Home ಕ್ಲಾಸಿಪೈಡ್ ತೊಟ್ಟಿ ಸೇರುತ್ತಿದ್ದ ಆಹಾರವನ್ನು ಹೊಟ್ಟೆ ಸೇರುವಂತೆ ಮಾಡಿದ ಪ್ರಾನ್ಸ್ ಸರ್ಕಾರ:

ತೊಟ್ಟಿ ಸೇರುತ್ತಿದ್ದ ಆಹಾರವನ್ನು ಹೊಟ್ಟೆ ಸೇರುವಂತೆ ಮಾಡಿದ ಪ್ರಾನ್ಸ್ ಸರ್ಕಾರ:

33
0
SHARE

ತೊಟ್ಟಿ ಸೇರುತ್ತಿದ್ದ ಆಹಾರವನ್ನು ಹೊಟ್ಟೆ ಸೇರುವಂತೆ ಮಾಡಿದ ಪ್ರಾನ್ಸ್ ಸರ್ಕಾರ:

ಜಗತ್ತಿನಲ್ಲಿ ಆಹಾರ ಕಸದ ತೊಟ್ಟಿ ಸೇರುವಷ್ಟು ಇನ್ಯಾವ ವಸ್ತು ಕೂಡ ಸೇರುವುದಿಲ್ಲ. ಪ್ರಪಂಚದಲ್ಲಿ ದುಡಿದು ತಿನ್ನುವ ಜನರಿಗಿಂತ, ಹಸಿವಿನಿಂದ ಭಿಕ್ಷೆ ಬೇಡುತ್ತಾ ಬದುಕುವ ಜನರೆ ಜಾಸ್ತಿ ಇದ್ದಾರೆ. ಒಂದು ಲೆಕ್ಕಾಚಾರದ ಪ್ರಕಾರ ವಿಶ್ವದಲ್ಲಿ ಕೇವಲ 3ನೇ ಒಂದು ಭಾಗದಷ್ಟು ಆಹಾರವೆಲ್ಲ ಕಸದ ತೊಟ್ಟಿಯನ್ನು ಸೇರುತ್ತದೆ. ಆದ್ರೆ ಇದೇ ಆಹಾರವನ್ನು ಅಗತ್ಯವಿರುವವರಿಗೆ ಕೊಟ್ರೆ ಪುಣ್ಯಸಿಗುತ್ತದೆ. ಹಸಿದ ಹೊಟ್ಟೆ ತುಂಬಿಸಿದ ಪುಣ್ಯ ದೊರಕುತ್ತದೆ. ಆಹಾರವನ್ನು ಬೇಡ ಎನ್ನುವ ಜನರಿಗೆ ಫ್ರಾನ್ಸ್ ಸರ್ಕಾರದ ಮೊದಲ ಪಾಠವಾಗಿದೆ.

ಫ್ರಾನ್ಸನಲ್ಲಿ ಇನ್ನು ಮುಂದೆ ದೊಡ್ಡ ದೊಡ್ಡ ಮಾಲ್ಗಳಲ್ಲಿ, ಫುಡ್ ಬಜಾರಗಳಲ್ಲಿ, ಉಳಿದ ಆಹಾರವನ್ನು ಡಸ್ಟಬಿನ್ಗೆ ಎಸೆಯುವಂತಿಲ್ಲ. ಒಂದು ವೇಳೆ ಅಪ್ಪಿತಪ್ಪಿ ಎಸೆದರೆ ಶಿಕ್ಷೆ ಗ್ಯಾರೆಂಟಿ. ಏಕೆಂದರೆ ಫ್ರಾನ್ಸ್ ಸರ್ಕಾರ ಉಳಿದ ಆಹಾರವನ್ನು ಹಸಿವಿನಿಂದ ಬಳಲುತ್ತಿರುವವರಿಗೋ ಅಥವಾ ಅನಾಥಶ್ರಮಕ್ಕೋ, ಇನ್ಯಾವುದೋ ಚಾರಿಟೇಬಲ್ ಟ್ರಸ್ಟ್ಗೆ ಕೊಡಬೇಕು.ಅಂತ ಕಟ್ಟಾಜ್ಞೆಯನ್ನು ಹೊರಡಿಸಿದೆ.

ಆಹಾರದ ವಿಷಯದಲ್ಲಿ ಈ ರೀತಿಯ ಕಾನೂನನ್ನು ಜಾರಿಗೆ ತಂದ ಜಗತ್ತಿನ ಮೊತ್ತ ಮೊದಲ ದೇಶ ಅನ್ನೋ ಕೀರ್ತಿ ಫ್ರಾನ್ಸ್ ಪಾಲಾಗಿದೆ.
ಫ್ರಾನ್ಸ್ ಸರ್ಕಾರದ ಈ ಹೊಸ ಕಾನೂನಿಗೆ ಎಲ್ಲಾ ಕಡೆಯಿಂದಲೂ ಶ್ಲಾಘನೆ ಮತ್ತು ಬೆಂಬಲ ವ್ಯಕ್ತವಾಗಿದೆ. ಸೆನೆಟ್ನಲ್ಲಿ ಈ ಬಿಲ್ ಪಾಸ್ ಆಗುತ್ತಿದ್ದಂತೆ ಚಾರಿಟಿಗಳು NGOಗಳು ಇದನ್ನು ಸ್ವಾಗತಿಸಿವೆ. ಇನ್ನು ಮುಂದೆ ಹಸಿವಿನಿಂದ ಬಳಲುತ್ತಿರುವವರಿಗೆ ಈ ಹೊಸ ಕಾನೂನು ವರದಾನವಾಗಲಿದೆ.

ಫುಡ್ ಬಜಾರ್ಗಳಲ್ಲಿ, ಮಾಲಗಳಲ್ಲಿ ಬಳಕೆ ಮಾಡಕೆ ಉಳಿದ ಆಹಾರವನ್ನು ಸಂಗ್ರಹಿಸಲು ಮತ್ತು ಅದನ್ನು ಅಗತ್ಯವಿರುವವರಿಗೆ ತಲುಪಿಸಲು NGO ಗಳು ಮತ್ತು ಚಾರಿಟೇಬಲ್ ಟ್ರಸ್ಟ್ಗಳು ಸೂಕ್ತಕ್ರಮಗಳನ್ನು ಕೈಗೊಳ್ಳಲಿದೆ. ಸರ್ಕಾರದ ಈ ನೀತಿಯನ್ನು ಸೂಪರ್ ಮಾರ್ಕೆಟ್ಗಳು ಮತ್ತು ದೇಶದ ಫುಡ್ ಬ್ಯಾಂಕ್ಗಳು ಕೂಡ ಸ್ವಾಗತಿಸಿವೆ.

“ಫುಡ್ ಬ್ಯಾಂಕ್, ಮಾಲ್ ಮತ್ತು ಸೂಪರ್ ಮಾರ್ಕೆಟ್ಗಳಲ್ಲಿ ಉಳಿದ ಆಹಾರವನ್ನು ನಾವು ಸೂಚಿಸಿದ ಸಂಘ ಸಂಸ್ಥೆಗಳಿಗೆ ದಾನ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ನಾವು ಹೆಚ್ಚು ಪೋಷಕಾಂಶಗಳಿರುವ ಆಹಾರವನ್ನು ಉತ್ಪಾದಿಸುವ ಪ್ರಯತ್ನವನ್ನು ಕೂಡ ಮಾಡುತ್ತೇವೆ. ಸದ್ಯಕ್ಕೆ ನಾವು ಮಾಂಸ, ಹಣ್ಣು ಹಂಪಲು ಮತ್ತು ಪೋಷಕಾಂಶಗಳಿರುವ ತರಕಾರಿಗಳ ಅಭಾವ ಅನುಭವಿಸುತ್ತಿದ್ದೇವೆ. ಸರ್ಕಾರದ ಈ ಹೊಸ ನಿಯಮ ಈ ಕೊರತೆಯನ್ನು ದೂರಮಾಡಲಿದೆ”
ಜೇಕ್ಸ್ಬೈಲೆಟ್, ಪ್ರೆಂಚ್ ಫುಡ್ ಬ್ಯಾಂಕ್ ಅಧ್ಯಕ್ಷ.

LEAVE A REPLY

Please enter your comment!
Please enter your name here