Home ಕ್ಲಾಸಿಪೈಡ್ ಮೂತ್ರಪಿಂಡ ನಾಶಕ ಜಂಕ್ ಫುಡ್!

ಮೂತ್ರಪಿಂಡ ನಾಶಕ ಜಂಕ್ ಫುಡ್!

29
0
SHARE

ಬರ್ಗರ್, ಪಿಜ್ಜಾ ಮಾದರಿಯ ಜಂಕ್ ಫುಡ್ ಹಾಗೂ ಕೃತಕ ಹಣ್ಣಿನ ರಸದ ಪಾನೀಯಗಳಿಂದ ಮೂತ್ರಪಿಂಡಕ್ಕೆ ಹಾನಿಯುಂಟಾಗುತ್ತದೆ ಎಂದು ಲಂಡನ್ ಸಂಶೋಧಕರ ಅಧ್ಯಯನ ಹೇಳಿದೆ.
ಮಧುಮೇಹ ಹಾಗೂ ಬೊಜ್ಜು ಜಾಗತಿಕ ಸಮಸ್ಯೆಯಾಗಿ ಕಾಡಲು ಈ ರೀತಿಯ ಆಹಾರ ಕ್ರಮ ಕೂಡ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ.

ಇದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣ ಅಗತ್ಯದಷ್ಟು ಉತ್ಪತ್ತಿಯಾಗುವುದಿಲ್ಲ. ಅಂತೆಯೇ ಅದು ರಕ್ತದಲ್ಲಿ ಸಕ್ಕರೆ ಅಂಶವನ್ನೂ ಹೆಚ್ಚಿಸುತ್ತದೆ. ಇದರಿಂದ ದೇಹದ ಅಂಗಾಂಗಗಳೂ ಭಾದೆಗೊಳಗಾಗುತ್ತವೆ. ಮೂತ್ರಪಿಂಡ ವೈಫಲ್ಯಕ್ಕೂ ಇವು ಕಾರಣವಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಹಸಿದಾಗ ನಿರ್ಧರಿಸಬೇಡಿ

ಹಸಿವು ಮನುಷ್ಯನಿಗೆ ಬದುಕಿನ ಪಾಠ ಕಲಿಸುತ್ತದೆ ಎಂದು ಅನುಭವಿಗಳು ಹೇಳುವುದನ್ನು ಆಗಾಗ ಕೇಳಿರುತ್ತೇವೆ ಸರಿ, ಹಾಗೆಂದು ಹಸಿದ ಹೊಟ್ಟೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಲಂಡನ್ನಿನ ಸಂಶೋಧಕರು ಸಲಹೆ ನೀಡಿದ್ದಾರೆ.
ಸಂಶೋಧಕರು ಹೇಳುವುದೇನೆಂದರೆ, ಹಸಿವಿನ ಸಂದರ್ಭದ ನಿರ್ಣಯ ತಪ್ಪಾಗಬಹುದು. ಅದು ನಿರ್ಧರಿಸುವ ಉದ್ದೇಶದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು, ಸಹಜವಾಗಿ ಉದ್ವೇಗಕ್ಕೂ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅವರು ಹೇಳಿದ್ದಾರೆ. ಹಸಿದ ಹೊತ್ತಿನಲ್ಲಿ ಮೆದುಳು ಯೋಚನೆಯನ್ನು ಮಾಡದೇ ನಿರ್ಣಯಿಸುತ್ತದೆ. ತರ್ಕ ಬದ್ಧವಾಗಿ ನಿರ್ಧಾರ ಆಗ ಸಾಧ್ಯವಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here