Home ಕ್ಲಾಸಿಪೈಡ್ ಬುದ್ಧಿವಂತರಾಗಿ ಆಧ್ರತೆಯನ್ನು ಉಳಿಸಿಕೊಳ್ಳಿ

ಬುದ್ಧಿವಂತರಾಗಿ ಆಧ್ರತೆಯನ್ನು ಉಳಿಸಿಕೊಳ್ಳಿ

50
0
SHARE

ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಿತ್ತಿರುವಂತೆ ಈ ಬೇಸಿಗೆಯಲ್ಲಿ ದೊಡ್ಡ ಸಂಖ್ಯೆಯ ಬೇಸಿಗೆ ಸಂಬಂಧಿ ಸೋಂಕು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದು ರಜೆಯ ಸಮಯವೂ ಆಗಿದ್ದು ನಮ್ಮಲ್ಲಿ ಬಹುತೇಕ ಜನರು ಹೊರಾಂಗಣದಲ್ಲಿ ಕಾಲ ಕಳೆಯುತ್ತೇವೆ.

ಇದರಿಂದ ಸೂರ್ಯನ ಕಿರಣಗಳಿಗೆ ಒಡ್ಡಿಕೊಂಡು ಹೆಚ್ಚಿನ ತಾಪಮಾನಕ್ಕೆ ಗುರಿಯಾಗುತ್ತೇವೆ. ತಕ್ಷಣ ಗಮನ ನೀಡಿದಿದ್ದಲ್ಲಿ ಬಿಸಿಲಿಗೆ ಸಂಬಂಧಿಸಿದ ಆರೋಗ್ಯ ತೊಂದರೆಗಳು ನಿಜಕ್ಕೂ ಬಹಳ ಹಾನಿ ಉಂಟು ಮಾಡಬಲ್ಲವು. ಈ ಆರೋಗ್ಯ ತೊಂದರೆಗಳಿಂದ ದೂರ ಇರಲು ಸೂಕ್ತ ರೀತಿಯ ಎಚ್ಚರಿಕೆಗಳನ್ನು ಕೈಗೊಳ್ಳಬೇಕಾಗುತ್ತದೆ.

ಮಕ್ಕಳು, ಹಿರಿಯರು ಮತ್ತು ಹೊರಾಂಗಣ ಪ್ರದೇಶಗಳಲ್ಲಿ ಕೆಲಸ ಮಾಡುವವರು ಬೇಸಿಗೆ ಸಮಯದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏಕೆಂದರೆ ಇವರು ಬೇಸಿಗೆ ಝಳದಿಂದ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅತ್ಯಂತ ಸಾಮಾನ್ಯ ಬೇಸಿಗೆ ಝಳ ಸಂಬಂಧಿ ಪರಿಣಾಮಗಳಲ್ಲಿ ಡೀಹೈಡ್ರೇಷನ್ (ಮೈಯಲ್ಲಿ ಆಧ್ರತೆಯ ನಷ್ಟ), ಝಳದಿಂದ ಸುಸ್ತಾಗುವುದು, ಬಿಸಿಲಿನಿಂದಾಗಿ ಮಾಂಸಖಂಡಗಳ ಸೆಳೆತ, ತ್ವಚೆಯ ರೋಗಗಳು, ಝಳದಿಂದ ತಲೆತಿರುಗಿ ಬೀಳುವುದು (ಸನ್ಸ್ಟ್ರೋಕ್), ಅತಿಸಾರದಂಥ ನೀರಿನಿಂದ ಬರುವ ರೋಗಗಳು ಸೇರಿವೆ.

ಬಿಸಿಲಿನ ಝಳದಲ್ಲಿ ಕಾಲ ಕಳೆಯುವಾಗ ನಮಗೆ ನರ ದೌರ್ಬಲ್ಯ, ಮಾಂಸಖಂಡಗಳ ಸೆಳೆತ, ಅತಿ ಸುಸ್ತಾಗುವ ತೊಂದರೆಗಳು ಸರ್ವೆ ಸಾಮಾನ್ಯ. ಇದಕ್ಕೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿರುತ್ತದೆ. ಇವು ಝಳದಿಂದ ಉಂಟಾಗುವ ಹೀಟ್ ಕ್ರಾಂಪ್ ಮತ್ತು ಹೀಟ್ ಎಕ್ಸಾಷನ್ಗಳ ಮೊದಲ ಲಕ್ಷಣಗಳಾಗಿವೆ. ಡೀಹೈಡ್ರೇಷನ್, ಹೀಟ್ ಸ್ಟ್ರೋಕ್ ಮತ್ತು ಡಯೇರಿಯಾಗಳು ಈ ಬೇಸಿಗೆಯಲ್ಲಿ ಆತಂಕ ಉಂಟುಮಾಡುವ ಪ್ರಮುಖ ರೋಗಗಳಾಗಿವೆ.

ಡೀಹೈಡ್ರೇಷನ್:
ದೇಹದಲ್ಲಿನ ದ್ರವಗಳ ನಷ್ಟ ಇದಾಗಿದ್ದು, ನೀರು ಮತ್ತು ಎಲೆಕ್ಟ್ರೋಲೈಟ್ಗಳು ಕಡಿಮೆಯಾಗುತ್ತವೆ. ಈ ಋತುವಿನಲ್ಲಿ ಇದು ಪ್ರಮುಖ ಆತಂಕವಾಗಿರುತ್ತದೆ. ಇದರಿಂದ ಹೀಟ್ ಸ್ಟ್ರೋಕ್ನ ಅಪಾಯ ಹೆಚ್ಚಾಗುತ್ತದೆ. ಪ್ರತಿ ದಿನ ನಾವು ಬೆವರು, ಮಲಮೂತ್ರ ವಿಸರ್ಜನೆ, ಉಸಿರಾಟ ಮತ್ತು ಕಣ್ಣೀರುಗಳ ಮೂಲಕ ದೇಹದಲ್ಲಿನ ದ್ರವಗಳ ನಷ್ಟವಾಗುತ್ತದೆ.

ಈ ದೇಹ ದ್ರವಗಳನ್ನು ಸಾಮಾನ್ಯವಾಗಿ ನೀರು, ಹಣ್ಣಿನ ರಸ ಮತ್ತು ನೀರು ಹೊಂದಿರುವ ಆಹಾರದ ಮೂಲಕ ದೇಹಕ್ಕೆ ಮತ್ತೆ ದ್ರವವನ್ನು ಸೇರಿಸಿಕೊಳ್ಳಬಹುದು. ಡೀಹೈಡ್ರೇಷನ್ನ ಲಕ್ಷಣಗಳಲ್ಲಿ ಬಾಯಾರಿಕೆ, ತಲೆ ಭಾರವಾಗುವುದು, ತ್ವಚೆ ಒಣಗುವುದು, ಸುಸ್ತು, ತಲೆ ತಿರುಗುವುದು, ಮಾಂಸಖಂಡಗಳು ಹಿಡಿದುಕೊಳ್ಳುವುದು, ಬಾಯಿ ಒಣಗುವುದೂ ಸೇರಿವೆ.

ಮಕ್ಕಳಲ್ಲಿ ಇರುಸುಮುರುಸು, ಬಾಯಿ ಮತ್ತು ನಾಲಿಗೆ ಒಣಗುವುದು, ಉತ್ಸಾಹ ಮತ್ತು ಶಕ್ತಿ ಇಲ್ಲದಿರುವುದು, ಕಡಿಮೆ ಅಥವಾ ಮೂರು ಗಂಟೆಗೂ ಹೆಚ್ಚು ಕಾಲ ಆಗದ ಮೂತ್ರ ವಿಸರ್ಜನೆ, ಕುಸಿದ ಕೆನ್ನೆ, ಹೊಟ್ಟೆ ಮತ್ತು ಕಣ್ಣು, ತೀವ್ರ ಜ್ವರ ಮತ್ತು ಚಿವುಟಿದಾಗ ಚಪ್ಪಟೆಯಾಗದ ಧರ್ಮ ಮುಂತಾದವುಗಳ ಅನುಭವವಾಗಬಹುದು.

ಎಚ್ಚರಿಕೆಗಳು
ಶೀಘ್ರದಲ್ಲಿ ಪತ್ತೆಯಾದರೆ ಡೀಹೈಡ್ರೇಷನ್ ಪ್ರಕರಣಗಳನ್ನು ವೈದ್ಯಕೀಯ ತುರ್ತು ಸ್ಥಿತಿಗಳೆಂದು ಕಡ್ಡಾಯವಾಗಿ ಪರಿಗಣಿಸಬೇಕು ಮತ್ತು ಆಸ್ಪತ್ರೆ ವಾಸ್ತವ್ಯದ ಅಗತ್ಯವಿರುತ್ತದೆ.

• ಬಿಸಿಲಿನಲ್ಲಿರುವಾಗ ಬಹಳಷ್ಟು ನೀರು ಕುಡಿಯಿರಿ. (ದೇಹ ಕಳೆದುಕೊಳ್ಳುವ ದ್ರವಗಳಿಗೂ ಹೆಚ್ಚಾಗಿ)
• ಸಾಧ್ಯವಾದಲ್ಲಿ ಹೆಚ್ಚು ಬಿಸಿಲಿದ್ದಾಗ ಹೊರಾಂಣ ಚಟುವಟಿಕೆ ತಪ್ಪಿಸಿ. (ಮದ್ಯಾಹ್ನ 1-4ಗಂಟೆವರೆಗೆ)
• ಬಿರು ಬಿಸಿಲಿನಲ್ಲಿರುವಾಗ ಕ್ಯಾಪ್, ಕೊಡೆ, ಮುಖ ಮುಚ್ಚಿಕೊಳ್ಳಲು ಮಾಸ್ಕ್ ಮುಂತಾದ ಸೂಕ್ತ ಸಂರಕ್ಷಣೆ ಬಳಸಿ.
• ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನ ಕಾಯ್ದುಕೊಳ್ಳಲು ತಾಜಾ ಹಣ್ಣುಗಳನ್ನು ಸೇವಿಸಿ.
• ಶಿಶುಗಳು, ಎಳೆಯ ಮಕ್ಕಳು ಮತ್ತು ಹಿರಿಯ ವಯಸ್ಕರಿಗೆ ಕುದಿಸಿ ಆರಿಸಿದ ನೀರಿನ ಸೇವನೆ ಕಡ್ಡಾಯ.

ಸೂರ್ಯಾಘಾತ (ಸನ್ ಸ್ಟ್ರೋಕ್)
ಬಿಸಿಲಲ್ಲಿ ಅಥವಾ ಹೆಚ್ಚಿನ ತಾಪಮಾನದಲ್ಲಿ ಹೆಚ್ಚು ಹೊತ್ತು ಇರುವುದರಿಂದ ಸೂರ್ಯಾಘಾತ ಸಂಭವಿಸುತ್ತದೆ. ಸರಿಯಾದ ಸಮಯದಲ್ಲಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡದಿದ್ದಲ್ಲಿ,
ಮಾರಕವಾಗಬಹುದಾದ ಬಿಸಿಲಿನ ತೊಂದರೆ ಇದಾಗಿದೆ.

ಸೂರ್ಯಘಾತದಿಂದ ಒಳಾಂಗಗಳಿಗೆ ಖಾಯಂ ಹಾನಿ ಅಥವಾ ಸಾವು ಉಂಟಾಗಬಹುದು. ದೇಹದ ತಾಪಮಾನವನ್ನು ಕಡಿಮೆ ಮಾಡುವಷ್ಟು ಬೆವರದಿರುವುದು ಸೂರ್ಯಾಘಾತದ ಪ್ರಾಥಮಿಕ ಲಕ್ಷಣವಾಗಿರುತ್ತದೆ. ಈ ಸ್ಥಿತಿ ಶೀಘ್ರದಲ್ಲಿ ಕಾಣಿಸಿಕೊಂಡು ಬಿಡುತ್ತದೆ. ಅಲ್ಲದೆ, ತಕ್ಚಣ ವೈದ್ಯಕೀಯ ಆರೈಕೆ ಅತ್ಯಗತ್ಯ.

ಮಾನವ ದೇಹ ಉತ್ಪಾದಿಸುವ ತಾಪಮಾನವನ್ನು ಬೆವರು ಸಾಮಾನ್ಯವಾಗಿ ಕಡಿಮೆಯಾಗಿಸುತ್ತದೆ. ಆದರೆ ಹೆಚ್ಚಿನ ಆಧ್ರತೆ, ತೀವ್ರ ತಾಪಮಾನ ಅಥವಾ ಬಿಸಿಲಿನಲ್ಲಿ ಅತಿ ಹೆಚ್ಚಿನ ದೈಹಿಕ ಚಟುವಟಿಕೆಗಳಿಂದ ನಮ್ಮ ಆಂತರಿಕ ವ್ಯವಸ್ಥೆ ಶಾಖವನ್ನು ಶೀಘ್ರ ಕಡಿಮೆ ಮಾಡಿಕೊಳ್ಳದಿರಬಹುದು. ಇದರಿಂದ ನಮ್ಮ ದೇಹದ ತಾಪಮಾನ ಅಪಾಯಕಾರಿ ಮಟ್ಟಕ್ಕೆ ಹೆಚ್ಚಾಗಬಹುದು. ವ್ಯಕ್ತಿ ಸೂಕ್ತ ಪ್ರಮಾಣದಲ್ಲಿ ತಾಪಮಾನ ಇಳಿಸಿಕೊಳ್ಳುವಷ್ಟು ಬೆವರದಿದ್ದರೆ ಡೀಹೈಡ್ರೇಷನ್ ಸೂರ್ಯಾಘಾತಕ್ಕೆ ದಾರಿ ಮಾಡಬಹುದು.

ಸೂರ್ಯಾಘಾತದ ಲಕ್ಷಣಗಳಲ್ಲಿ ತಲೆನೋವು, ತಲೆತಿರುಗುವುದು, ಹೆಚ್ಚಿನ ದೇಹ ತಾಪಮಾನ, ಬೆವರಿಲ್ಲದೇ ಒಣಗಿದ ತ್ವಚೆ, ಗೊಂದಲ ಅಥವಾ ದಿಗ್ಭ್ರಮೆ, ಸುಸ್ತು ಮತ್ತು ಹೆಚ್ಚಿನ ಹೃದಯ ಮಿಡಿತ, ಹಠತ್ತಾಗಿ ಮೂರ್ಛೆ, ಭ್ರಮೆ ಸೇರಿವೆ.

ಯಾರಿಗಾದರೂ ಸೂರ್ಯಾಘಾತವಾಗಿದ್ದಲ್ಲಿ, ಆ ವ್ಯಕ್ತಿಯನ್ನು ಒಳಾಂಗಣಕ್ಕೆ ಕರೆತಂದು, ಉಡುಪುಗಳನ್ನು ಕಳಚಿ, ತೊಡೆಸಂದು ಮತ್ತು ಕಂಕುಳುಗಳಲ್ಲಿ ಐಸ್ಪ್ಯಾಕ್ ನೀಡಿ, ತಣ್ಣನೆ ನೀರು ಕುಡಿಸಿ, ಜೊತೆಯಲ್ಲೇ ಫ್ಯಾನ್ ಹಾಕಿರಿ. ತಕ್ಷಣ ವೈದ್ಯಕೀಯ ಸಹಾಯಕ್ಕಾಗಿ ಕರೆಮಾಡಿ.
ಸೂರ್ಯಾಘಾತ ತಡೆಯಲಿಕ್ಕಾಗಿ ಡೀಹೈಡ್ರೇಷನ್ಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನೇ ಅನುಸರಿಸಿ.

LEAVE A REPLY

Please enter your comment!
Please enter your name here