹಾಜಿಂಕ್ಸ್ ರೋಗಗಳಲ್ಲಿ ದೇಹದ ಇತರ ಭಾಗಗಳಿಂದಲೂ ರಕ್ತವೂ ಬರುತ್ತದೆ.

ಹೃದಯದ ಕವಾಟವು ದೋಷ ಪೂರಿತವಾಗಿದ್ದರೆ ಅಥವಾ ಮುಖ್ಯ ರಕ್ತನಾಳಗಳಲ್ಲಿ ಗಂಟಾಗಿದ್ದರೆ ನಾಯಿ ಕೆಮ್ಮು ಮತ್ತು ನಿಮೋನಿಯಾ ರೋಗಿಗಳಲ್ಲು ಮೂಗಿನಲ್ಲಿ ರಕ್ತ ಸ್ರಾವವಾಗಬಹುದು. ಎತ್ತರವಾದ ಪರ್ವತ ಪ್ರದೇಶಗಳಲ್ಲಿ ವಾತಾವರಣದಲ್ಲಿ ಒತ್ತಡ ಕಡಿಮೆಯಿದ್ದಾಗಲೂ ಮೂಗಿನಿಂದ ರಕ್ತ ಬರಬಹುದು. ಇನ್ಪ್ಲೂಯೆಮಝಾ ಸಿಡುಬು, ಟೈಫಾಯಿಡ್ ಮುಂತಾದ ಸೋಂಕು ರೋಗಗಳಿದ್ದರೆ ಹಾಗೂ ಸ್ಯಾಲಿಸಿಡೆಲ್, ರೈನೇನಿನಂತಹ ಮಾತ್ರೆಗಳ ಸೇವನೆಯಿಂದಲೂ ಮೂಗಿನಲ್ಲಿ ರಕ್ತ ಬರಬಹುದು.

ಪರೀಕ್ಷೆ ಅತ್ಯಗತ್ಯ
ವಯಸ್ಸಾದವರಲ್ಲಿ ಮೂಗಿನಿಂದ ರಕ್ತ ಬಂದರೆ ರಕ್ತ ದೊತ್ತಡವನ್ನು ಪರೀಕ್ಷಿಸಬೇಕು. ರಕ್ತಸ್ರಾವವನ್ನು ತಡೆಗಟ್ಟಲು ರಕ್ತದೊತ್ತಡವನ್ನು ನಿಯಂತ್ರಿಸಬೇಕು. ರಕ್ತ ಹೀನತೆಯ ತೊಂದರೆಯಿಂದಲೇ ಎಂದು ಸಹ ಪರೀಕ್ಷಿಸಬೇಕು ಸೈನಸ್ಸಿನ ಎಕ್ಸರೆ ತೆಗೆದು ಈ ಸ್ಥಳಗಳಲ್ಲಿ ಗಂಟಾಗಿದ್ದರೆ ಅಥವಾ ಮಾಂಸ ದೊಡ್ಡದಾಗಿದ್ದರೆ ಬಯಾಪ್ಸಿ ಮಾಡಿಸಿ ಕ್ಯಾನ್ಸರ್ ಆಗಿದೆಯೆ ಎಂದು ಪರೀಕ್ಷಿಸಬೇಕು.

ಚಿಕಿತ್ಸೆ
ಮೂಗಿನಿಂದ ರಕ್ತಸ್ರಾವವಾದಾಗ ಮೊತ್ತ ಮೊದಲಿಗೆ ಮನೆ ಚಿಕಿತ್ಸೆಯನ್ನು ಮಾಡುವುದು ಒಳ್ಳೆಯದು, ಮಂಜುಗಡ್ಡೆಯ ತುಂಡುಗಳನ್ನು ಮೂಗಿನ ಭಾಗಗಳ ಹಿಂದೆ ಇರಿಸುವುದರಿಂದ ರಕ್ತನಾಳಗಳು ಸಂಕುಚಿತಗೊಂಡು ರಕ್ತಸ್ರಾವ ತಾನಾಗೇ ನಿಲ್ಲುತ್ತದೆ. ಅಥವಾ ಹೆಬ್ಬೆರಳು ಮತ್ತು ತೋರು ಬೆರುಳಗಳಿಂದ ಮೂಗಿನ ಹೊಳ್ಳೆ ಮತ್ತು ತೋರು ಬೆರುಳಗಳಿಂದ ಮೂಗಿನ ಹೊಳ್ಳೆಗಳನ್ನು 1-2 ನಿಮಿಷ ಅದುಮಿ ಹಿಡಿಯುವದರಿಂದಲೂ ಉಪಯೋಗವಾಗುತ್ತದೆ. ಅಧಿಕ ರಕ್ತದೊತ್ತಡ ಇರುವವರಿಗೆ ರಕ್ತಸ್ರಾವವಾಗುತ್ತಿದ್ದರೆ ಅಂತಹವರೂ ಎದ್ದು ಕುಳಿತು ಕುತ್ತಿಗೆಯನ್ನು ಮುಂದು ಮಾಡಿ ಬಾಯಿಂದ ಉಸಿರಾಡಬೇಕು.

ರಕ್ತಸ್ರಾವ ತೀವ್ರವಾಗಿದ್ದರೆ ಮೂಗನ್ನು ಪ್ಯಾಕ್ ಮಾಡಲಾಗುತ್ತದೆ. ಉದ್ದನೆಯ ಬಟ್ಟೆಯ ಪೆಟ್ಟಿಗೆ ವ್ಯಾಸಲೀನ್ ಅಥವಾ ತೆಳು ಪ್ಯಾರಾಫಿನ್ ಹಚ್ಚಿ ಮೂಗಿನ ಹೊಳ್ಳೆಗಳಲ್ಲಿ ತೂರಿಸಿ ಪ್ಯಾಕ್ ಮಾಡುತ್ತಾರೆ. 48 ಗಂಟೆಗಳ ನಂತರ ಈ ಪ್ಯಾಕನ್ನು ಹೊರೆ ತೆಗೆಯುತ್ತಾರೆ. ಈ ಎಲ್ಲಾ ಉಪಾಯಗಳಿಂದಲೂ ರಕ್ತಸ್ರಾವ ನಿಲ್ಲದೆ ಹೋದರೆ ಅದಷ್ಟು ಬೇಗ ಕಿವಿ, ಮೂಗು, ಗಂಟಲು ತಜ್ಞರನ್ನು ಕಾಣುವುದು ಒಳ್ಳೆಯದು.

LEAVE A REPLY

Please enter your comment!
Please enter your name here