Home ಕ್ಲಾಸಿಪೈಡ್ ಉಪ್ಪು ಅಧಿಕವಾದರೆ ತಪ್ಪದು ಮುಪ್ಪು:

ಉಪ್ಪು ಅಧಿಕವಾದರೆ ತಪ್ಪದು ಮುಪ್ಪು:

83
0
SHARE

ಉಪ್ಪು ಅಧಿಕವಾದರೆ ತಪ್ಪದು ಮುಪ್ಪು:

ಅಮ್ಮಾ ಈ ದಿನ ಊಟ ಏಕೆ ಸಪ್ಪೆಯಾಗಿದೆ? ಮಗ ಕೇಳಿದರೆ..
‘ಏನ್ ಇವತ್ತು ಸಾಂಬಾರಿನಲ್ಲಿ ಉಪ್ಪು ಹಾಕುವುದನ್ನು ಮರ್ತು ಹೋದೆಯಾ. ’ಪತಿ ಕೇಳಿದರೇ ಗಂಡ ಹೆಂಡತಿಗೆ ತಿಳಿಸುವುದು ಈ ರೀತಿ..
ಯಾರೇ ಆಗಲಿ(ಸಿಹಿ ಹೊರತು ಪಡಿಸಿ) ಉಪ್ಪು ಇಲ್ಲದಿದ್ದರೇ ಊಟ ಮಾಡಲು ಕಷ್ಟ. ಆದರೆ ಇದು ಒಂದಷ್ಟು ಪ್ರಮಾಣದವರೆಗೂ ಸರಿ ಅದೇ ಉಪ್ಪು ಮಿತಿ ಮೀರಿದ ತೊಂದರೆ ತಪ್ಪಿದ್ದಲ್ಲ.

ಹೆಚ್ಚಾದರೇ ತೊಂದರೆ
ನಮ್ಮಲ್ಲಿ ಹೆಚ್ಚು ಮಂದಿ ಉಪ್ಪು ಕಾರ ಮಸಾಲೆ ಹೆಚ್ಚಾಗಿರುವ ಪಲ್ಯ, ಚಟ್ನಿ ಇಷ್ಟ ಪಡುತ್ತಾರೆ. ಇಲ್ಲದೇ ಇದ್ದರೇ ಯಾವುದೋ ಬೇಸರದಿಂದ ಒದ್ದಾಡುತ್ತಾರೆ. ಮದುವೆ, ಪಾರ್ಟಿ, ಫಂಕ್ಷನ್ ನಡೆದರೇ ಹೇಳುವ ಅಗತ್ಯವಿಲ್ಲ.. ಎಲ್ಲವನ್ನು ಅಗತ್ಯಕ್ಕಿಂಥ ಹೆಚ್ಚಾಗಿ ಸೇವಿಸುತ್ತೇವೆ. ಯಾವುದೋ ಒಂದು ಸಂದರ್ಭದಲ್ಲಾದರೆ ತೊಂದರೇ ಇಲ್ಲ ಆದರೆ ದಿನವೂ ಹೀಗೆ ಮಾಡಿದರೇ ಸಮಸ್ಯೆ ಕಟ್ಟಿಟ್ಟ ಬುತ್ತಿ
ಎಣ್ಣೆಯಲ್ಲಿ ಕರೆದು ಉಪ್ಪು ಕಾರ ಹಾಕಿದ ಬೆಳ್ಳುಳ್ಳಿ, ಗೋಡಂಬಿಯ ಸೇವನೆ ಕಡಿಮೆ ಮಾಡಿ. ಒಂದು ಚಿಕ್ಕ ಬೌಲ್ಫುಡ್ನಲ್ಲಿ ಸುಮಾರು 20 ಗ್ರಾಂ ಉಪ್ಪು ಇರುತ್ತದೆ.

ಇಷ್ಟು ಸಾಕು
ದಿನಕ್ಕೆ ಐದರಿಂದ ಆರು ಗ್ರಾಂ ವರೆಗೂ ತಿನ್ನಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತಿದೆ. ಅಂದರೆ ಸುಮಾರಾಗಿ ಒಂದು ಟೀ ಸ್ಪೂನ್. ನಮ್ಮ ದೇಶದಲ್ಲಿ ಒಟ್ಟು ಮನುಷ್ಯ ಎಷ್ಟು ಉಪ್ಪು ಸೇವಿಸುತ್ತಾನೆ ಗೊತ್ತೇ? 20 ಗ್ರಾಂಗಳಿಗಿಂತ ಹೆಚ್ಚು.. ಅದೆ ಯುಕೆ, ಅಮೆರಿಕದಲ್ಲಿ 6, ಪೋರ್ಚುಗಲ್ 5, ಬೆಲ್ಜಿಯಂ 8.75, ಜಪಾನ್ನಲ್ಲಿ 10 ಗ್ರಾಂ ತಿನ್ನುತ್ತಾರಂತೆ..

ಸೋಡಿಯಂ.. ಉಪ್ಪು :
ಈ ಎರಡರಲ್ಲೂ ಬಹಳ ವ್ಯತ್ಯಾಸವಿದೆ. ಸೋಡಿಯಂ ಕ್ಲೋರೈಡ್ ಎಂದರೇ ಉಪ್ಪು. ಒಂದು ಗ್ರಾಂ ಸೋಡಿಯಂ ಅಂದರೇ ಎರಡೂವರೆ ಗ್ರಾಂ ಉಪ್ಪಿಗೆ ಸಮಾನ. ಕೆಲವು ಪದಾರ್ಥಗಳ ಮೇಲೆ ಲೇಬಲಿನಲ್ಲಿ 100ಗ್ರಾಂ ಗಳಿಗಿಷ್ಟು ಸೋಡಿಯಂ ಎಂದು ಬರೆದಿರುತ್ತದೆ. ಅದರಲ್ಲಿ ಎಷ್ಟು ಉಪ್ಪು ಇರಬೇಕೆಂದು ತಿಳಿಯಬೇಕಾದರೆ ಅದರ ಎರಡೂವರೆಯಷ್ಟು ಗುಣಿಸಿದರೆ ಸಾಕು.

ಹೆಚ್ಚಾದರೆ? ಅಪಾಯ :
• ಹೆಚ್ಚು ಉಪ್ಪು ತಿಂದರೆ ಹೈಬಿ.ಪಿ, ಹೃದಯ ಸಂಬಂಧಿತ ಕಾಯಿಲೆ ಬರುವ ಸಂಭವ ಅಧಿಕ.
• ಅಧಿಕ ಉಪ್ಪು ಮೂತ್ರಪಿಂಡಗಳಿಗೆ ಹಾನಿಕರ.
• ಅಧಿಕ ಉಪ್ಪು ಶರೀರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಮಾಡುತ್ತದೆ. ಇದರಿಂದ ಮೂಳೆಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.(ಆಸ್ಟಿಯೋ ಪೋರೋಸಿಸ್).
• ಕಣ್ಣಿನದೃಷ್ಟಿಯ ಮೇಲೆ ತೊಂದರೆ ಉಂಟಾಗುತ್ತದೆ.
• ಸ್ಥೂಲಕಾಯಕ್ಕೆ ದಾರಿ ತೋರುವುದರಲ್ಲಿ ಅಧಿಕ ಉಪ್ಪು ಬಳಕೆ ಕಾರಣವಾಗುತ್ತದೆ.

ಹಾಗೆ ಎಂದು ಬಿಟ್ಟರೆ:
ಹಾಗಂಥ ಉಪ್ಪು ತಿನ್ನುವುದನ್ನು ಪೂರ್ತಿಯಾಗಿ ಬಿಡಬಾರದು. ಅದು ಒಳ್ಳೆಯದಲ್ಲ. ಶರೀರದಲ್ಲಿ ಕೆಲವು ಜೀವಕ್ರಿಯೆಗಳಿಗೆ ಇದು ಅತ್ಯಗತ್ಯ. ದೇಹದಲ್ಲಿನ ದ್ರವಗಳನ್ನು ಸಮ ಪ್ರಮಾಣ ಮಾಡುವುದು ಉಪ್ಪು. ಸ್ನಾಯುಗಳು ಸಕ್ರಮವಾಗಿ ಕೆಲಸ ನಿರ್ವಹಿಸಲು ಉಪ್ಪಿನ ಪಾತ್ರೆ ನರಗಳನ್ನು ಉತ್ತೇಜನಗೊಳಿಸಲು ಉಪ್ಪು ಬೇಕೆ ಬೇಕು. ಆಹಾರದಲ್ಲಿ ಪೋಷಕಾಂಶಗಳನ್ನು ಶರೀರ ತಕ್ಷಣ ಗ್ರಹಿಸುವಂತೆ ಮಾಡುವುದು ಇದೆ. ಆದ್ದರಿಂದ ಪ್ರಮಾಣ ಮಿತದಂತೆ ಉಪ್ಪು ಸೇವಿಸಿ.

ಹೀಗೆ ಕಡಿಮೆ ಮಾಡಿಕೊಳ್ಳಬಹುದು:
ನಾವು ನಿತ್ಯ ಬದುಕಲ್ಲಿ ಉಪ್ಪು ಇಲ್ಲದ ಪದಾರ್ಥಗಳನ್ನು ತಿನ್ನುವುದೆಂದರೇ ದೊಡ್ಡ ಶಿಕ್ಷೆ.
ಹಾಗೆ ಜಾಸ್ತಿ ತಿಂದರೂ ತೊಂದರೆ ತಪ್ಪಿದ್ದಲ್ಲ ಅದಕ್ಕಾಗಿ ಸ್ವಲ್ಪ ಜಾಗ್ರತೆ ವಹಿಸಿದರೆ ಉತ್ತಮ.
1. ಪ್ರಾಸೆಸ್ಡ್ ಜಂಕ್ಫುಡ್ ಕಡಿಮೆ ಮಾಡಿ ತಾಜಾ ತರಕಾರಿ ಇರುವ ಪದಾರ್ಥ ಹಣ್ಣು ಹೆಚ್ಚು ಬಳಸಿ.
2. ಮಜ್ಜಿಗೆ, ಮೊಸರನ್ನು ತರಕಾರಿಗಳಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡಿ.
3. ಸಾಮಾನುಗಳನ್ನು ಕೊಳ್ಳುವಾಗ ಲೇಬಲ್ ನೋಡಿ ಅದರಲ್ಲಿ ಎಷ್ಟು ಉಪ್ಪು ಸೋಡಿಯಂ ಇದೆಯೆಂಬುದನ್ನು ತಿಳಿದುಕೊಳ್ಳಬಹುದು.
4. ಊಟ ಮಾಡುವಾಗ ಉಪ್ಪನ್ನು ಪದೇ ಪದೆ ಬಳಸದಿರಿ.
5. ನಾವು ತಿನ್ನುವ ಬಿಸ್ಕತ್, ಚಿಪ್ಸ್, ಬ್ರೆಡ್, ಪಿಜ್ಜಾ ಹೆಲ್ತ್ ಡ್ರಿಂಕ್ಸ್ ಇವೆಲ್ಲಕ್ಕೂ ಉಪ್ಪು ಹೆಚ್ಚಾಗಿರುತ್ತದೆ.
ಮಕ್ಕಳಿಗೆ ಉಪ್ಪು ಕಡಿಮೆ ಮಾಡಿ:

ಹೆಚ್ಚು ಉಪ್ಪು ತಿನ್ನುವ ಮಕ್ಕಳಲ್ಲಿ ರಕ್ತದೊತ್ತಡ, ಅಧಿಕ ಪ್ರಮಾಣದಲ್ಲಿರುವ ಸಂಭವ ಹೆಚ್ಚೆಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
ದಿನಕ್ಕೆ ಒಂದು ಗ್ರಾಂ ನಷ್ಟು ತೆಗೆದುಕೊಂಡರೂ ರಕ್ತದ ಒತ್ತಡದ ಪ್ರಮಾಣ ಹೆಚ್ಚಾಗುತ್ತದೆ. ಗ್ರಾಂ ಉಪ್ಪಿನಿಂದ ಪಿಸ್ಟಾ ಬ್ಲಡ್ ಪ್ರಜರ್ 0,44 ಮಿಲಿ ಮೀಟರ್ ಹೆಚ್ಚಾಗುವ ಸಂಭವ ಅಧಿಕವೆಂದು ತಿಳಿಸಲಾಗಿದೆ. ಆದ್ದರಿಂದ ಮೊದಲೇ ಈ ಅಭ್ಯಾಸ ತಗ್ಗಿಸುವುದು ಒಳಿತು.
ಯಾರಿಗೆ ಎಷ್ಟು ಉಪ್ಪು
ಯಾವ ವಯಸ್ಸಿನವರು ಎಷ್ಟು ಉಪ್ಪು ಸೇವಿಸಬೇಕೆಂಬ ವಿಷಯದಲ್ಲಿ ಬ್ರಿಟನ್ ಪೋಷಕಾಹಾರ ವೈಜ್ಞಾನಿಕ ಸಲಹಾ ಸಂಘ ಶಿಫಾರಸ್ಸುಗಳಿವು.
0-6 ತಿಂಗಳು -1ಗ್ರಾಂ ಗಿಂತ ಕಡಿಮೆ
7-12 ತಿಂಗಳು -1ಗ್ರಾಂ ಗಳು
1-3 ವರ್ಷ -2ಗ್ರಾಂ ಗಳು
4-6 ವರ್ಷ -3ಗ್ರಾಂ ಗಳು
7-10 ವರ್ಷ -5ಗ್ರಾಂ ಗಳು
11-14 ವರ್ಷ -6ಗ್ರಾಂ ಗಳು
ದೊಡ್ಡವರು -6 ರಿಂದ 7 ಗ್ರಾಂಗಳು.

LEAVE A REPLY

Please enter your comment!
Please enter your name here