Home ಕ್ಲಾಸಿಪೈಡ್ ಪಾಲಿಗ್ರಾಫ್ ಎಂದರೇನು?

ಪಾಲಿಗ್ರಾಫ್ ಎಂದರೇನು?

76
0
SHARE

‘ಪಾಲಿಗ್ರಾಫ್’ ಅನ್ನು ಸುಳ್ಳು ಶೋಧಕ ಯಂತ್ರ ಎಂದೂ ಕರೆಯುತ್ತಾರೆ. ಈ ಯಂತ್ರದ ಸಹಾಯದಿಂದ ಮನುಷ್ಯ ನಿಜ ಹೇಳುತ್ತಿದ್ದಾನೊ ಎಂಬುದನ್ನು ಕಂಡು ಹಿಡಿಯಬಹುದು. ಪಾಲಿಗ್ರಾಫ್ ಕೊಡುವ ಫಲಿತಾಂಶ ಯಾವಾಗಲೂ ನಿಖರವಾಗಿರುತ್ತದೆ. ಎನ್ನಲಾಗದು ಆದರೂ ಸಾಮಾನ್ಯವಾಗಿ ಅದನ್ನು ಅಪರಾಧಗಳ ಅಪಾದನೆ ಹೊತ್ತಿರುವವರ ವಿಚಾರಣೆಗೆ ಉಪಯೋಗಿಸುತ್ತಾರೆ. ಕೇಳಿದ ಪ್ರಶ್ನೆಗಳಿಗೆ. ಉತ್ತರ ಕೊಡುತ್ತಿರುವ ಮನುಷ್ಯ ಸುಳ್ಳು ಹೇಳುತ್ತಿರಬಹುದೆ ಎಂಬುದನ್ನು ಪಾಲಿಗ್ರಾಫ್ ನೆರವಿನಿಂದ ಪರಿಶೀಲಿಸಲಾಗುತ್ತದೆ. ಸುಳ್ಳು ಹೇಳುವಾಗ ಬಹುತೇಕ ಮನುಷ್ಯನ ಮನಸ್ಸಿನ ಭಾವನೆಗಳಲ್ಲಿ ಬದಲಾವಣೆ ಉಂಟಾಗುತ್ತದೆ. ಎಂಬುದು ವಿಜ್ಞಾನಿಗಳು ಅಭಿಪ್ರಾಯ.

ಈ ಬದಲಾವಣೆಗಳು ಅವರ ರಕ್ತದ ಒತ್ತಡ, ಹೃದಯ ಬಡಿತ, ಉಸಿರಾಟದ ಗತಿ ಹಾಗೂ ಚರ್ಮದ ಸಂವೇದನೆಗಳಂತಹ ದೈಹಿಕ ಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ. ಈ ಶಾರೀರಿಕ ಬದಲಾವಣೆಗಳನ್ನು ಪಾಲಿಗ್ರಾಫ್ ಅಳೆದು, ಮನಷ್ಯ ಸುಳ್ಳು ಹೇಳುತ್ತಿದ್ದಾನೋ ಇಲ್ಲವೋ ಎಂಬುದನ್ನು ಸೂಚಿಸುತ್ತದೆ. ಒಂದು ವಿಷಯ ಮರೆಯಬಾರದು ಸರಾಗವಾಗಿ ಸುಳ್ಳ ಹೇಳುವಾಗಲೂ ಅತಂಕಕ್ಕೆ ಒಳಪಡುವವರೂ ಇದ್ದಾರೆ.

ಹೀಗಾಗಿ ಪಾಲಿಗ್ರಾಫ್ ಹೇಳಿಕೆಗಳನ್ನು ಪುರಾವೆಯ ರೀತಿ ನ್ಯಾಯಾಲಯಗಳು ಸಾಮಾನ್ಯವಾಗಿ ಪರಿಗಣಿಸುವುದಿಲ್ಲ. ಆದರೆ ಬಂಧಿತ ವ್ಯಕ್ತಿಗಳ ಪಾಲಿಗ್ರಾಫ್ ವಿಚಾರಣೆಗಳಿಂದ ಪೊಲೀಸರ ತನಿಖೆಗಳಿಗೆ ಸಹಾಯವಾಗುತ್ತದೆ.
ಅಮೆರಿಕದಲ್ಲಿ 1930ರ ದಶಕದಲ್ಲಿ ಪಾಲಿಗ್ರಾಫ್ ಪರೀಕ್ಷೆಗಳು ಬಳಕೆಗೆ ಬಂದವು, ಉದ್ಯೋಗ ಕೇಳಿ ಬರುವ ಅಭ್ಯರ್ಥಿಗಳ ಸಂದರ್ಶನ ಮಾಡುವಾಗ  ಪಾಲಿಗ್ರಾಫ್ಗಳು  ಹಲವು ಅಮೇರಿಕನ್ ಖಾಸಗಿ ಕಂಪೆನಿಗಳು ಬಳಸುತ್ತಿದ್ದವು ಈ ಕ್ರಮವನ್ನು 1988ರಲ್ಲಿ ನಿಷೇಧಿಸಲಾಯಿತು.

LEAVE A REPLY

Please enter your comment!
Please enter your name here