Home ಕ್ಲಾಸಿಪೈಡ್ ಕ್ಯಾನ್ಸರ್ ಪೀಡಿತರಿಗೆ ಜೀವದಾನ ನೀಡುವ ಸ್ಟೆಮ್ಸೆಲ್ಸ್

ಕ್ಯಾನ್ಸರ್ ಪೀಡಿತರಿಗೆ ಜೀವದಾನ ನೀಡುವ ಸ್ಟೆಮ್ಸೆಲ್ಸ್

38
0
SHARE

ಕ್ಯಾನ್ಸರ್ ಪೀಡಿತರಿಗೆ ಜೀವದಾನ ನೀಡುವ ಸ್ಟೆಮ್ಸೆಲ್ಸ್
ಅಕರ ಕೋಶ ಅಥವಾ ಸ್ಟೆಮ್ಸೆಲ್ಸ್ ದಾನ ಭಾರತದಲ್ಲಿ ಅತ್ಯಂತ ಅಪರೂಪದ ವಿದ್ಯಮಾನ. ಕ್ಯಾನ್ಸರ್ ಅದರಲ್ಲೂ ರಕ್ತ ಮತ್ತು ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗೆ ಅಕರಕೋಶ ಸಂಜೀವಿನಿಯಾಗಬಲ್ಲುದು.

120 ಕೋಟಿ ಜನಸಂಖ್ಯೆಯ ಭಾರತದಲ್ಲಿ ಈವರೆಗೆ 140 ರಿಂದ 150 ಮಂದಿ ಮಾತ್ರ ಈ ದಾನದ ‘ಭಾಗ್ಯ’ ಪಡೆದಿದ್ದಾರೆ. 100ನೇ ದಾನಿ ಕನ್ನಡಿಗರೂ ಆಗಿರುವ ಹೈದ್ರಾಬಾದ್ನಲ್ಲಿರುವ  ಡಿ.ಆರ್ಡಿ.ಒ  ವಿಜ್ಞಾನಿ ಚಂದ್ರಕಾಂತ ಆಚಾರ್ಯ ಸ್ಟೆಮ್ಸೆಲ್ ದಾನದ ಮಹತ್ವ, ಅಗತ್ಯದ ಬಗ್ಗೆ ತಿಳಿಸಿ ಕೊಟ್ಟಿದ್ದಾರೆ. ಅಕರ ಕೋಶ (ಸ್ಟೆಮ್ ಸೆಲ್) ಅಸ್ಥಿಮಜ್ಜೆಯಲ್ಲಿ ಉತ್ಪತ್ತಿ ಆಗುವ ರಕ್ತ ಕಣಗಳ ಮೊದಲ ಹಂತ. ಇದನ್ನು ತಾಯಿ ಕಣಗಳು ಎನ್ನಬಹುದು. ಈ ತಾಯಿ ಕಣಗಳು ಮುಂದೆ ಕೆಂಪು ರಕ್ತ ಕಣ, ಬಿಳಿ ರಕ್ತ ಕಣ, ಪ್ಲೇಟ್ಲೇಟ್(ಕೆನೆಕಣ), ಪ್ಲಾಸ್ಮಾ ಹೀಗೆ ಬೇರೆ ಬೇರೆಯಾಗಿ ಬೆಳೆಯುತ್ತವೆ. ಕ್ಯಾನ್ಸರ್ ರೋಗಿಗಳಲ್ಲಿ ವಿಶೇಷವಾಗಿ, ರಕ್ತ ಮತ್ತು ಮೂಳೆ ಕ್ಯಾನ್ಸರ್ಗಳ ಪೀಡಿತರಲ್ಲಿ ಅಕರ ಕೋಶಗಳ ಉತ್ಪಾದನೆ ಕುಂಠಿತಗೊಂಡಿರುತ್ತದೆ. ಇಂತಹ ರೋಗಿಗಳಿಗೆ ದಾನಿಯಿಂದ ಅಕರಕೋಶಗಳನ್ನು ನೀಡಿದಾಗ ರೋಗಿಗಳು ಬದುಕುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಸುದೀರ್ಘ ಪ್ರಕ್ರಿಯೆ

ಸ್ಟೆಮ್ಸೆಲ್ ಅಗತ್ಯವಿರುವ ರೋಗಿಗೆ ದಾನಿಯ 10 ಗುಣಲಕ್ಷಣಗಳ ಪೈಕಿ 8 ಲಕ್ಷಣಗಳು ಹೊಂದಾಣಿಕೆಯಾದರೆ, ದಾನಿಗೆ ಸ್ಟೆಮ್ಸೆಲ್ ದಾನಕ್ಕೆ ಕೋರಲಾಗುತ್ತದೆ. ದಾನಿ ಒಪ್ಪಿಗೆ ನೀಡಿದಲ್ಲಿ, ಒಂದು ಜೀವವನ್ನು ಉಳಿಸಲು ಅಣಿ ಆದಂತೆ. ನಂತರ ಎರಡನೇ ಹಂತ ಆರಂಭ, ದಾನಿಯನ್ನು ಸಮಗ್ರ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಮೂರನೇ ಹಂತದಲ್ಲಿ ದಾನಿಯ ದೇಹದಲ್ಲಿ ಸ್ಟೆಮ್ ಸೆಲ್ಗಳು ಸಹಜವಾಗಿ ಉತ್ಪಾದನೆ ಆಗುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದನೆ ಆಗುವಂತೆ ದಾನಕ್ಕೆ ಮೊದಲಿನ ನಾಲ್ಕು ದಿನ ಕಾಲ ತಲಾ ಒಂದೊಂದು ಇಂಜೆಕ್ಷನ್ ನೀಡಲಾಗುತ್ತದೆ. ದಾನದ ದಿನ ಅಂದರೆ ಐದನೇ ಹಂತದಲ್ಲಿ ಬೆಳಗ್ಗೆ ಐದನೇ ಇಂಜೆಕ್ಷೆನ್ ನೀಡಲಾಗುತ್ತದೆ. ನಂತರ ರಕ್ತದ ಮೂಲಕ ಸ್ಟೆಮ್ಸೆಲ್ ತೆಗೆಯುವ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಇದು ಪೂರ್ಣಗೊಳ್ಳಲು 4 ರಿಂದ 6 ಗಂಟೆ ಬೇಕಾಗುತ್ತದೆ. ಹೀಗೆ ತೆಗೆದ ಸ್ಟೆಮ್ಸೆಲ್ಗಳನ್ನು 48 ಗಂಟೆಗಳ ಒಳಗೆ ರೋಗಿಗೆ ನೀಡಬೇಕಾಗುತ್ತದೆ.

ದಾನಿಯಾಗಲು ನೋಂದಣಿ ಅಗತ್ಯ
ಸ್ಟೆಮ್ಸೆಲ್ ದಾನ ಸಾಮಾನ್ಯ ರಕ್ತದಾನ ಮಾಡಿದಂತಲ್ಲ. ಇದರಲ್ಲಿ ಹಲವು ಹಂತಗಳನ್ನು ಪಾಲಿಸಬೇಕಾಗುತ್ತದೆ. ಮೊದಲಿಗೆ ಕೆನ್ನೆಯ ಒಳಭಾಗದ ದ್ರವ ‘ಚೀಕ್ ಸ್ವಾಬ್’ ತೆಗೆದು ಜೀವ ಕಣಗಳ ಎಚ್ಎಲ್ಎ ಮಾದರಿಯ ಪರೀಕ್ಷೆ ಮಾಡಿ ಅವುಗಳ ಗುಣಲಕ್ಷಣಗಳನ್ನು ದಾಖಲು ಮಾಡಲಾಗುತ್ತದೆ. 10 ಗುಣಲಕ್ಷಣಗಳನ್ನು ಪಟ್ಟಿ ಮಾಡಿ, ದಾನಿ ಎಂದು ಹೆಸರು ನೋಂದಾಯಿಸಲಾಗುತ್ತದೆ. ಆಗ ವ್ಯಕ್ತಿಯನ್ನು ಸಂಭಾವ್ಯ ದಾನಿ ಎಂದು ಪರಿಗಣಿಸಲಾಗುತ್ತದೆ.
ದಾನಕ್ಕೆ ಎಲ್ಲರಿಗೂ ಅವಕಾಶವಿಲ್ಲ…!

ಇಂಜೆಕ್ಷನ್ ತೆಗೆದುಕೊಂಡಾಗ ಮೂಳೆಯಲ್ಲಿ ನೋವು, ತಲೆ ತಿರುಗುವುದು ಇತ್ಯಾದಿ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಬಳಿಕ ಸರಿ ಹೋಗುತ್ತದೆ. ಇದೊಂದು ಸರಳ ಪ್ರಕ್ರಿಯೆ. ಸ್ಟೆಮ್ಸೆಲ್ ಮ್ಯಾಚ್ ಆಗುವ ಸಾಧ್ಯತೆ 20 ಲಕ್ಷದಲ್ಲಿ ಒಬ್ಬರಿಗೆ ಆಗಬಹುದು. ಹೀಗಾಗಿ ಲಕ್ಷಾಂತರ ಜನ ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದರೂ, ದಾನಕ್ಕೆ ಅವಕಾಶ ಸಿಗುವುದು ವಿರಳಾತಿವಿರಳ. ಇದು ಅತ್ಯಂತ ದುಬಾರಿ ಪ್ರಕ್ರಿಯೆಯೂ ಹೌದು ಎನ್ನುತ್ತಾರೆ ಆಚಾರ್ಯ.

ನಾನು ದಾನ ಮಾಡಿದ ಸ್ಟೆಮ್ಸೆಲ್ ಕುವೈತ್ನ ಮಗುವಿಗೆ ನೀಡಲಾಗಿದೆಯಂತೆ. ಯಾರಿಗೆ ನೀಡಲಾಗಿದೆ ಎಂಬುದನ್ನು ಗೌಪ್ಯವಾಗಿಡಲಾಗುತ್ತದೆ. ದಾನಿ ಮತ್ತು ರೋಗಿಯ ಪರಸ್ಪರ ಪರಿಚಯ ಆಗುವುದಿಲ್ಲ. ದೇಶದಲ್ಲಿ ನಾನು ನೂರನೇ ದಾನಿ ಎಂಬುವುದು ವಿಶೇಷ. ಇಲ್ಲಿಯವರೆಗೆ 140 ರಿಂದ 150 ಮಂದಿ ದಾನ ಮಾಡಿದ್ದಾರೆ ಎಂದು ಚಂದ್ರಕಾಂತ ಆಚಾರ್ಯ ಡಿ.ಆರ್ಡಿ.ಒ ವಿಜ್ಞಾನಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here