Home ಕ್ಲಾಸಿಪೈಡ್ ಮಕ್ಕಳು ಬಾಲ ಭೀಮಾರಾಗಲು ಬಿಡಬೇಡಿ

ಮಕ್ಕಳು ಬಾಲ ಭೀಮಾರಾಗಲು ಬಿಡಬೇಡಿ

45
0
SHARE

ಮಕ್ಕಳು ಬಾಲ ಭೀಮಾರಾಗಲು ಬಿಡಬೇಡಿ

ಮಕ್ಕಳು ದಪ್ಪ, ದುಂಡು ದುಂಡೆಗೆ ಇದ್ದು ಎಲ್ಲಾ ರೀತಿಯ ಆರೋಗ್ಯದದಿಂದ ಇದ್ದಾರೆಂದು ಭಾವಿಸುವುದು ನಮಗೆ ಅಭ್ಯಾಸವಾಗಿರುತ್ತದೆ. ಆದರೆ ಈ ಧೋರಣೆ ಸರಿಯಲ್ಲ ಎಂಬುದು ಈಗೀಗ ಅರ್ಥವಾಗ ತೊಡಗಿದೆ. ಮುದ್ದಾಗಿ, ದಪ್ಪವಾಗಿ ಇರುವುದಕ್ಕೆ….. ಪ್ರಮಾದಕರವೆನಿಸಿರುವ ಸ್ಥೂಲಕಾಯಕ್ಕೆ ಮಧ್ಯೆ ಸಾಕಷ್ಟು ಅಂತರವಿದೆ. ನಮ್ಮ ಮಕ್ಕಳು ಆ ಅಂತದಿಂದ ಇನ್ನೂ ದೂರ ಕ್ರಮಿಸುತ್ತಿದ್ದಾರೆ. ಸ್ಥೂಲ ಕಾಯದ ವಿಷಯದಲ್ಲಿ ಈಗ ಮಕ್ಕಳು ದೊಡ್ಡವರಿಗಿಂತ ಕಡಿಮೆ ಏನಿಲ್ಲ ಎಂಬುದಕ್ಕೆ ಕೆಳಗಿನ ಅಂಶಗಳುನ್ನೂ ಗಮನಿಸಬಹುದು.
ನಷ್ಟವೇನಿದೆ?

ಮಕ್ಕಳು ದಪ್ಪವಾಗಿದ್ದಾರೆ ಒಳ್ಳೆಯದು. ಅದರಿಂದ ನಷ್ಟ ಏನಿದೆ? ಎಂದು ಭಾವಿಸುವುದು ಸಹಜ. ಆದರೆ ಇದರಿಂದ ಎಷ್ಟೋಂದು ಹಾನಿಕಾರಕ ಸಂಗತಿಗಳಿವೆ ಎಂಬುದನ್ನು ಗಮನಿಸೋಣ.

• ದೊಡ್ಡ ವಯಸ್ಸಿನಲ್ಲಿ ಬರುವ ಹೈಬಿಪಿ, ಮಧುಮೇಹ, ಹೃದಯದೊತ್ತಡದಂತಹ ಸಮಸ್ಸೆಗಳಿಗೆ. ಇಂತಹವರಲ್ಲಿ ಬಾಲ್ಯದಿಂದಲೇ ಬೀಜಾಂಕುರವಾಗುತ್ತದೆ.
• ಬಹಳಷ್ಟು ಮಂದಿ ಬಾಲ್ಯದಲ್ಲಿ ಸ್ವಲ್ಪ ಬೊಜ್ಜು ಹೊಟ್ಟೆ ಇದ್ದರೆ.. ದೊಡ್ಡವರಾದ ನಂತರ ಕಡಿಮೆಯಾಗುತ್ತದೆ ಎಂಬು ನಂಬುತ್ತಾರೆ.. ಆದರೆ ಅದು ಸರಿಯಲ್ಲ. ಚಿಕ್ಕ ವಯಸ್ಸಿನಲ್ಲಿ ದಪ್ಪ.. ಬೊಜ್ಜು ಹೊಟ್ಟೆ ಹೊಂದಿರುವ ಮಕ್ಕಳಲ್ಲಿ ನೂರಕ್ಕೆ 80ರವರೆಗೂ ದೊಡ್ಡ ವಯಸ್ಸಿನಲ್ಲೂ ಸ್ಥೂಲಕಾಯ ರಾಗಿಯೇ ಬೆಳೆಯುತ್ತಾರೆ. ಈ ರೀತಿ ದೀರ್ಘಕಾಲದವರೆಗೆ ಸ್ಥೂಲ ಕಾಯರಾಗಿ ಇರುವುದರಿಂದ ಇವರೆಗೆ ಆರೋಗ್ಯ ಸಮಸ್ಯೆಗಳು ತಕ್ಷಣದಲ್ಲೇ ದಾಳಿ ಮಾಡುತ್ತವೆ.
• ಸ್ಥೂಲಕಾಯದ ಮಕ್ಕಳಲ್ಲಿ ಟ್ರ್ಯೆಗ್ಲಿಜ ರೈಡ್ಸ್, ಕೆಟ್ಟ ಕೊಲೆಸ್ಟ್ರಾಲ್(ಎಂಟಿಎಲ್) ಹೆಚ್ಚಾಗಿ ಇರುತ್ತವೆ. ಉತ್ತಮ ಕೊಲೆಸ್ಟ್ರಾಲ್(ಎಚ್ಟಡಿಎಲ್)ಕಡಿಮೆ ಇರುತ್ತದೆ. ಇದರಿಂದ ಬೇಗ ರೋಗ ಬಾಧೆಗೊಳಗಾಗುತ್ತಾರೆ.
• ಪಿತ್ತಾಶಯದಲ್ಲಿ ಕಲ್ಲು ಏರ್ಪಡುವಿಕೆ, ಉಬ್ಬಸ, ನಿದ್ರೆ ಸಮಸ್ಯೆಗಳು ಇವರಲ್ಲಿ ಹೆಚ್ಚು ಇರುತ್ತವೆ.
• ಸಾಮಾನ್ಯವಾಗಿ ದೊಡ್ಡವರಲ್ಲಿ ಕಂಡು ಬರುವ ಟೈಪ್2 ಮಧುಮೇಹ ಈಗ ನಮ್ಮ ದೇಶದಲ್ಲಿ 15-20 ವರ್ಷದವರಲ್ಲೂ ಹೆಚ್ಚು ಕಂಡು ಬರುತ್ತಿದೆ. ಇದಕ್ಕೆ ಬಾಲ್ಯದಿಂದಲೇ ಸ್ಥೂಲ ಕಾಯರಾಗಿರುವುದೇ ಕಾರಣ ಎನ್ನಲಾಗುತ್ತದೆ.

ದೇಹದಲ್ಲಿ ಕೊಬ್ಬು ಇರಬೇಕಾದ ಪ್ರಮಾಣಕ್ಕಿಂತ ಹೆಚ್ಚು ಇರುವುದೇ ಸ್ಥೂಲಕಾಯ. ಮಕ್ಕಳು ಸಾಮಾನ್ಯವಾಗಿ ಇರಬೇಕಾದ ತೂಕಕ್ಕಿಂತ ಶೇ.120ಕ್ಕಿಂತಲೂ ಹೆಚ್ಚಾಗೆ ಇದ್ದರೆ ಅವರನ್ನು ಹೆಚ್ಚು ತೂಕದ ಮಕ್ಕಳೆಂದು ಪರಿಗಣಿಸ ಲಾಗುವುದು. ಇದನ್ನು ತಿಳಿಯಲ್ಲು ‘ಬಾಡಿ ಮಾಸ್ಕ್, ಇಂಡೆಕ್ಸ್-ಬಿಎಂಐ’ ತುಂಬಾ ಉಪಯೋಗವಾಗುತ್ತದೆ.

ವಯಸ್ಸಿಗೆ ತಕ್ಕಂತೆ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಈ ಬಿಎಂಐ ಎಲ್ಲಿಯವರೆಗೆ ಇರುತ್ತದೆ ಎಂದು ಹೇಳಲು ಗ್ರಾಫ್ಗಳು ಲಭ್ಯವಾಗುತ್ತಿವೆ. ವಯಸ್ಸಿನ ಪ್ರಕಾರ ಅದನ್ನು ಗ್ರಾಫ್ನಲ್ಲಿ ನಮೋದಿಸಿದಾಗ ಅದು ಶೇ.85ಕ್ಕಿಂತಲೂ ಹೆಚ್ಚು ಇದ್ದರೆ ಹೆಚ್ಚು ತೂಕ, ಶೇ.95 ಇದ್ದರೆ ಸ್ಥೂಲ ಕಾಯ ಇದೆ ಎಂದು ತಿಳಿಯಬಹುದು. ಅದೇ ರೀತಿ ದೇಹದ ಮೇಲಿನ ಸುಕ್ಕುಗಳ ಹತ್ತಿರ ಪ್ರಮಾಣವನ್ನು ಲೆಕ್ಕಿಸುವುದರಿಂದ ಕೊಬ್ಬು ಎಷ್ಟಿದೆ ಎಂಬುದನ್ನು ತಿಳಿಯಬಹುದಾಗಿದೆ.

ಯುಕ್ತ ವಯಸ್ಸಿಗಿಂತ ಮೊದಲು ಮಕ್ಕಳ ಸೊಂಟದ ಸುತ್ತಳತೆ 71 ಸಂ. ಮೀ.ದಾಟಿದರೂ ಅವರು ಸ್ಥೂಲಕಾಯದವರೆಂದೇ ಅರ್ಥ. ತೂಕ ಹೆಚ್ಚಾಗುವುದರಲ್ಲಿ ವಂಶವಾಹಿಗಳ ಪಾತ್ರವೂ ಪ್ರಮುಖವಾದುದಾಗಿದೆ. ತಾಯಿ ತಂದೆಯರು ಸ್ಥೂಲಕಾಯದವರಿದ್ದರೆ, ಅವರ ಮಕ್ಕಳು ಕೂಡ ಸ್ಥೂಲಕಾಯದವರಾಗುವ ಅವಕಾಶ ಶೇ.80ರ ವರೆಗೂ ಇರುತ್ತದೆ. ಅವರಿಬ್ಬರಲ್ಲಿ ಒಬ್ಬರು ಸ್ಥೂಲದೇಹಿಗಳಿದ್ದರೂ ಶೇ. 50 ರಷ್ಟು ಅವಕಾಶಗಳಿರುತ್ತವೆ. ಈಗೀನ ಮಕ್ಕಳು.. ದೇಹಕ್ಕೆ ಶ್ರಮ ಕೊಡುವುದೇ ಇಲ್ಲ. ಶಾಲೆಗಳಲ್ಲಿ ಆಟಗಳು, ಆಟದ ಮೈದಾನಗಳು ಕಾಣದಾಗಿವೆ. ಮಕ್ಕಳು ಬಹಳ ಹೊತ್ತು ಟಿ.ವಿ ಮುಂದೆ, ಕಂಪ್ಯೂಟರ್ ಗೇಮ್ ಆಡುತ್ತಾ ಕಳೆಯುತ್ತಾರೆ. ಒಂದೆಡೆ ಬಲ ವರ್ಧಕವಾದ ಹೆಚ್ಚಿನ ತಿಂಡಿ.. ಮತ್ತೊಂದು ಕಡೆ ಶಾರೀರಿಕ ಕ್ರಮ ಇಲ್ಲದಿರುವುದು.. ಇವೇ ‘ಬಾಲ ಭೀಮರು’ ಹೆಚ್ಚುತ್ತಿರುವುದಕ್ಕೆ ಮುಖ್ಯ ಕಾರಣ.

LEAVE A REPLY

Please enter your comment!
Please enter your name here