Home ಕ್ಲಾಸಿಪೈಡ್ ಅಂಗೈಯಲ್ಲೇ ಭೂಕಂಪ ಮಾಹಿತಿ…!

ಅಂಗೈಯಲ್ಲೇ ಭೂಕಂಪ ಮಾಹಿತಿ…!

37
0
SHARE

ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ ಮತ್ತಿತರ ಪ್ರಾಕೃತಿಕ ವಿಕೋಪಗಳ ಕುರಿತು ಮೊದಲೇ ಮಾಹಿತಿ ನೀಡುವ ವ್ಯವಸ್ಥೆ ನಮ್ಮಲ್ಲಿದೆ. ಹೀಗೆಯೇ ಭೂಕಂಪದ ಬಗ್ಗೆಯೂ ಮುನ್ಸೂಚನೆ ದೊರೆಯುವಂತಿದ್ದರೆ… ಸಾವಿರಾರು ಜನರ ಪ್ರಾಣ ಉಳಿಸಬಹುದು. ಹೌದು, ಈಗ ಭೂಮಿ ಕಂಪನಿಸುವ ಬಗ್ಗೆಯೂ ಮೊದಲೇ ಮಾಹಿತಿ ಪಡೆಯಬಹುದು. ಇದಕ್ಕೆ ವಿಜ್ಞಾನಿಗಳ, ಉಪಗ್ರಹಗಳ ಮೊರೆ ಹೋಗಬೇಕಾಗಿಯೂ ಇಲ್ಲ. ನಮ್ಮ ಬಳಿ ಇರುವ ಸ್ಮಾರ್ಟ್ ಫೋನ್ ಸಾಕು! ಭೂಕಂಪದ ಮುನ್ಸೂಚನೆ ನೀಡಬಲ್ಲ ಆ್ಯಪೊಂದನ್ನು ಕ್ಯಾಲೊಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಈ ಆ್ಯಪ್ಗೆ ‘ಮೈಶೇಕ್’ ಎಂದು ಹೆಸರಿಡಲಾಗಿದೆ. ಇದರಲ್ಲಿ ಬಳಸಲಾಗಿರುವ ಹೊಸ ತಂತ್ರಜ್ಞಾನದಲ್ಲಿ ಕಂಪನಮಾಪಕ ಅಳವಡಿಸಲಾಗಿದ್ದು, ದೇಶದ ಮೂಲೆ ಮೂಲೆಯಲ್ಲಿರುವ ಜನರಿಗೆ ಆ್ಯಪ್ ಕ್ಷಣಮಾತ್ರದಲ್ಲಿ ಮಾಹಿತಿ ರವಾನಿಸಬಲ್ಲದು. ಕೆಲವೊಂದು ಬಾರಿ ಸಣ್ಣ ಪ್ರಮಾಣದ ಭೂಕಂಪಗಳಿಂದ ಯಾವುದೇ ಅನಾಹುತವಿರುವುದಿಲ್ಲ ಎಂಬ ಮಾಹಿತಿಯನ್ನೂ ಆ್ಯಪ್ ನೀಡುತ್ತದೆ.

ಮೈಶೇಕ್ ಡೌನ್ಲೋಡ್ ಮಾಡೋದು ಹೇಗೆ? ಆ್ಯಂಡ್ರಾಯ್ಡ್ ಮೊಬೈಲ್ ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಉಚಿತವಾಗಿ ಮೈಶೇಕ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಭೂಕಂಪ ಸಂಭವಿಸುವ ನೇಪಾಳ, ಪೆರು, ಪಾಕಿಸ್ತಾನ, ಇರಾನ್ನಲ್ಲಿ ಹೊಸ ವ್ಯವಸ್ಥೆಯನ್ನು ಆರಂಭಿಕವಾಗಿ ಪರಿಚಯಿಸಲಾಗಿದೆ. ಭಾರತದಲ್ಲೂ ಈ ಆ್ಯಪ್ ನ ಡೌನ್ ಲೋಡ್ ಮಾಡಿಕೊಳ್ಳಬಹುದು.

LEAVE A REPLY

Please enter your comment!
Please enter your name here