Home ಕ್ಲಾಸಿಪೈಡ್ ರಾಮಬಾಣ ಬೆಳ್ಳುಳ್ಳಿ

ರಾಮಬಾಣ ಬೆಳ್ಳುಳ್ಳಿ

51
0
SHARE

ಇನ್ನೊಂದು ಅಪಾರ ಶಕ್ತಿಯುಳ್ಳ ಆಹಾರವೆಂದರೆ ಬೆಳ್ಳುಳ್ಳಿ. ಬ್ಯಾಕ್ಟೀರಿಯಾ, ಶಿಲೀಂಧ್ರ ಹಾಗೂ ವೈರಸ್ ಸೋಂಕನ್ನು ದೂರ ಇಡುವ ಇದು, ಉರಿಯೂತ ಕಡಿಮೆ ಮಾಡುತ್ತದೆ. ಇದು ಹೃದಯ ಹಾಗೂ ರಕ್ತಪರಿಚಲನಾ ಯವಸ್ಥೆಗೆ ಉತ್ತಮ. ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಅಂಶ ಪ್ರತಿರಕ್ಷಣ ವ್ಯವಸ್ಥೆಯನ್ನು ಹೆಚ್ಚುಸುವ ಮೂಲ ವಸ್ತು ಎಂದೇ ಪರಿಗಣಿಸಲಾಗಿದೆ. ಕ್ಯಾನ್ಸರ್ ಕೋಶಗಳನ್ನು ಕೂಡಾ ಇದು ನಾಶಪಡಿಸುತ್ತದೆ.

ಇನ್ನು ದಿಗ್ಧನಾಳ ವ್ಯೂಹ ಹಾಗೂ ಈ ಪ್ರತಿರಕ್ಷಣಾ ವ್ಯವಸ್ಥೆಗೆ ನೇರ ಸಂಬಂಧವಿದೆ. ರಕ್ಷಣಾ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಿದರೆ, ವಿಷಕಾರಿ ಅಂಶ ಹಾಗೂ ಸತ್ತ ಜೀವಕೋಶಗಳು ದುಗ್ಧರಸದ ಮೂಲಕ ಸಾಗಿ ಹೊರ ಹಾಕಲ್ಪಡುತ್ತವೆ. ಇದು ಅವುಗಳನ್ನು ವಾಪಸ್ಸು ರಕ್ತ ಪ್ರವಾಹಕ್ಕೆ ಸೇರದಂತೆ ತಡೆಯುತ್ತದೆ. ವ್ಯಾಯಾಮವಿಲ್ಲದೇ ಜಡತ್ವ ಬೆಳೆಸಿಕೊಂಡರೆ ಕಾಲು ಹಾಗೂ ತೋಳಿನ ಸ್ನಾಯುಗಳ ಚಲನೆಯಿಲ್ಲದೇ ಈ ವಿಷಕಾರಿ ಅಂಶಗಳ ವಿಸರ್ಜನೆ ಕೂಡಾ ಕಷ್ಟವಾಗುತ್ತದೆ. ವ್ಯಾಯಾಮದಿಂದ ಕೆಲವು ಕಡಿಮೆ ಪ್ರಮಾಣದ ಸೋಂಕನ್ನು ನಿವಾರಿಸಿಕೊಳ್ಳಬಹುದು.

ಇವೆಲ್ಲವುಗಳಿಂದ ಮುಖ್ಯವಾದದ್ದು ಒತ್ತಡ ನಿರ್ವಹಣೆ ಎನ್ನುತ್ತಾರೆ ವೈದ್ಯರು. ಋಣಾತ್ಮಕ ಚಿಂತನೆಗಳು. ಭಾವನಾತ್ಮಕ ಒತ್ತಡ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಖುಷಿ ಘಟನೆಯ ಕುರಿತು ನೆನಪುಗಳು, ಸಂತಸ ಹುಟ್ಟಿಸುವ ಆಲೋಚನೆಗಳು ಪ್ರತಿರಕ್ಷಣಾ ಕಾಯಗಳ ಸಂಖ್ಯೆಯನ್ನು ಜಾಸ್ತಿ ಮಾಡುತ್ತವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here