Home ಕ್ಲಾಸಿಪೈಡ್ “ಐದು ರೂಪಾಯಿ ಸಂಪಾದಿಸುತ್ತಿದ್ದ ಮಂಜುಳಾ ಈಗ 60 ಲಕ್ಷ ರೂಪಾಯಿ ವಹಿವಾಟು ನಡೆಸುವ ಮುಖ್ಯಸ್ಥೆಯಾಗಿದ್ದು ಹೇಗೆ”?

“ಐದು ರೂಪಾಯಿ ಸಂಪಾದಿಸುತ್ತಿದ್ದ ಮಂಜುಳಾ ಈಗ 60 ಲಕ್ಷ ರೂಪಾಯಿ ವಹಿವಾಟು ನಡೆಸುವ ಮುಖ್ಯಸ್ಥೆಯಾಗಿದ್ದು ಹೇಗೆ”?

60
0
SHARE

ಮುಖ್ಯಸ್ಥೆಯಾಗಿದ್ದು ಹೇಗೆ”?

ನಾವು ಮಾಡುವ ಕೆಲಸದಲ್ಲಿ ಶ್ರದ್ಥೆಯಿದ್ದರೆ, ಗುರಿಯೂ ಒಂದೇ ಯಾಗಿದ್ದರೆ ಯಾವುದೂ ಅಸಾಧ್ಯವಲ್ಲ, ನಾವು ಹಿಡಿದ ಕೆಲಸವನ್ನು ಶ್ರಮ ತಾಳ್ಮೆ ಕೂಡ ಅವಶ್ಯಕ. ಅಹಮದಾಬಾದ್ ಮೂಲದ ಮಹಿಳೆ ಮಂಜುಳಾ ವಗೇಲಾ ಒಬ್ಬರು ಉತ್ತಮ ಉದಾಹರಣೆಯಾಗಿದ್ದಾರೆ. ಇವರು ಓದಿರುವುದು 10ನೇ ತರಗತಿಯಾದರು ನೂರಾರು ಮಹಿಳೆಯರಿಗೆ ಒಳ್ಳೆಯ ದಾರಿದೀಪವಾಗಿದ್ದಾರೆ.

ನಗರದ ನೂರಾರು ಮಹಿಳೆಯರಿಗೆ ಆತ್ಮವಿಶ್ವಾಸವನ್ನು ತುಂಬುತ್ತಿದ್ದಾರೆ. ಬೀದಿ ಕಸ ಗುಡಿಸಿ ದಿನಕ್ಕೆ 5 ರೂಪಾಯಿ ಪಡೆಯುತ್ತದ್ದ ಮಂಜುಳಾ ಇದೀಗ 60 ಲಕ್ಷ ರೂ ವಹಿವಾಟು ನಡೆಸುವ “ಸೌಂದರ್ಯ ಸಫಾಯಿ ಉತ್ಕರ್ಷ ಮಹಿಳಾ ಸೇವಾ ಸಹಕಾರಿ ಮಂಡಲಿ ಲಿಮಿಟೆಟ್” ನ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಜುಳಾ ಅವರಿಗೆ ಆರು ಜನ ಒಡಹುಟ್ಟಿದವರು. ಅವರ ತಂದೆ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಿಸ ಬೇಕಾಗಿದ್ದರಿಂದ ಮಂಜುಳ 10ನೇ ತರಗತಿ ಮುಗಿದ ನಂತರ ಶಾಲೆಯನ್ನು ಬಿಡ ಬೇಕಾಯಿತು. ಕೂಲಿ ಮಾಡುತ್ತಿದವನ ಜೊತೆ ಮಂಜುಳ ಮುಂದಿನ ಜೀವನ ಶುರುವಾಯ್ತಿ.

ಗಂಡನ ಹಣ ಮನೆ ಸಾಗಿಸುವುದಕ್ಕೆ ಸಾಕಾಗುತ್ತಿರಲಿಲ್ಲ. ಗಂಡನ ಹಣ ಮನೆ ಸಾಗಿಸುವುದಕ್ಕೆ ಸಾಕಾಗುತ್ತಿರಲಿಲ್ಲ. ಆದ್ದರಿಂದ ಮನೆಯಿಂದ ಹೊರ ಬಂದು ನಾಲ್ಕು ಕಾಸು ಸಂಪಾದಿಸುವುದಕ್ಕೆ ನಿರ್ಧಾರಿಸಿದಳು ದಿನನಿತ್ಯ ಬೀದಿಗಳ ಕಸಗುಡಿಸಿದರೂ ಮಂಜುಳಾನ ಕೈಗೆ ಬರೀ ಐದು ರೂಪಾಯಿ ಮಾತ್ರ ಸಿಗುತ್ತಿತ್ತು. ಯಾರದೊ ಸಹಾಯದ ಮೇಲೆ ಮಂಜುಳಾ ಇಲ್ಲಾಬೆನೆ ಭಟ್ ಸ್ವಯಂ ಸೇವಾ ಮಹಿಳಾ ಅಸೋಸಿಯೇಷನ್ ಸದಸ್ಯರಾದರು ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುವ ಈ ಸಂಸ್ಥೆಯಲ್ಲಿ ಮಹಿಳೆಯರ ಸಾಮಥ್ರ್ಯಕ್ಕೆ ತಕ್ಕಂತೆ ಮಂಡಳಿಗಳನ್ನು ನಿರ್ಮಿಸಿದರು.

1981 ರಲ್ಲಿ ಪ್ರಾರಂಭವಾದ ಸೌಂದರ್ಯ ಸಫಾಯಿ ಉತ್ಕರ್ಷ ಮಹಿಳಾ ಸೇವಾ ಸಹಕಾರಿ ಮಂಡಳಿ ಲಿಮಿಟೆಡ್ನಲ್ಲಿ ಮಂಜುಳಾರವರಿಗೆ ಸದಸ್ಯತ್ವ ಕೊಡಲಾಯ್ತಿ. ಈ ಮಂಡಳಿಯು ಸರ್ಕಾರೇತರ ಹಾಗೂ ಸರ್ಕಾರಿ ಕಛೇರಿಗಳ ಸ್ವಚ್ಛತಾ ಕಾರ್ಯವನ್ನು ಮುಂದುವರಿಸುತ್ತಿತ್ತು. ಮಂಜುಳಾರವರು ಮೊದಲ ಆರಿ ಕಸ ಶುದ್ದ ಮಾಡಿದ ಸ್ಥಳ ಅಹಮದಾಬಾದ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಕೇಂದ್ರ.

ದಿನನಿತ್ಯ ಅವರು ಅಲ್ಲಿ ಮೂರು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಪ್ರತಿ ತಿಂಗಳು 75 ರೂಪಾಯಿಗಳು ಮಾತ್ರ ಸಂಭಾವನೆಯನ್ನು ಪಡೆಯುತ್ತಿದ್ದರು ಬಿಡುವಿನ ಸಮಯದಲ್ಲಿ ಅವರು ಬೇರೆ ಕೆಲಸ ಮಾಡುತ್ತಿದ್ದರು. ಇತರರನ್ನು ತಮ್ಮ ಜೋತೆ ಸೇರಿಸಿಕೊಂಡು ಕಾರ್ಯ ಮುಂದುವರಿಸಿದರು 30 ರಿಂದ 35 ಮಹಿಳೆಯರಿಂದ ಪ್ರಾರಂಭವಾದ ಈ ಮಂಡಲಿ ಈಗ ಸುಮಾರು 400 ರಿಂದ 450 ಮಹಿಳೆಯರಿಗೆ ಉದ್ಯೋಗ ನೀಡಿದೆ.

ಮಂಜುಳರವರ ಶಿಸ್ತಿನ ಕೆಲಸವನ್ನು ಮನಗಾಣಿಸಿ ಮಂಡಳಿಯು 15 ವರ್ಷಗಳ ಹಿಂದೆ ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಿತು. ಬಡ ಮಹಿಳೆಯರು ನೆಮ್ಮದಿಯಿಂದ ಊಟ ಮಾಡಬೇಕು ಇಂದು ಮಂಜುಳರವರ ಹಾರೈಕೆಯಾಗಿದೆ. ಬಡ ಮಹಿಳೆಯರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಕಾರ್ಯ ಮುಂದುವರಿಸಿದರು. ಇವರ ಮೇಲ್ವಿಚಾರಣೆಯಲ್ಲಿ ಅಹಮದಾಬಾದ್ನ 45 ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಶಾಲೆಗಳು, ಕಾಂಪ್ಲೆಕ್ಸ್, ಸರ್ಕಾರಿ ಕಟ್ಟಡ, ಖಾಸಗಿ ಕಟ್ಟಡ, ಶಾಪಿಂಗ್ ಕಾಂಪ್ಲೆಕ್ಸ್ಗಳು ಸೇರಿವೆ. ಗುತ್ತಿಗೆ ಪಡೆಯುವುದರಿಂದ ಇಡೀದು ಟಿಂಡರ್ ಸಿದ್ಧ ಪಡಿಸುವುದರವರೆಗೂ ಎಲ್ಲ ಕೆಲಸವನ್ನು ಮಂಜುಳ ಅವರೆ ಮಾಡುತ್ತಾರೆ.

ಇವರ ಈ ಪ್ರಯತ್ನದಿಂದ ಸಂಘಟನೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಜೀವವಿಮೆ ಪಡೆಯಲು ಮಹಿಳೆಯರು ಪ್ರಕಾರ, ಜೀವವಿಮೆ ಪಡೆಯಲು ಮಹಿಳೆಯರು ಪ್ರತಿವರ್ಷ 400 ರೂ ತುಂಬಬೇಕು ಅವರಿಗೆ 1ಲಕ್ಷ ರೂ ಜೀವವಿಮೆ ದೊರೆಯತ್ತದೆ.
ಪಿಂಚಣಿಗಾಗಿ ಪ್ರತಿ ತಿಂಗಳು ಮಹಿಳೆಯರಿಂದ 50 ರೂಪಾಯಿ ಪಡೆಯಲಾಗುತ್ತದೆ. ಮಂಡಳಿಯು ಕೂಡ 50 ರೂಗಳನ್ನು ತೆಗೆದಿಡುತ್ತದೆ. ಒಟ್ಟು ಪ್ರತಿ ತಿಂಗಳು 100 ರೂಗಳನ್ನು ಕೆಲಸಗಾರರ ಪಿಂಚಣಿ ಖಾತೆಗೆ ಜಮಾ ಮಾಡುತ್ತದೆ 60 ವರ್ಷದ ನಂತ ಮಹಿಳೆಯರು ಎಷ್ಟು ವರ್ಷ ಕೆಲಸ ಮಾಡಿದ್ದಾರೆ ಎಂಬುರ ಮೇಲೆ ಪಿಂಚಣಿ ನೀಡಲಾಗುವುದ ಪ್ರತಿ ವರ್ಷ ಮಂಡಳಿಯು ಉದ್ಯೋಗಿಗಳಿಗೆ ಲಾಭದ ಪಾಲು ನೀಡುತ್ತದೆ.

ಇಂದಿನ ವಹಿವಾಟು 60 ಲಕ್ಷ ರೂಪಾಯಿ.ಮುಂದಿನ ವರ್ಷ 1 ಕೋಟಿ ತಲುಪುವ ಉದ್ದೇಶವನ್ನು ಮಂಜುಳಾರವರು ಈ ಯೋಜನೆಯಗುರಿಯನ್ನು ನಂತರ ಸೂರತ್ ಹಾಗೂ ಬರೋಡಾದಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದರು. ಸೌಂದರ್ಯ ಸಫಾಯಿ ಉತ್ಕರ್ಷ ಮಹಿಳಾ ಸೇವಾ ಸಹಕಾರಿ ಸಂಘ ಲಿಮಿಟೆಡ್ನ್ಲ್ಲಿ ಸುಮಾರು 30 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಸಾಧ್ಯದಲ್ಲಿ ಮಾತ್ರ ಅಹಮದಾಬಾದ್ನಲ್ಲಿ ಈ ಸಂಸ್ಥೆ ಕಾರ್ಯವಹಿಸುತ್ತಿದೆ.

ಗುಜರಾತ್ನ ಇತರೆಡೆ ಕಾರ್ಯನಿರ್ವಹಿಸುವ ಭರವಸೆಯನ್ನು ಹೊಂದಿದೆ ಈ ಸಂಘಟನೆ ನಮ್ಮಗೆಲ್ಲವನ್ನು ನೀಡಿದೆ. ಹಾಗೂ ನನ್ನ ಮತ್ತು ನನ್ನ ಸಹೋದರಿಯರಿಗೆ ದಾರಿ ದೀಪವಾಗಿದೆ. ಮಂಡಳಿಯ ಅಭಿವೃದ್ಧಯೇ ನಮ್ಮೆಲ್ಲರ ಅಭಿವೃದ್ಧಿ ಎಂದವರು ಮಂಜುಳಾ ಯಾವುದೇ ಒಂದು ಸಂಘಟನೆಯು ಬೆಳೆಯ ಬೇಕಾದರೆ ಅಲ್ಲಿನ ಕೆಲಸಗಾರರ ಪತ್ರ ಬಹಳ ಮುಖ್ಯವಾಗಿದೆ ಎಂದು ಹೇಳುತ್ತಾ ಮಂಜುಳಾರವರು ಮಾತು ಮುಗಿಸಿದರು.

LEAVE A REPLY

Please enter your comment!
Please enter your name here