Home ಕ್ಲಾಸಿಪೈಡ್ “ಕೂದಲಿನ ಸೌಂದರ್ಯದ ರಹಸ್ಯ ಮೊಟ್ಟೆಯಲ್ಲಿ ಅಡಗಿದೆ”

“ಕೂದಲಿನ ಸೌಂದರ್ಯದ ರಹಸ್ಯ ಮೊಟ್ಟೆಯಲ್ಲಿ ಅಡಗಿದೆ”

45
0
SHARE

ಕೇಶರಾಶಿಯ ಆರೈಕೆಗೆ ಸಂಬಂಧಿಸಿದ ಹೇರ್ ಪ್ಯಾಕ್ಗಳ ವಿಚಾರಕ್ಕೆ ಬಂದಾಗ ತಟ್ಟನೆ ಹೊಳೆಯುವ ಅತ್ಯುತ್ತಮವಾದ ಒಂದು ಹೇರ್ ಪ್ಯಾಕ್ ಯಾವುದೆಂದರೆ ಅದು ಮೊಟ್ಟೆಯ ಹೇರ್ ಪ್ಯಾಕ್. ಅನೇಕ ಜೀವಸತ್ವಗಳು ಹಾಗೂ ವಿವಿಧ ವರ್ಗಗಳಿಗೆ ಸೇರಿದ ಖನಿಜಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆಯು ಷೋಷಕಾಂಶಗಳ ಒಂದು ಉಗ್ರಾಣವೇ ಅಗಿದೆ.

ಮೊಟ್ಟೆಯಲ್ಲಿರುವ ಪ್ರೋಟೀನ್ನ ಗುಣಮಟ್ಟವು ಅತ್ಯುತ್ತಮವಾದುದಾಗಿದ್ದು, ಶರೀರಕ್ಕೆ ನಾನಾ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಮೊಟ್ಟೆಯನ್ನು ಸೇವಿಸಿದಲ್ಲಿ, ಮೊಟ್ಟೆಯು ಸ್ವತಃ ಒಂದು ಪರಿಪೂರ್ಣವಾದ ಭೋಜನಕ್ಕೆ ಸಮಾನವಾದುದಾಗಿರುತ್ತದೆ. ಅದೇ ಮೊಟ್ಟೆಯನ್ನು ಕೇಶರಾಶಿಯ ಆರೈಕೆಗೆ ಒಂದು ಹೇರ್ ಪ್ಯಾಕ್ನ್ ರೂಪದಲ್ಲಿ ಬಳಸಿಕೊಂಡಲ್ಲಿ, ಕೇಶರಾಶಿಯಲ್ಲಿರಬಹುದಾದ, ಅದರಲ್ಲೂ ವಿಶೇಷವಾಗಿ ಶುಷ್ಕ ಕೇಶರಾಶಿಯಲ್ಲಿರಬಹುದಾದ ಸಿಕ್ಕುಗಳನ್ನು ನಿವಾರಿಸುವಲ್ಲಿ ಅದ್ಭತವನ್ನೇ ಮಾಡಬಲ್ಲದು.

ಕೇಶರಾಶಿಯ ಪಾಲಿಗೆ ಮೊಟ್ಟೆಯು ವರದಾನದಂತಿದೆ ಎಂದಾದಲ್ಲಿ, ಆ ಮೊಟ್ಟೆಯಲ್ಲಿ ಅಂತಹ ವಿಶೇಷವಾದದ್ದೇನಿರಬಹುದು? ಕೇಶರಾಶಿಯ ವಿಚಾರದಲ್ಲಿ ಮೊಟ್ಟೆಯು ಅಷ್ಟೆಲ್ಲಾ ಪ್ರಯೋಜನಕ್ಕೆ ಬರುವಂತಾಗಲು ಕಾರಣವೇನೆಂದರೆ, ಅದು ಮೊಟ್ಟೆಯಲ್ಲಿರುವ ಪ್ರೋಟೀನ್ನ ಅಂಶ. ಮೊಟ್ಟೆಯಲ್ಲಿರುವ ಪ್ರೋಟಿನ್ನ ಅಂಶವು ಕೂದಲುಗಳ ಬೇರುಗಳನ್ನು ಶಕ್ತಿಯುತಗೊಳಿಸುವುದರ ಮೂಲಕ ನಿಮಗೆ ಬಲಶಾಲಿಯಾದ ಹಾಗೂ ಆರೋಗ್ಯದಾಯಕವಾದ, ಸೊಂಪಾದ ಕೇಶರಾಶಿಯನ್ನು ದಯಪಾಲಿಸುತ್ತದೆ.

ಮೊಟ್ಟೆಯ ಹೇರ್ ಪ್ಯಾಕ್ ನ ಹೊಳೆಯುವ ಕೇಶರಾಶಿಗೆ ಲೇಪಿಸಿದಾಗ, ಮೊಟ್ಟೆಯು ಅಂತಹ ಕೇಶರಾಶಿಗೆ ನೈಸರ್ಗಿಕವಾದ ಕಂಡೀಶನ ಆರೈಕೆಯನ್ನು ಒದಗಿಸುತ್ತದೆ. ಮೊಟ್ಟೆಯ ಹೇರ್ ಪ್ಯಾಕ್ನಲ್ಲಿ ಮೊಟ್ಟೆಯನ್ನು ಮೂಲಭೂತ ಘಟಕವನ್ನಾಗಿ ಬಳಸಿಕೊಳ್ಳುವುದರ ಜೊತೆಗೆ, ನೀವು ಅಡುಗೆ ಕೋಣೆಯಲ್ಲಿಯೇ ಲಭ್ಯವಿರುವ ಮತ್ತಿತರ ತರಹೇವಾರಿ ಘಟಕಗಳನ್ನು ಸೇರಿಸಿಕೊಳ್ಳಬಹುದು.

ಮೊಟ್ಟೆಯ ಹೇರ್ ಪ್ಯಾಕ್ ಅನ್ನು ಬಳಸಿಕೊಂಡು ನೀವು ಕೈಗೊಳ್ಳುವ ಪ್ರತಿಯೊಂದು ಕೇಶ ಪ್ರಕ್ಷಾಲನವೂ ಕೂಡ ನಿಮಗೆ ವಿಸ್ಮಯಕರ ಫಲಿತಾಂಶವನ್ನು ನೀಡುತ್ತದೆ ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ, ರಾಸಾಯನಿಕಗಳನ್ನೊಳಗೊಂಡ, ಹಾಗೂ ಅತ್ಯಂತ ದುಬಾರಿಯಾಗಿರುವ ಕಂಡಿಶನರ್ಗಳ ಅವಶ್ಯಕತೆಯು ನಿಮಗೆ ಮುಂದೆಂದಿಗೂ ಬರಲಾರದೆಂಬ ಸತ್ಯವು ನಿಮಗೆ ಬಹಳ ಬೇಗನೇ ಮನವರಿಕೆಯಾಗುತ್ತದೆ.

ಹಾಗಿದ್ದಲ್ಲಿ, ಈಗ ಕೇಶರಾಶಿಯ ವಿಚಾರದಲ್ಲಿ ಮೊಟ್ಟೆಯಿಂದಾಗುವ ಪ್ರಯೋಜನಗಳನ್ನು ಕ್ರೂಢೀಕರಿಸಿ ಹೇಳುವುದಾದರೆ, ಮೊಟ್ಟೆಯು ಬೇರಿನಿಂದಲೇ ಆರಂಭಿಸಿ ಬಲಯುತವಾದ ಕೂದಲನ್ನು ನಿಮಗೆ ದಯಪಾಲಿಸುತ್ತದೆ ಹಾಗೂ ಕೇಶರಾಶಿಯ ಗುಣಮಟ್ಟವನ್ನು ಸುಧಾರಿಸುವುದರ ಮೂಲಕ ಹೊಳೆಯುವ, ಸೊಂಪಾದ, ದಟ್ಟ ಕೇಶರಾಶಿಯು ನಿಮ್ಮದಾಗುವಂತೆ ಮಾಡುತ್ತದೆ.

ಮೊಟ್ಟೆಯಿಂದ ಕೂದಲುಗಳಿಗೆ ಇಷ್ಟೆಲ್ಲಾ ಪ್ರಯೋಜನಗಳಿರುವಾಗ, ಆರೋಗ್ಯಕರ ಕೇಶರಾಶಿಯನ್ನು ಪಡೆಯುವಂತಾಗಲು ನೀವೇಕೆ ಮೊಟ್ಟೆಯ ಪ್ಯಾಕ್ ಅನ್ನು ಬಳಸಬಾರದು? ಅತ್ಯಂತ ಸರಳವಾದ ಐದು ಹೇರ್ ಪ್ಯಾಕ್ ಕುರಿತು ನಾವಿಲ್ಲಿ ಪ್ರಸ್ತಾಪಿವಿಸಿದ್ದು, ಇವುಗಳನ್ನು ನೀವು ಕ್ಷಣಾರ್ಧದಲ್ಲಿ ಸಿದ್ಧಗೊಳಿಸಬಹುದು ಹಾಗೂ ಇವುಗಳನ್ನು ಬಳಸಿಕೊಳ್ಳುವುದರ ಮೂಲಕ ದೀರ್ಘಕಾಲ ಬಾಳಿಕೆ ಬರುವ, ಸೌಂದರ್ಯದಿಂದ ಕಂಗೊಳಿಸುವ, ಹಾಗೂ ನಿಮ್ಮಲ್ಲಿ ಆತ್ಮವಿಶ್ವಾವು ಮರುಕಳಿಸುವಂತೆ ಮಾಡುವ ಕಾಂತಿಯುಕ್ತ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಹೇರ್ ಪ್ಯಾಕ್ಗಳ ಪೈಕಿ ಹೆಚ್ಚಿನವು ಮೊಟ್ಟೆ ಹಾಗೂ ಆಲಿವ್ ಎಣ್ಣೆಗಳ ಮಿಶ್ರಣದ ಪ್ಯಾಕ್ಗಳಾಗಿದ್ದು, ಕೇಶರಾಶಿಗಳ ಬೆಳವಣಿಗೆಗೆ ಹಾಗೂ ಸೌಂದರ್ಯವನ್ನು ನೀಡಬಲ್ಲವುಗಳಾಗಿವೆ.

ಮೊಟ್ಟೆ, ಲಿಂಬೆ, ಹಾಗೂ ಆಲಿವ್ ಎಣ್ಣೆ
ಮೊಟ್ಟೆಯನ್ನು ತೆಗೆದುಕೊಂಡು, ಅದಕ್ಕೆ ಅರ್ಧ ಹೊಳಿನಷ್ಟು ಲಿಂಬೆಯ ರಸವನ್ನು ಬೆರೆಸಿರಿ. ಇವೆರಡನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈಗ ಈ ಮಿಶ್ರಣಕ್ಕೆ ಎರಡು ಚಮಚಗಳಷ್ಟು ಆಲಿವ್ ಎಣ್ಣೆಯನ್ನು ಬೆರೆಸಿ ಪುನಃ ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಇವೆಲ್ಲವೂ ಪರಸ್ಪರ ಚೆನ್ನಾಗಿ ಬೆರೆತುಕೊಂಡ ಬಳಿಕ, ಮಿಶ್ರಣವನ್ನು ಕೇಶರಾಶಿಗೆ ಲೇಪಿಸಿಕೊಳ್ಳಿರಿ. ನೆತ್ತಿಯನ್ನೂ ಕೂದಲು ಎಳೆಗಳನ್ನೂ ಸಮನಾಗಿ ಆವರಿಸಿಕೊಳ್ಳುವಂತೆ ಹಚ್ಚಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿರಿ. ಹಚ್ಚಿ ಅರ್ಧಘಂಟೆಯ ಕಾಲ ಅದನ್ನು ಹಾಗೆಯೇ ಇಟ್ಟುಕೊಂಡು. ಬಳಿಕ ತಣ್ಣೀರಿನಿಂದ ಕೇಶರಾಶಿಯನ್ನು ತೊಳೆದುಕೊಂಡು ನಂತರ ಶ್ಯಾಂಪೂವಿನಿಂದ ತೊಳೆಯಿರಿ.

ಕಡ್ಲೆಹಿಟ್ಟು, ಮೊಟ್ಟೆ ಹಾಗೂ ಆಲಿವ್ ಎಣ್ಣೆ
ಮೊತ್ತೊಮ್ಮೆ ಇದೊಂದು ಪ್ರೋಟಿನ್ ಭರಿತ ಹೇರ್ ಪ್ಯಾಕ್  ಆಗಿದೆ. ಮೊಟ್ಟೆ ನಿಮ್ಮ ಕೇಶರಾಶಿಗೆ ಬಲವನ್ನು ನೀಡುವುದಕ್ಕಾಗಿ ಮಾತ್ರವಲ್ಲದೇ ನೈಸರ್ಗಿಕವಾದ ಕಂಡಿಶನರ್ ಸಹ ಒದಗಿಸುವುದಕ್ಕಾಗಿ ಈ ಎರಡು ಸಾಮಗ್ರಿಗಳು ಹೇರ್ ಪ್ಯಾಕ್ನಲ್ಲಿ ಜೊತೆಗೂಡಿವೆ. ಒಂದು ಮೊಟ್ಟೆ, ಒಂದು ಟೇಬಲ್ ಚಮಚದಷ್ಟು ಕಡ್ಲೆಹಿಟ್ಟು, ಹಾಗೂ ಎರಡು ಟೇಬಲ್ ಚಮಚಗಳಷ್ಟು ಆಲಿವ್ ಎಣ್ಣೆ-ಸಮರೂಪದಲ್ಲಿ ಕಾಣಿಸುವಂತ ಪ್ಯಾಕ್ ಅನ್ನು ಸಿದ್ಧಪಡಿಸಿಟ್ಟುಕೊಳ್ಳುವುದಕ್ಕಾಗಿ ಈ ಮೂರನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ.

ಈ ಮಿಶ್ರಣವನ್ನು ಸಮಾನವಾಗಿ ಕೂದಲು ಹಾಗೂ ನೆತ್ತಿಯ ಭಾಗಕ್ಕೆ ಲೇಪಿಸಿಕೊಂಡ ಬಳಿಕ ಅದನ್ನು ಹಾಗೆಯೇ ಒಣಗಲು ಬಿಡಿರಿ. ಕಡ್ಲೆಹಿಟ್ಟು ನಿಮ್ಮ ಕೂದಲು ಎಳೆಗಳಿಗೆ ಸ್ವಲ್ಪ ಅಂಟಿಕೊಳ್ಳಬಹುದು. ಆದರೂ ಕೂಡ, ಸ್ವಲ್ಪ ಹೆಚ್ಚುವರಿಯಾಗಿ ಪ್ರಯತ್ನಿಸಿದಲ್ಲಿ, ಇದನ್ನು ಸುಲಭವಾಗಿ ನಿವಾರಿಸಿ ತೆಗೆಯಬಹುದು.

ಮೊಟ್ಟೆ, ಬಾಳೆಹಣ್ಣಿನ ಉಪಯೋಗ
ಕೇಶರಾಶಿಯ ಪಾಲಿಗೆ ಬಾಳೆಹಣ್ಣು ಒಂದು ಅತ್ಯುತ್ತಮವಾದ ತೇವಕಾರಕವಾಗಿದೆ. ನೀವು ಮಾಡಬೇಕಾದುದಿಷ್ಟೇ.. ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ, ಅದನ್ನು ಒಡೆದ ತತ್ತಿಯ ಒಳಭಾಗದ ಘಟಕದ ಜೊತೆಗೆ ಸೇರಿಸಿ ಬಳಿಕ ಈ ಮಿಶ್ರಣಕ್ಕೆ ಸ್ವಲ್ಪ ಆಲಿವ್ ಎಣ್ಣೆಯನ್ನೂ ಸೇರಿಸಬೇಕು. ಈ ಮೂರೂ ಸಾಮಗ್ರಿಗಳನ್ನೊಳಗೊಂಡ ಈ ಹೇರ್ ಪ್ಯಾಕ್ ನಿಮ್ಮ ಕೇಶರಾಶಿಯನ್ನು ಬಲಯುತಗೊಳಿಸುತ್ತದೆ.

ತೇವಕಾರಕವನ್ನಾಗಿಸುತ್ತದೆ, ಹಾಗೂ ಕೇಶರಾಶಿಯನ್ನು ಶುಭ್ರವಾಗಿರಿಸುತ್ತದೆ. ಬಾಳೆಹಣ್ಣಿನ ತುಣುಕುಗಳು ತುಸು ಹಠಮಾರಿಯಂತೆ ನಿಮ್ಮ ಕೇಶರಾಶಿಯ ಎಳೆಗಳಲ್ಲಿ ಸಿಲುಕಿಕೊಂಡರೂ ಸಹ ಚಿಂತಿಸಬೇಕಾಗಿಲ್ಲ. ಚೆನ್ನಾಗಿ ನೀರಿನಿಂದ ತೊಳೆದುಕೊಂಡಲ್ಲಿ ಅದು ನಿವಾರಣೆಯಾಗುತ್ತದೆ. ತುಸು ಕಷ್ಟವೆಂದೆನಿಸಿದರೂ ಪ್ರಯತ್ನದಿಂದ ಸಿಗುವ ಲಾಭವು ಹೆಚ್ಚು ಮಹತ್ವದ್ದಾಗಿರುತ್ತದೆ.

ಈ ಮೇಲೆ ಪ್ರಸ್ತಾವಿತಗೊಂಡಿರುವ ಪ್ರತಿಯೊಂದು ಪ್ಯಾಕ್ನ ಪ್ರಧಾನ ಘಟಕವು ಮೊಟ್ಟೆಯಾಗಿರುವುದರಿಂದ ಇಲ್ಲಿ ಒಂದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊಟ್ಟೆಯ ಹೇರ್ ಪ್ಯಾಕ್ಗಳನ್ನು ಕೇಶರಾಶಿಯಿಂದ ನಿವಾರಿಸಿಕೊಳ್ಳುವಾಗ ಎಂದೆಂದಿಗೂ ಅತಿಯಾದ ಬೆಚ್ಚಗಿನ ನೀರಿಂದ ಅಥವಾ ಬಿಸಿಯಾದ ನೀರಿನಿಂದ ಕೇಶರಾಶಿಯನ್ನು ತೊಳೆದುಕೊಳ್ಳಬೇಡಿರಿ.

ಹೀಗೆ ಮಾಡಿದಲ್ಲಿ, ನಿಮ್ಮ ಕೇಶರಾಶಿಯಲ್ಲಿ ಮೊಟ್ಟೆಯ ಘಟಕಗಳು ಹಾಗೆಯೇ ಸಿಲುಕಿಕೊಂಡು ಬಿಡುತ್ತದೆ. ಆದ್ದರಿಂದ, ಮೊದಲು ಕೇಶರಾಶಿಯನ್ನು ತಣ್ಣೀರಿನಿಂದ ಶುಭ್ರಗೊಳಿಸಿಕೊಂಡ ಬಳಿಕ ಶ್ಯಾಂಪೂವಿನಿಂದ ಕೇಶರಾಶಿಯನ್ನು ಚೆನ್ನಾಗಿ ತೊಳೆದುಬಿಡಿ. ಸಂತಸದಾಯಕ, ಆರೋಗ್ಯಕರ, ನಳನಳಿಸುವ, ಹಾಗೂ ಗಟ್ಟಿಮುಟ್ಟಾದ ಕೇಶರಾಶಿಯನ್ನು ನೀವು ಪಡೆದುಕೊಳ್ಳುವಂತಾಗಲು ನಿಮಗೆ ನಮ್ಮ ಶುಭ ಹಾರೈಕೆಗಳು.

LEAVE A REPLY

Please enter your comment!
Please enter your name here